ದೇವರಹಿಪ್ಪರಗಿ: ವಿದ್ಯುತ್ ಅವಘಡದಿಂದ ಒಣಮೇವಿನ ಬಣವೆಗೆ ಬೆಂಕಿ ತಗುಲಿ ಹಾನಿಗೊಳಗಾದ ಘಟನೆ ಮುಳಸಾವಳಗಿ ಗ್ರಾಮದಲ್ಲಿ ಜರುಗಿದೆ.
ತಾಲ್ಲೂಕಿನ ಮುಳಸಾವಳಗಿ ಗ್ರಾಮದ ರೈತ ಬಸಣ್ಣ ಬಿರಾದಾರ ಅವರ ಜಮೀನಿನಲ್ಲಿ ಶನಿವಾರ ಈ ಘಟನೆ ಸಂಭವಿಸಿದ್ದು, ಬೇಸಿಗೆಯಲ್ಲಿ ಜಾನುವಾರಗಳಿಗೆ ಒಣಮೇವು ಕೊರತೆಯಾಗಬಾರದು ಎಂಬ ಕಾರಣಕ್ಕೆ ೩೦ ಸಾವಿರ ನೀಡಿ ೩ ಟ್ರ್ಯಾಕ್ಟರ್ ಒಣಮೇವು ಖರೀದಿಸಲಾಗಿತ್ತು. ಇದನ್ನು ಜಮೀನಿನಲ್ಲಿ ಸಂಗ್ರಹಿಸಿ ಇಡಲಾಗಿತ್ತು. ಆದರೆ ಶನಿವಾರದಂದು ಜೋರಾದ ಗಾಳಿ ಬೀಸಿದ ಪರಿಣಾಮ ಬಣವೆಯ ಮೇಲೆ ಹಾದು ಹೋದ ವಿದ್ಯುತ್ ತಂತಿಗಳು ಪರಸ್ಪರ ಕೂಡಿ ಬೆಂಕಿ ಹುಟ್ಟಿ ಬಣವೆಗೆ ತಗುಲಿದ್ದು , ಘಟನೆಗೆ ಕಾರಣವಾಗಿದೆ.
Subscribe to Updates
Get the latest creative news from FooBar about art, design and business.
Related Posts
Add A Comment

