ಬಸವನಬಾಗೇವಾಡಿ: ಪಟ್ಟಣದ ಕಾಳಿಕಾದೇವಿ ದೇವಸ್ಥಾನದಲ್ಲಿ ಮಹಾವೀರ ಜಯಂತಿಯಂಗವಾಗಿ ಭಾನುವಾರ ಮಹಾವೀರರ ತೊಟ್ಟಿಲೋತ್ಸವ ಸಂಭ್ರಮ, ಸಡಗರದಿಂದ ಜರುಗಿತು.
ತೊಟ್ಟಿಲೋತ್ಸವಕ್ಕೂ ಮುನ್ನ ಬಾಹುಬಲಿ ದಂಡಾವತಿ ಅವರ ಮನೆಯಿಂದ ಭಗವಾನ್ ಮಹಾವೀರರ ಮೂರ್ತಿಯನ್ನು ವಾದ್ಯಮೇಳ, ವೇದ ಘೋಷಗಳೊಂದಿಗೆ ಮೆರವಣಿಗೆ ಮೂಲಕ ಕಾಳಿಕಾದೇವಿ ದೇವಸ್ಥಾನಕ್ಕೆ ತರಲಾಯಿತು. ಭಗವಾನ್ ಮಹಾವೀರರ ಮೂರ್ತಿಯನ್ನು ತೊಟ್ಟಿಲಲ್ಲಿ ಜೈನ ಸಮಾಜದ ಮಹಿಳೆಯರು ಸಂಪ್ರದಾಯದಂತೆ ಹಾಕಿ ನಾಮಕರಣ ಮಾಡಿ ಭಕ್ತಿಯಿಂದ ಹಾಡಿದರು. ತೊಟ್ಟಿಲೋತ್ಸವದಲ್ಲಿ ಸುರೇಖಾ ಉಪಾಧ್ಯೆ, ಸುನಂದಾ ದಂಡಾವತಿ, ಕಸ್ತೂರಿ ಪಾಕಿ, ಸುಮತಿ ಹೊಸಮನಿ, ಸುನೀತಾ ದಂಡಾವತಿ, ವಿನುತಾ ಪಾಕಿ, ಅರ್ಚನಾ ದಂಡಾವತಿ, ಜನೇಶ್ವರಿ ಉಪಾಧ್ಯೆ, ಲಕ್ಷ್ಮೀ ಹೊಸಮನಿ, ಶೃತಿ ದಂಡಾವತಿ, ರಚನಾ ಹೊಸಮನಿ, ಅರ್ಚನಾ ನೇಜಕರ, ಆರಾಧ್ಯ ಕವಟೇಕರ, ಪ್ರಮೋದಿನಿ ಉಪಾಧ್ಯೆ, ಮುಖಂಡರಾದ ಅಪ್ಪು ದಂಡಾವತಿ, ಬಾಹುಬಲಿ ದಂಡಾವತಿ, ಮಹಾವೀರ ಹೊಸಮನಿ, ಪಾರ್ಶ್ವನಾಥ ಹೊಸಮನಿ, ಅನಂತ ಪಾಕಿ, ಆದಿನಾಥ ಉಪಾಧ್ಯೆ ಸೇರಿದಂತೆ ದಿಂಡವಾರ, ಮನಗೂಳಿ, ವಡವಡಗಿ, ಕೂಡಗಿ, ಬೊಮನಳ್ಳಿ ಗ್ರಾಮದ ಜೈನ ಸಮಾಜ ಬಾಂಧವರು ಇದ್ದರು. ನಂತರ ಜರುಗಿದ ಕಾರ್ಯಕ್ರಮದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಸೃಷ್ಟಿ ಉಪಾಧ್ಯೆ, ಶಿಖರ ಗೊಂಗಡಿ ಅವರನ್ನು ಸನ್ಮಾನಿಸಲಾಯಿತು.
Subscribe to Updates
Get the latest creative news from FooBar about art, design and business.
Related Posts
Add A Comment

