ಮುದ್ದೇಬಿಹಾಳ: ಹೃದಯ ಸಂಬಂಧಿ ಖಾಯಲೆಗಳ ತಪಾಸಣೆಗಾಗಿ ನಮ್ಮಲ್ಲಿ ಯಾವುದೇ ವಿಶೇಷ ಉಪಕರಣಗಳಿಲ್ಲದ ಕಾರಣ ನಮ್ಮ ಭಾಗದ ಜನತೆ ೮೦ಕಿ.ಮೀ ದೂರದ ವಿಜಯಪುರ ಮತ್ತು ಬಾಗಲಕೋಟೆಗೆ ಹೋಗಿ ಸ್ಕ್ಯಾನಿಂಗ್ ಮಾಡಿಸುವ ಅನಿವಾರ್ಯತೆ ಇತ್ತು. ಸಧ್ಯ ನಮ್ಮೂರಲ್ಲಿಯೇ ೨ಡಿ ಇಕೋ ಸ್ಕ್ಯಾನಿಂಗ್ ಸೌಲಭ್ಯ ದೊರಕಿದ್ದು ನಮ್ಮ ಭಾಗದ ಜನತೆಗೆ ಸಾಕಷ್ಟು ಸಹಾಯಕಾರಿಯಾಗಲಿದೆ ಎಂದು ಜಿಲ್ಲಾ ಪಂಚಾಯತ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಹೇಳಿದರು.
ಪಟ್ಟಣದ ವಿಜಯಪುರ ರಸ್ತೆಯಲ್ಲಿರುವ ಬಿರಾದಾರ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ೨ಡಿ ಇಕೋ ಸ್ಕ್ಯಾನಿಂಗ್ ಮಶೀನ್ ಉದ್ಘಾಟನೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಮ್ಮ ಭಾಗದಲ್ಲಿ ಬಹಳ ದಿನಗಳ ಹಿಂದೆಯೇ ಎಲ್ಲ ಸೌಲಭ್ಯಗಳನ್ನೊಳಗೊಂಡ ಬಹಳ ಆಸ್ಪತ್ರೆಗಳಾಗಬೇಕಿತ್ತು. ಆದರೆ ಸ್ಥಳೀಯರ ಸಹಕಾರದ ಕೊರತೆ, ಚಿಕ್ಕ ಪುಟ್ಟ ಕಾರಣಗಳಿಗೆ ಮತ್ತು ಆಕಸ್ಮಿಕ ಘಟನೆಗಳಲ್ಲಿ ಜಗಳವಾಡುವ ಪರಿಣಾಮ ಬಹುತೇಕರು ಹಿಂದೇಟು ಹಾಕಿದ್ದಾರೆ ಎಂದು ಡಾಕ್ಟರ್‌ಗಳು ಮಾತನಾಡಿಕೊಳ್ಳುತ್ತಿರುತ್ತಾರೆ. ರೋಗಿಯ ರೋಗವನ್ನು ಗುಣಪಡಿಸುವದು ಮತ್ತು ಜೀವ ಉಳಿಸುವದೇ ಡಾಕ್ಟರ್‌ಗಳ ಮೊದಲ ಆದ್ಯ ಕರ್ತವ್ಯ ಎನ್ನುವದನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು. ಯಾರಾದರೂ ಡಾಕ್ಟರ್‌ಗಳಿಗೆ ಸಮಸ್ಯೆಯುಂಟು ಮಾಡುವ ಕೆಲ ಸಂದರ್ಭಗಳಲ್ಲಿ ಸ್ಥಳೀಯ ಮುಖಂಡರು ಡಾಕ್ಟರ್‌ಗಳ ಪರವಾಗಿ ನಿಂತು ಸರಿಪಡಿಸಿದಲ್ಲಿ ಹೆಚ್ಚೆಚ್ಚು ಸೌಲಭ್ಯವುಳ್ಳ ಆಸ್ಪತ್ರೆಗಳು ನಮ್ಮ ಭಾಗದಲ್ಲಿ ತೆರೆದು ಸಾಕಷ್ಟು ಜನರಿಗೆ ಅನುಕೂಲಗಳಾಗುತ್ತವೆ ಎಂದರು.
ಆಸ್ಪತ್ರೆಯ ವೈದ್ಯ ಡಾ.ಎಂ.ಎಸ್.ಬಿರಾದಾರ ಮಾತನಾಡಿ, ಈ ಮಶೀನ್ ನಿಂದ ಹೃದಯವನ್ನು ಸಂಪೂರ್ಣವಾಗಿ ಸ್ಕ್ಯಾನ್ ಮಾಡಬಹುದು. ಇದರಿಂದ ಹೃದಯದ ರಕ್ತ ಸಂಚಾರದ ಮಾಹಿತಿ, ಹೃದಯಕ್ಕೆ ಬಾವು ಬಂದಿದ್ದರೆ ಅದರ ಮಾಹಿತಿ, ಹೃದಯಾಘಾತದ ಬಗ್ಗೆ ಹೀಗೆ ಹಲವಾರು ಮಾಹಿತಿಗಳನ್ನು ತಿಳಿಸಿಕೊಡುತ್ತದೆ. ನಮ್ಮ ಆಸ್ಪತ್ರೆಗೆ ಬಂದ ಹಲವರಿಗೆ ಇಕೋ ಸ್ಕ್ಯಾನಿಂಗ್ ಮಾಡಿಸಲು ವಿಜಯಪುರಕ್ಕೆ ಹೋಗಬೇಕು ಎಂದು ತಿಳಿಸಿದಾಗ ಅಲ್ಲಿಗೆ ಹೋಗೋಕೆ ನಮಗೆ ಭಯ, ಇಲ್ಲಿಯೇ ನಮಗೆ ಮಾತ್ರೆ ಕೊಟ್ಟು ಬಿಡಿ ಎನ್ನುತ್ತಿದ್ದರು. ಹಾಗಾಗಿ ನಮ್ಮ ಭಾಗದ ಜನತೆಯ ಆರೋಗ್ಯದ ಹಿತದೃಷ್ಠಿಯಿಂದ ೨ಡಿ ಇಕೋ ಸ್ಕಾನಿಂಗ್ ಮಶೀನನ್ನು ತಂದಿದ್ದು, ಇನ್ನು ದೂರದ ಊರಿಗೆ ಅಲೆಯುವ ಪರಿಸ್ಥಿತಿ ತಪ್ಪಿ, ೧೦ ನಿಮಿಷಗಳಲ್ಲಿ ಸಾರ್ವಜನಿಕರಿಗೆ ಸ್ಕ್ಯಾನಿಂಗ್ ವರದಿ ತಲುಪಲಿದೆ. ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿರುವವರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು.
ಡಾ.ವಿರೇಶ ಪಾಟೀಲ ಮಾತನಾಡಿದರು.
ತಾಳಿಕೋಟೆಯ ಖಾಸ್ಗತೇಶ್ವರ ಮಠದ ಬಾಲ ಶಿಯೋಗಿ ಸಿದ್ಧಲಿಂಗ ದೇವರು ಮಶೀನ್ ಉದ್ಘಾಟಿಸಿ ಮಾತನಾಡಿದರು.
ಈ ವೇಳೆ ದಿ ಕರ್ನಾಟಕ ಕೋ ಅಪ್ ಬ್ಯಾಂಕ್ ಅಧ್ಯಕ್ಷ ಸತೀಶ ಓಸ್ವಾಲ, ತಾಲೂಕು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಅನೀಲಕುಮಾರ ಶೇಗುಣಸಿ, ಶುಶ್ರುಷಾಧಿಕಾರಿ ಸಂಜಯ ಭೋಸಲೆ, ಪ್ರಮುಖರಾದ ರಾಜೇಂದ್ರಗೌಡ ರಾಯಗೊಂಡ, ಹಣಮಂತ ನಲವಡೆ, ಸತೀಶ ಕುಲಕರ್ಣಿ, ಮಲ್ಲನಗೌಡ ಪಾಟೀಲ, ಸಂಗನಗೌಡ ಪಾಟೀಲ ಸೇರಿದಂತೆ ಮತ್ತೀತರರು ಭಾಗಿಯಾಗಿದ್ದರು. ಶಿಕ್ಷಕ ಸಿದ್ದನಗೌಡ ಬಿಜ್ಜೂರ ಕಾರ್ಯಕ್ರಮ ನಿರ್ವಹಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

