ವಿಜಯಪುರ: ಅಂತಿಮ ಕಣದಲ್ಲಿ ೮ ಅಭ್ಯರ್ಥಿಗಳು
ವಿಜಯಪುರ: ಲೋಕಸಭಾ ಚುನಾವಣೆಗೆ ಸಲ್ಲಿಕೆಯಾಗಿದ್ದ ನಾಮಪತ್ರಗಳನ್ನು ಹಿಂಪಡೆಯುವ ಅವಧಿ ಸೋಮವಾರ ಮುಕ್ತಾಯವಾಗಿದ್ದು, ಒಟ್ಟಾರೆ ೪ ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ವಾಪಸ್ ತೆಗೆದುಕೊಂಡಿದ್ದಾರೆ. ಅಂತಿಮ ಕಣದಲ್ಲಿ ೮ ಅಭ್ಯರ್ಥಿಗಳು ಇದ್ದಾರೆ.
ಪಕ್ಷೇತರ ಅಭ್ಯರ್ಥಿಗಳಾದ ಸಂಗಪ್ಪಾ ಹುಣಶಿಕಟ್ಟಿ, ಹಾಗೂ ಬಾಬುರಾಜೇಂದ್ರ ನಾಯಿಕ, ಭಾರತೀಯ ಜವಾನ್ ಕಿಸಾನ್ ಪಕ್ಷದ ಕುಲಪ್ಪಾ ಬಿ ಚವ್ಹಾಣ, ಬಿಎಸ್‌ಪಿ ಪಕ್ಷದ ಮಲ್ಲು ಹಾದಿಮನಿ ತಮ್ಮ ಉಮೇದುವಾರಿಕೆಯನ್ನು ಏ.೨೨(ಸೋಮವಾರ) ರಂದು ಹಿಂಪಡೆದಿದ್ದಾರೆ.
ಭಾರತೀಯ ಜನತಾ ಪಕ್ಷದ ರಮೇಶ ಜಿಗಜಿಣಗಿ, ಕಾಂಗ್ರೇಸ್‌ನ ರಾಜು ಆಲಗೂರ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಗಣಪತಿ ಲಾಲಸಿಂಗ ರಾಠೋಡ, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಎ) ಪಕ್ಷದ ಜಿತೇಂದ್ರ ಅಶೋಕ ಕಾಂಬ್ಲೆ, ಸೋಶಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯೂನಿಸ್ಟ್) ಪಕ್ಷದ ನಾಗಜ್ಯೋತಿ. ಬಿ. ಎನ್, ರಾಷ್ಟ್ರೀಯ ಸಮಾಜ ಪಕ್ಷದ ರಾಜಕುಮಾರ್ ಅಪ್ಪಣಾ ಹೋನ್ನಕಟ್ಟಿ, ನಕಿ ಭಾರತೀಯ ಏಕತಾ ಪಕ್ಷದ ರಾಮಜಿ ಹರಿಜನ್, ಪಕ್ಷೇತರ ಅಭ್ಯರ್ಥಿ ತಾರಾಬಾಯಿ ಬೋವಿ ಅಂತಿಮ ಕಣದಲ್ಲಿರುವ ಅಭ್ಯರ್ಥಿಗಳಾಗಿದ್ದಾರೆ.
