ಸಿಂದಗಿ: ಇತ್ತೀಚಿಗೆ ಹುಬ್ಬಳ್ಳಿಯಲ್ಲಿ ನೇಹಾಳನ್ನು ಹತ್ಯೆಗೈದ ವ್ಯಕ್ತಿಯನ್ನು ನಿರ್ದಾಕ್ಷಿಣ್ಯವಾಗಿ ಗಲ್ಲಿಗೇರಿಸಬೇಕು ಎಂದು ಮಹಿಳಾ ಜಾಗರಣ ವೇದಿಕೆಯ ಅಧ್ಯಕ್ಷೆ ಶೈಲಜಾ ಸ್ಥಾವರಮಠ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಬಸವೇಶ್ವರ ವತ್ತದಲ್ಲಿ ನೇಹಾ ಹಿರೇಮಠ ಕೊಲೆಯನ್ನು ಖಂಡಿಸಿ ಮಹಿಳಾ ಜಾಗರಣ ವೇದಿಕೆಯಡಿಯಲ್ಲಿ ವಿವಿಧ ಮಹಿಳಾ ಸಂಘಟನೆಗಳಿಂದ ಮೇಣದ ಬತ್ತಿಯನ್ನು ಉರಿಸಿ ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಗಳು ಮಿತಿ ಮೀರುತ್ತಿವೆ. ಕಾನೂನಿನ ಸುವ್ಯವಸ್ಥೆ ಹದಗೆಟ್ಟಿದೆ ಎಂದು ದೂರಿದರು. ತಪ್ಪಿತಸ್ತನಿಗೆ ಗಲ್ಲಿಗೇರಿಸಿ ನೇಹಾಳ ಸಾವಿಗೆ ನ್ಯಾಯ ಒದಗಿಸಬೇಕು. ವಿಕೃತ ಮನಸ್ಸಿನ ಕ್ರೂರತ್ವ, ಮೃಗುತ್ವವನ್ನು ಮೆರೆಯುತ್ತಿರುವ ಇಂದಿನ ಪೀಳಿಗೆಗಳಿಗೆ ಕಡಿವಾಣ ಹಾಕಲು ಕಾನೂನಿನ ವ್ಯವಸ್ಥೆ ಬದಲಾಗಬೇಕು. ಮತ್ತು ಹತ್ಯೆಗೈದ ಆರೋಪಿಗೆ ಗಲ್ಲಿಗೇರಿಸಿದಾಗ ಮಾತ್ರ ಅವಳ ಆತ್ಮಕ್ಕೆ ಶಾಂತಿ ದೊರಕಲಿದೆ ಎಂದರು.
ಈ ವೇಳೆ ವೀರಶೈವ ಮಹಾಸಭಾದ ಮಹಿಳಾ ಅಧ್ಯಕ್ಷೆ ಮಹಾದೇವಿ ಹಿರೇಮಠ, ಶಂಕುತಲಾ ಹಿರೇಮಠ, ಶ್ಯಾಮಲಾ ಮಂದೇವಾಲ, ರಾಜೇಶ್ವರಿ ಪಾಟೀಲ. ಮೇನಕಾ ಗುಡ್ಡಳ್ಳಿ, ಶೈನಾಬಿ ಮಸಳಿ, ಶೋಭಾ ಚಿಗರಿ, ಶಾರದಾ ಮಂಗಳೂರು, ಶಶಿಕಲಾ ಅಂಗಡಿ, ರೇಣುಕಾ ಮನೂರ, ಬಸಮ್ಮ ಹೋಡ್ಲ್, ವಿಜಯಲಕ್ಷ್ಮಿ ಹೀರೆಮಠ್. ಮಾಹಾದೇವ ಅಂಬಲಿ, ಶಿವುಕುಮಾರ ಬಡಾನೂರ, ಪ್ರಶಾಂತ ಬಿರಾದಾರ ಸೇರಿದಂತೆ ಅನೇಕರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

