ಖರ್ಗೆ ಆಸ್ತಿಯ ಶೇ.೧೦ ದಾನ ಮಾಡಿದರೂ ಕಲಬುರಗಿ ಜನತೆಗೆ ತಲಾ ರೂ.೧೦ಲಕ್ಷ ನೀಡಬಹುದು
ಅಫಜಲಪುರ: ಈ ಬಾರಿಯ ಚುನಾವಣೆ ಜಾಧವ ಚುನಾವಣೆ ಅಲ್ಲ, ದೇಶದ ಚುನಾವಣೆ. ಮೂರನೇ ಬಾರಿ ಪ್ರಧಾನಿಯಾಗುವ ನಿಟ್ಟಿನಲ್ಲಿ ಬಿಜೆಪಿಗೆ ಮತ ನೀಡಿ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮನವಿ ಮಾಡಿದರು.
ತಾಲೂಕಿನ ಮಾಶಾಳ ಗ್ರಾಮದಲ್ಲಿ ನಡೆದ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡುತ್ತಾ ಡಾ. ಉಮೇಶ ಜಾಧವ ಲೋಕಸಭೆಯಲ್ಲಿ ಹೆಚ್ಚು ಕ್ರಿಯಾಶೀಲರಾಗಿದ್ದಾರೆ ಎಂದ ಅವರು ಮೋದಿ ಬಗ್ಗೆ ಅಪಪ್ರಚಾರ ಮಾಡುವ ಖರ‍್ಗೆ ಅವರು ತಮ್ಮ ಆಸ್ತಿಯಲ್ಲಿ ೧೦% ದಾನ ಮಾಡಿದರೂ ಕೂಡ ಕಲಬುರಗಿ ಜನರಿಗೆ ತಲಾ ಹತ್ತು ಲಕ್ಷ ದಾನ ಮಾಡಬಹುದು ಎಂದರು.
ಅಭ್ಯರ್ಥಿ ಡಾ. ಉಮೇಶ ಜಾಧವ ಮಾತನಾಡುತ್ತಾ, ಕಲಬುರಗಿಗೆ ಮೋದಿ ಕೊಡುಗೆ ಏನು? ಜಾಧವ ಕೊಡುಗೆ ಏನೆಂದು ಕಾಂಗ್ರೆಸ್ ನವರು ಕೇಳುತ್ತಾರೆ. ಅವರಿಗೆ ಕಣ್ಣು ಕಾಣುತ್ತಿಲ್ಲ, ಭಾರತಮಾಲಾ ರಾಷ್ಟ್ರೀಯ ಹೆದ್ದಾರಿ ನರ‍್ಮಾಣ ಆಗುತ್ತಿದೆ. ಸ್ಟೇಷನ್ ಗಾಣಗಾಪೂರ ರೈಲ್ವೆ ನಿಲ್ದಾಣ ರೂ.೩೨ ಕೋಟಿ ವೆಚ್ಚದಲ್ಲಿ ಹೈಟೆಕ್ ಆಗುತ್ತಿದೆ. ನಿಲೂರ ರೈಲ್ವೆ ಅಂಡರಬ್ರೀಜ್ ಅಗಲೀಕರಣ ಮಾಡಿದ್ದೇವೆ. ಐವತ್ತು ವರ‍್ಷಗಳ ಕಾಲ ಅಧಿಕಾರ ಅನುಭವಿಸಿದವರು ಏನೇನು ಮಾಡಿದ್ದಾರೆ? ಕಾಂಗ್ರೆಸ್ ನವರು ತಲೆ ಕೆಡಿಸಲು ಬರುತ್ತಾರೆ, ಅವರ ಮಾತಿಗೆ ಮರುಳಾಗಬೇಡಿ, ನನಗಾಗಿ ಅಲ್ಲ ದೇಶಕ್ಕಾಗಿ, ಮೋದಿಗಾಗಿ ಬಿಜೆಪಿಗೆ ಮತ ನೀಡಿ ಎಂದು ಮನವಿ ಮಾಡಿದರು.
ಮಾಜಿ ಜಿ.ಪಂ ಅಧ್ಯಕ್ಷ ನಿತೀನ್ ಗುತ್ತೇದಾರ, ಜೆಡಿಎಸ್ ರಾಜ್ಯ ಪ್ರಧಾನ ಕಾರ‍್ಯದರ‍್ಶಿ ಶಿವಕುಮಾರ ನಾಟಿಕಾರ ಮಾತನಾಡುತ್ತಾ ಅಫಜಲಪುರ ಮತಕ್ಷೇತ್ರದಿಂದ ಈ ಬಾರಿಯೂ ಬಿಜೆಪಿಗೆ ಹೆಚ್ಚಿನ ಮತಗಳು ಬಂದೇ ಬರುತ್ತವೆ. ಐವತ್ತು ವರ‍್ಷಗಳ ಕಾಲ ರಾಜಕೀಯ ವಿರೋಧಿಗಳಾಗಿದ್ದ ಧುರೀಣರಿಬ್ಬರು ಒಂದಾಗಿದ್ದಾರೆ. ಅವರ ಲೆಕ್ಕಾಚಾರ ಬುಡಮೇಲು ಮಾಡಿ ಉಮೇಶ ಜಾಧವರನ್ನು ಗೆಲ್ಲಿಸಿ ನಮ್ಮ ಶಕ್ತಿ ಏನೆಂದು ತೋರಿಸೋಣ ಎಂದು ಪರೋಕ್ಷವಾಗಿ ತಮ್ಮ ಸಹೋದರ ಮಾಲೀಕಯ್ಯ ಗುತ್ತೇದಾರ ಹಾಗೂ ಶಾಸಕ ಎಂ.ವೈ ಪಾಟೀಲ್ ವಿರುದ್ದ ಹರಿಹಾಯ್ದರು.
ಪ್ರಿಯಾಂಕ ಖರ‍್ಗೆ ಮಾಡಿದ ಮೋಸವನ್ನು ಜನರೆದುರು ಬಿಚ್ಚಿಡುತ್ತೇನೆ. ಖರ‍್ಗೆ ಕುಟುಂಬದಿಂದ ಹಿಂದುಳಿದ ವರ‍್ಗಗಳ ಜನರಿಗಾದ ಮೋಸ ಜನರೆದುರು ಹೇಳುತ್ತೇವೆ. ಅವರ ಮೋಸಕ್ಕೆ ಜನ ಬಲಿಯಾಗಬಾರದು ಬಿಜೆಪಿಗೆ ಮತ ನೀಡಿ ಖರ‍್ಗೆ ಕುಟುಂಬದವರಿಗೆ ತಕ್ಕ ಪಾಠ ಕಲಿಸಬೇಕೆಂದರು.
ಶಿವರಾಜ ಪಾಟೀಲ ರದ್ದೇವಾಡಗಿ, ಅವ್ವಣ್ಣ ಮ್ಯಾಕೇರಿ, ವಿದ್ಯಾಧರ ಮಂಗಳೂರೆ, ವಿಶ್ವನಾಥ ರೇವೂರ ಮಾತನಾಡಿದರು.
ಈ ಸಂದರ‍್ಭದಲ್ಲಿ ಮುಖಂಡರಾದ ಸಿದ್ದಾಜೀ ಪಾಟೀಲ, ರಮೇಶ ಬಾಕೆ, ಗುರು ಸಾಲಿಮಠ, ಬೀರಣ್ಣ ಕಲ್ಲೂರ, ಶಿವರಾಜ ಸಜ್ಜನ, ಶರಣು ಪದಕಿ, ಚಂದಮ್ಮ ಪಾಟೀಲ, ಮಲ್ಲಿಕರ‍್ಜುನ ನಿಂಗದಳ್ಳಿ, ರಾಜು ಜಿಡ್ಡಗಿ, ವಿಶ್ವನಾಥ ರೇವೂರ, ಧಾನು ಫತಾಟೆ, ಅಶೋಲ ಬಗಲಿ, ಸುರೇಖಾ ಪದಕಿ, ಬಸವರಾಜ ಚಾಂದಕವಟೆ, ಶಂಕು ಮ್ಯಾಕೇರಿ, ರವಿ ಕಣ್ಣಿ ಇದ್ದರು.

