ಸಿಂದಗಿ: ಕಾಂಗ್ರೆಸ್ ಪಕ್ಷ ಬಡವರು ಮತ್ತು ದೀನ ದಲಿತರು ಸೇರಿದಂತೆ ಎಲ್ಲ ವರ್ಗಗಳ ಪರವಾಗಿದೆ. ನಾವು ಅಭಿವೃದ್ಧಿ ಕಾರ್ಯಗಳನ್ನು ಮುಂದೆ ಇಟ್ಟುಕೊಂಡು ಪ್ರಚಾರ ಮಾಡುತ್ತಿದ್ದೇವೆ ಎಂದು ಬ್ಲಾಕ್ ಕಾಂಗ್ರೆಸ್ ತಾಲೂಕಾಧ್ಯಕ್ಷ ಸುರೇಶ ಪೂಜಾರ ಹೇಳಿದರು.
ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಾರ್ಯಾಲಯದಲ್ಲಿ ಹಮ್ಮಿಕೊಂಡ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಜಾತಿ, ಕೋಮು, ಧರ್ಮ ಬದಿಗಿಟ್ಟು ಕಾಂಗ್ರೆಸ್ ಅಭಿವೃದ್ಧಿ ಪರವಾಗಿ ಇಂದು ಚುನಾವಣೆ ಎದುರಿಸುತ್ತಿರುವುದು ನಮಗೆ ಸಂತಸವಿದೆ. ಆದರೆ ಬಿಜೆಪಿ ಕೇವಲ ಒಬ್ಬ ವ್ಯಕ್ತಿ ಹಾಗೂ ಧರ್ಮ ಇಟ್ಟುಕೊಂಡು ಚುನಾವಣೆಗೆ ಬಂದಿರುವುದು ಶೋಚನೀಯವಾಗಿದೆ ಎಂದು ವಾಗ್ದಾಳಿ ನಡೆಸಿದರು.
ಮಂಗಳವಾರ ಏ.೨೪ರಂದು ಬೆಳಿಗ್ಗೆ ೧೧ಗಂಟೆಗೆ ಜಿಲ್ಲಾ ನಾಯಕರ ಸಮ್ಮುಖದಲ್ಲಿ ಸಿಂದಗಿಯ ಮಾಂಗಲ್ಯ ಭವನದಲ್ಲಿ ಚುನಾವಣೆ ಪ್ರಚಾರ ಸಭೆ ಜರುಗಲಿದೆ. ಕಾರಣ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು, ನಾಯಕರು ಅಭಿಮಾನಿಗಳು ಆಗಮಿಸಿ ಲೋಕಸಭಾ ಅಭ್ಯರ್ಥಿ ರಾಜು ಆಲಗೂರ ಅವರಿಗೆ ಶಕ್ತಿಯಾಗಿ ನಿಲ್ಲಬೇಕಾಗಿದೆ. ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿಗೋಳಿಸಲು ವಿನಂತಿಸಿದರು.
ಈ ವೇಳೆ ಕಾಂಗ್ರೆಸ್ ವಕ್ತಾರ ರಾಜಶೇಖರ ಕೂಚಬಾಳ ಮಾತನಾಡಿ, ಮೂವತ್ತು ವರ್ಷಗಳ ಕಾಲ ಒಂದೇ ಒಂದು ಪ್ರಶ್ನೆ ಕೇಳದೆ ಜಿಗಜಿಣಗಿಯವರು ತಮ್ಮ ಆಸ್ತಿ ದುಪ್ಪಟ್ಟು ಮಾಡಿಕೊಂಡಿದ್ದಾರೆ ವಿನಃ ಅಭಿವೃದ್ಧಿಗೆ ಪ್ರಾಶಸ್ತ್ಯ ನೀಡಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಘೋಷಿಸಿದ ಸ್ತ್ರೀ ನ್ಯಾಯ ರೂಪದಲ್ಲಿ ಒಂದು ವರುಷಕ್ಕೆ ೧ಲಕ್ಷ ರೂ. ಕುಟುಂಬದ ಮಹಿಳೆಗೆ ನೀಡುವ ಘೋಷಣೆ ಕಾಂಗ್ರೆಸ್ ಮಾಡಿರುವುದು ಭಾರತದ ಪ್ರಜೆಗಳಲ್ಲಿ ನೂತನ ಆಶಾ ಭಾವನೆ ಮೂಡಿಸಿದೆ ಈ ಬಾರಿ ಕಾಂಗ್ರೆಸ್ ಗೆಲುವು ನಿಶ್ಚಿತ ಎಂದರು.
ಇದೇ ಸಂದರ್ಭದಲ್ಲಿ ರಮೇಶಗೌಡ ಬಿರಾದಾರ, ನಿಂಗಣ್ಣ ಬುಳ್ಳಾ, ನೂರಅಹ್ಮದ್ ಅತ್ತಾರ, ಹಾಸಿಂಪೀರ ಆಳಂದ, ಯಂಕನಗೌಡ ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

