Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಉದಯರಶ್ಮಿ ಇಂದಿನ ದಿನಪತ್ರಿಕೆ ಏಪ್ರಿಲ್ 19, 2026

ಸರ್ಕಾರಿ ಯೋಜನೆಗಳಿಂದ ಬದುಕು ರೂಪಿಸಿಕೊಳ್ಳಿ :ಇಂಡಿ

ನಮ್ಮ ಪರಂಪರೆ ಸಂರಕ್ಷಿಸುವ ಜವಾಬ್ದಾರಿ ನಮ್ಮದು :ಡಾ.ಮಯೂರ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ಕುರಿಯ ಹಿಕ್ಕಿಯಲ್ಲಿ ಕೈಲಾಸಧೀಶನ ಕಂಡ ಗೋಲಗೇರಿ ಗೊಲ್ಲಾಳೇಶ
ವಿಶೇಷ ಲೇಖನ

ಕುರಿಯ ಹಿಕ್ಕಿಯಲ್ಲಿ ಕೈಲಾಸಧೀಶನ ಕಂಡ ಗೋಲಗೇರಿ ಗೊಲ್ಲಾಳೇಶ

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

-ಮಲ್ಲಿಕಾಜು೯ನ ಎನ್.ಕೆಂಭಾವಿಬ್ರಹ್ಮದೇವನಮಡು

ಬ್ರಹ್ಮದೇವನಮಡು: ಲಕ್ಷಾಂತರ ಭಕ್ತರ ಶ್ರದ್ಧಾ ಕೇಂದ್ರ, ಶ್ರೀಶೈಲ ಗಿರಿಯ ಪ್ರತಿರೂಪ, ಇಷ್ಟಾರ್ಥ ಕರುಣಿಸುವ ಪುಣ್ಯತಾಣ ಎನಿಸಿದ ಗೋಲಗೇರಿ ಕ್ಷೇತ್ರದಲ್ಲಿ ಅದ್ಧೂರಿ ಉತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಬಿರು ಬಿಸಿಲನ್ನೂ ಲೆಕ್ಕಿಸದೆ ಇಲ್ಲಿನ ಗೊಲ್ಲಾಳೇಶ್ವರ ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿದೆ.
ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಪುಟ್ಟ ಗ್ರಾಮ ಗೋಲಗೇರಿ. ಅಂದಾಜು ೫ ಸಾವಿರ ಜನಸಂಖ್ಯೆ ಹೊಂದಿರುವ ಗ್ರಾಮ ನೂರಾರು ವರ್ಷಗಳ ಹಿಂದೆ ಕುರಿ ದಡ್ಡಿಯಾಗಿತ್ತು. ಪಕ್ಕದ ಢವಳಾರ ಗ್ರಾಮದ ಬಲ್ಲುಗ-ದುಗ್ಗಳಾದೇವಿ ದಂಪತಿಗೆ ೧೦ನೇ ಶತಮಾನದ ಕೊನೆಯಲ್ಲಿ ಗೊಲ್ಲಾಳೇಶ ಎಂಬ ಪುತ್ರ ಜನಿಸುತ್ತಾನೆ. ಮನೆತನದ ಕುರಿ ಕಾಯುವ ವೃತ್ತಿಯನ್ನೇ ಮುಂದುವರಿಸಿದ ಗೊಲ್ಲಾಳೇಶ ಜನ್ಮಾಂತರದ ಸುಕೃತದಿಂದ ನಿರಂತರ ಶಿವನ ಧ್ಯಾನದಲ್ಲೇ ತೊಡಗುತ್ತಾನೆ. ಒಮ್ಮೆ ನಾಮಸ್ಮರಣೆಯಲ್ಲಿ ಮೈಮರೆತ ಸಂದರ್ಭದಲ್ಲೇ ಪಾದಯಾತ್ರೆ ಮೂಲಕ ಶ್ರೀಶೈಲಕ್ಕೆ ಹೊರಟಿದ್ದ ನಂದಯ್ಯಸ್ವಾಮಿ ಎಂಬುವರ ಭೇಟಿಯಾಗುತ್ತದೆ. ಅವರಿಗೆ ಗೊಲ್ಲಾಳೇಶ ಒಂದು ನಾಣ್ಯ ನೀಡಿ ಶ್ರೀಶೈಲದಿಂದ ಲಿಂಗ ತೆಗೆದುಕೊಂಡು ಬರಲು ಹೇಳುತ್ತಾನೆ.
ಆದರೆ ಲಿಂಗ ತರುವುದನ್ನು ಮರೆತ ನಂದಯ್ಯಸ್ವಾಮಿ, ಹತ್ತಿರದಲ್ಲೇ ಇದ್ದ ಕುರಿ ಹಿಕ್ಕಿಯನ್ನು ಗೊಲ್ಲಾಳೇಶನಿಗೆ ನೀಡಿ, ‘ಇದೇ ಲಿಂಗ, ಗೊಬ್ಬರದ ಗುಂಡಿಯಲ್ಲಿ ಇಟ್ಟು ಪೂಜಿಸು’ ಎಂದು ಪೂಜೆಯ ವಿಧಿ ಬೋಧಿಸುತ್ತಾರೆ.
ಗೊಲ್ಲಾಳೇಶ ಭಕ್ತಿಯಿಂದ ಅದನ್ನೇ ಪೂಜಿಸಲು ಆರಂಭಿಸುತ್ತಾನೆ. ಮನೆಯಲ್ಲಿದ್ದ ಹಾಲು, ಮೊಸರು, ತುಪ್ಪವನ್ನು ತಂದು ಪಂಚಾಮೃತ ಎಂದು ಗೊಬ್ಬರದ ಗುಂಡಿಗೆ ಹಾಕುತ್ತಾನೆ. ಜಿಪುಣನಾಗಿದ್ದ ಗೊಲ್ಲಾಳೇಶನ ತಂದೆ ಇದನ್ನು ಕಂಡು ಪಂಚಾಮೃತ ಮಾಡುತ್ತಿದ್ದ ಗೊಬ್ಬರದ ಗುಂಡಿಯನ್ನು ಕಾಲಿನಿಂದ ಚೆಲ್ಲಾಪಿಲ್ಲಿ ಮಾಡುತ್ತಾನೆ. ಭಕ್ತಿಯಲ್ಲಿ ಮೈಮರೆತ ಗೊಲ್ಲಾಳೇಶ ಎಚ್ಚರಗೊಂಡು ತಂದೆಯ ಶಿರಚ್ಛೇದ ಮಾಡುತ್ತಾನೆ. ಕೂಡಲೇ ಪಾರ್ವತಿಯೊಂದಿಗೆ ಪ್ರತ್ಯಕ್ಷನಾದ ಶಿವ, ‘ನಿನ್ನ ಭಕ್ತಿಗೆ ಮೆಚ್ಚಿದ್ದೇನೆ. ಒಂದು ರೂಪದಿಂದ ನಾನು ಇಲ್ಲಿ ಲಿಂಗದಲ್ಲಿ ನೆಲೆನಿಲ್ಲುವೆ’ ಎನ್ನುತ್ತಾನೆ. ಅಂದಿನಿಂದ ಗೊಲ್ಲಾಳೇಶನ ಭಕ್ತಿಗೆ ಮೆಚ್ಚಿ ಶಿವನೇ ಗಿರಿಯಿಂದ ಬಂದ ಈ ಕ್ಷೇತ್ರ ಗೊಲ್ಲಾಳಗಿರಿ, ಗೋಲಗಿರಿ ಎಂದು ಖ್ಯಾತಿ ಪಡೆಯುತ್ತದೆ.
ತಂದೆಯ ಮೇಲೆ ಕ್ರೋಧಗೊಂಡ ಗೊಲ್ಲಾಳೇಶ ಶಿವನಲ್ಲಿ ಕ್ಷಮೆ ಯಾಚಿಸಿ ‘ನನ್ನ ತಂದೆ ತಾಯಿಗೆ ಮೋಕ್ಷ ನೀಡು’ ಎಂದು ಪ್ರಾರ್ಥಿಸುತ್ತಾನೆ. ಆಗ ಶಿವ, ‘ನಿನ್ನ ತಾಯಿಗೆ ಮೋಕ್ಷವಾಗುತ್ತದೆ. ಲೋಭದಿಂದಿದ್ದ ತಂದೆ ಇನ್ನೊಂದು ಜನ್ಮ ಎತ್ತಿದ ನಂತರ ಮುಕ್ತಿಯಾಗುತ್ತದೆ’ ಎನ್ನುತ್ತಾನೆ. ಗೊಲ್ಲಾಳೇಶನ ತಂದೆ ಪಕ್ಕದ ಯಾದಗಿರಿ ಜಿಲ್ಲೆಯ ಹಳೆಸಾಗರ ಎಂಬ ಗ್ರಾಮದಲ್ಲಿ ಮುತ್ತು ರತ್ನಗಳ ವ್ಯಾಪಾರಿ ಮನೆಯಲ್ಲಿ ಮರಿಯಪ್ಪನಾಗಿ ಜನಿಸುತ್ತಾರೆ. ಒಮ್ಮೆ ಮುತ್ತ ರತ್ನಗಳ ವ್ಯಾಪಾರಕ್ಕಾಗಿ ಸೊಲ್ಲಾಪುರಕ್ಕೆ ತೆರಳಿದ್ದ ಮರಿಯಪ್ಪ ಎತ್ತುಗಳ ಮೇಲೆ ಅಮೂಲ್ಯ ವಸ್ತುಗಳನ್ನು ಹೇರಿಕೊಂಡು ಗೋಲಗೇರಿ ಬಳಿ ಬಂದಾಗ ಆಯಾಸವಾಗಿ ನೆಲದಲ್ಲಿ ಒಂದು ಕಟ್ಟಿಗೆ ಗೂಟ ನೆಟ್ಟು ಎತ್ತುಗಳನ್ನು ಅದಕ್ಕೆ ಕಟ್ಟಿ ಮಲಗುತ್ತಾರೆ. ಲಿಂಗದ ಮೇಲೆ ನೆಟ್ಟ ಗೂಟವನ್ನು ತೆಗೆಯುವಂತೆ ಸ್ವಪ್ನವಾಗುತ್ತದೆ. ಆದರೆ ಮರಿಯಪ್ಪ ಇದನ್ನು ಗಮನಿಸದೆ ಮುಂದೆ ಊರಿಗೆ ತೆರಳುತ್ತಾರೆ. ಊರು ತಲುಪುತ್ತಿದ್ದಂತೆ ಎತ್ತುಗಳ ಕಣ್ಣು ಕಾಣದಂತಾಗಿ ಅದರ ಮೇಲಿದ್ದ ಸಂಪತ್ತೆಲ್ಲ ಅರಳಿಕಾಯಿ ಆಗಿರುತ್ತವೆ. ಸ್ವಪ್ನದ ವೃತ್ತಾಂತ ತಿಳಿದು ಗೋಲಗೇರಿಗೆ ಮರಳಿದ ಹಿರಿಯರೆಲ್ಲ ಗೂಟ ನೆಟ್ಟಿದ್ದ ಜಾಗದಲ್ಲಿ ತಗ್ಗು ತೆಗೆಸಿ ನೋಡಿದಾಗ ಲಿಂಗ ಉದ್ಭವವಾಗುತ್ತದೆ. ಅದನ್ನು ಇದೇ ಸ್ಥಳದಲ್ಲಿ ಪ್ರತಿಷ್ಠಾಪಿಸಿ ದೇವಸ್ಥಾನ ನಿರ್ಮಿಸಲಾಗುತ್ತದೆ. ಇದೇ ದೇವಸ್ಥಾನ ಇಂದು ಲಕ್ಷಾಂತರ ಭಕ್ತರ ಇಷ್ಟಾರ್ಥ ಕರುಣಿಸುವ ಗೊಲ್ಲಾಳೇಶ್ವರ ದೇವಸ್ಥಾನವಾಗಿದೆ. ಮರಿಯಪ್ಪನ ವಂಶಸ್ಥರೇ ಪೂಜೆ, ಉತ್ಸವಗಳನ್ನು ನಡೆಸುತ್ತಿದ್ದಾರೆ.

ಕರ್ನಾಟಕದಲ್ಲೇ ಎತ್ತರದ ರಥ!

ಚೈತ್ರ ಮಾಸದ ಹುಣ್ಣಿಮೆ ದಿನ ಇಲ್ಲಿ ಎಳೆಯಲಾಗುವ ರಥ ಉತ್ತರ ಕರ್ನಾಟಕದಲ್ಲೇ ಅತೀ ಎತ್ತರದ ರಥ ಎನ್ನಲಾಗಿದೆ. ಈ ರಥ ೭೦ ಅಡಿ ಎತ್ತರವಿದ್ದು, ೧೦ ಅಡಿಯ ಬೃಹತ್ ಚಕ್ರಗಳಿವೆ. ನೂರಾರು ವರ್ಷಗಳಿಂದ ರಥೋತ್ಸವ ನಡೆಯುತ್ತಿದೆ. ೧೯೧೬ರಲ್ಲಿ ಪ್ರಾಚೀನ ಕಾಲದ ರಥ ಶಿಥಿಲಗೊಂಡಾಗ ಅಂದಿನಿಂದ ೧೯೩೨ರವರೆಗೆ ಇಂದಿನ ಬೃಹತ್ ರಥ ನಿರ್ಮಿಸಲಾಯಿತು. ಅಂದಿನಿಂದ ಇದೇ ರಥ ಎಳೆಯಲಾಗುತ್ತಿದೆ. ಮೊದಲು ರಥೋತ್ಸವ ಶ್ರಾವಣದಲ್ಲೇ ನಡೆಯುತ್ತಿತ್ತು. ಶ್ರಾವಣ ಮಳೆಗಾಲವಾದ್ದರಿಂದ ಬೃಹತ್ ರಥೋತ್ಸವವನ್ನು ಚೈತ್ರದಲ್ಲಿ ನಡೆಸಲು ನಿರ್ಧರಿಸಲಾಯಿತು. ವಿಜಯಪುರದಿಂದ ಗೋಲಗೇರಿ ಗ್ರಾಮ ೮೨ ಕಿ.ಮೀ. ಹಾಗೂ ಸಿಂದಗಿಯಿಂದ ೨೨ ಕಿ.ಮೀ.ದೂರದಲ್ಲಿದೆ. ಎರಡೂ ಕಡೆಯಿಂದ ಸರಕಾರಿ ಹಾಗೂ ಖಾಸಗಿ ವಾನಗಳ ಸೌಲಭ್ಶವಿದ

ಮಲ್ಲಿಕಾಜು೯ನ ಎನ್.ಕೆಂಭಾವಿಬ್ರಹ್ಮದೇವನಮಡು

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಉದಯರಶ್ಮಿ ಇಂದಿನ ದಿನಪತ್ರಿಕೆ ಏಪ್ರಿಲ್ 19, 2026

ಸರ್ಕಾರಿ ಯೋಜನೆಗಳಿಂದ ಬದುಕು ರೂಪಿಸಿಕೊಳ್ಳಿ :ಇಂಡಿ

ನಮ್ಮ ಪರಂಪರೆ ಸಂರಕ್ಷಿಸುವ ಜವಾಬ್ದಾರಿ ನಮ್ಮದು :ಡಾ.ಮಯೂರ

ವಿಜಯಪುರ ಲೋಕಾಯುಕ್ತ ಬಲೆಗೆ ಸರ್ಕಾರಿ ಸಿಬ್ಬಂದಿ!

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಉದಯರಶ್ಮಿ ಇಂದಿನ ದಿನಪತ್ರಿಕೆ ಏಪ್ರಿಲ್ 19, 2026
    In ದಿನಪತ್ರಿಕೆ
  • ಸರ್ಕಾರಿ ಯೋಜನೆಗಳಿಂದ ಬದುಕು ರೂಪಿಸಿಕೊಳ್ಳಿ :ಇಂಡಿ
    In (ರಾಜ್ಯ ) ಜಿಲ್ಲೆ
  • ನಮ್ಮ ಪರಂಪರೆ ಸಂರಕ್ಷಿಸುವ ಜವಾಬ್ದಾರಿ ನಮ್ಮದು :ಡಾ.ಮಯೂರ
    In (ರಾಜ್ಯ ) ಜಿಲ್ಲೆ
  • ವಿಜಯಪುರ ಲೋಕಾಯುಕ್ತ ಬಲೆಗೆ ಸರ್ಕಾರಿ ಸಿಬ್ಬಂದಿ!
    In (ರಾಜ್ಯ ) ಜಿಲ್ಲೆ
  • ನಮ್ಮ ನಿಸ್ವಾರ್ಥ ಸತ್ಕಾರ್ಯಗಳು ನಮ್ಮನ್ನು ಕಾಪಾಡುತ್ತವೆ :ಡಾ.ಗೀತಾ
    In (ರಾಜ್ಯ ) ಜಿಲ್ಲೆ
  • ಏ.೨೪ಕ್ಕೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ
    In (ರಾಜ್ಯ ) ಜಿಲ್ಲೆ
  • ಪ್ರತಿಷ್ಠಿತ ಶಾಲೆ ಪ್ರವೇಶಕ್ಕೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನ
    In (ರಾಜ್ಯ ) ಜಿಲ್ಲೆ
  • ಏ.೨೨ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ
    In (ರಾಜ್ಯ ) ಜಿಲ್ಲೆ
  • ಏ.೨೨ರಿಂದ ಸಿಇಟಿ ಪ್ರರೀಕ್ಷೆ: ಸುಸೂತ್ರ ನಡೆಸಲು ಎಡಿಸಿ ಸೂಚನೆ
    In (ರಾಜ್ಯ ) ಜಿಲ್ಲೆ
  • ಹ್ಯಾಂಡ್ ಪೋಸ್ಟ್ ಟು ಕೋಟೆ ಜೋಡಿ ರಸ್ತೆ- ಹೈಟೆಕ್ ಪಾರ‍್ಕ್ ನಿರ‍್ಮಾಣ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.