ದೇವರಹಿಪ್ಪರಗಿ: ಸಾಮರಸ್ಯದಿಂದ ಬದುಕಲು ಸಂಸ್ಕಾರ ಹಾಗೂ ಶಿಕ್ಷಣ ಅತ್ಯಗತ್ಯವಾಗಿವೆ ಎಂದು ಸ್ಥಳೀಯ ಗದ್ದುಗೆಮಠ ಮಡಿವಾಳೇಶ್ವರ ಸ್ವಾಮೀಜಿ ಹೇಳಿದರು.
ಪಟ್ಟಣದಲ್ಲಿ ನೂತನವಾಗಿ ನಿರ್ಮಾಣಗೊಂಡ ಮಸೀದೆ ಉದ್ಘಾಟನಾ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಸಮುದಾಯದ ಸಂಸ್ಕಾರ ಹಾಗೂ ಅನುಕೂಲಕ್ಕಾಗಿ ವಕೀಲ ಎ.ಎಂ. ತಾಂಬೋಳಿ ತಮ್ಮ ಧರ್ಮಪತ್ನಿ ಸ್ಮರಣಾರ್ಥ ೨೫ ಲಕ್ಷ.ರೂಗಳ ವೆಚ್ಚದಲ್ಲಿ ಸ್ವಂತ ಮಸೀದಿ ನಿರ್ಮಾಣ ಮಾಡಿರುವ ಕಾರ್ಯ ಶ್ಲಾಘನೀಯ. ಆಧುನಿಕತೆಯ ಧಾವಂತದಲ್ಲಿ ಇಂದು ಧಾರ್ಮಿಕ ಚಿಂತನೆ ಕಡಿಮೆ ಆಗುತ್ತಿದೆ. ಮಕ್ಕಳಲ್ಲಿ ಸಂಸ್ಕೃತಿ, ಸಂಸ್ಕಾರ, ಸಭ್ಯತೆ ರೂಡಿಯಾಗಬೇಕು. ಧಾರ್ಮಿಕ ಚಿಂತನೆಯ ಕಲ್ಪನೆ ಮೂಡಬೇಕು. ಯುವ ಜನಾಂಗಕ್ಕೆ ಮಾದರಿಯಾಗಿ ಇದರ ಸದುಪಯೋಗವಾಗಲಿ ಎಂದರು.
ಶಾಸಕ ರಾಜುಗೌಡ ಪಾಟೀಲ (ಕುದರಿಸಾಲವಾಡಗಿ) ಹಾಗೂ ರಾಜ್ಯ ಕೆಪಿಸಿಸಿ ವಕ್ತಾರ ಎಸ್.ಎಂ. ಪಾಟೀಲ (ಗಣಿಹಾರ)ಮಾತನಾಡಿ, ಸಮಾಜದ ಸಾಮರಸ್ಯಕ್ಕೆ ಮೊದಲು ಶಿಕ್ಷಣ ಅಗತ್ಯ. ಅದಕ್ಕಾಗಿ ಉತ್ತಮ ಶಿಕ್ಷಣ ಕೊಡಿಸಲು ಪಾಲಕರು ಪ್ರಯತ್ನಿಸಬೇಕು. ಶಿಕ್ಷಣದಿಂದಲೇ ಎಲ್ಲವೂ ಸಾಧ್ಯ. ಮಸೀದೆ ಜೊತೆಗೆ ಉತ್ತಮ ಶಿಕ್ಷಣ ಸಂಸ್ಥೆ ಕಟ್ಟಿ, ನೂರಾರು ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮ ಸಂಘಟಕ ನ್ಯಾಯವಾದಿ ಎ.ಎಂ.ತಾಂಬೋಳಿ, ಬಿಎಸ್‌ಪಿ ರಾಜ್ಯ ಪ್ರಧಾನಕಾರ್ಯದರ್ಶಿ ದಸ್ತಗೀರ ಮುಲ್ಲಾ, ಡಾ.ಆರ್.ಆರ್.ನಾಯಿಕ, ಮೌಲಾನಾ ಹಫೀಜ್ ಗಿರಗಾಂವಿಕರ, ಕಬೂಲ್ ಕೊಕಟನೂರ ಮಾತನಾಡಿದರು.
ಪಟ್ಟಣದ ಆವುಗೇಶ್ವರ ಶ್ರೀ ಆಶೀರ್ವಚನ ನೀಡಿದರು.
ಇದೇ ಸಂದರ್ಭದಲ್ಲಿ ಪ್ರತಿಶತ ೯೦ಕ್ಕೂ ಹೆಚ್ಚು ಅಂಕ ಪಡೆದ ಮಹಾತ್ಮಾ ಗಾಂಧೀ ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಯಿತು.
ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ರಿಯಾಜ ಯಲಗಾರ, ಕಾಂಗ್ರೆಸ್ ಧುರೀಣ ಸಂತೋಷಗೌಡ ದೊಡ್ಡಮನಿ, ಎ.ಎನ್.ಚಟ್ಟರಕಿ, ನಜೀರಸಾಬ್ ಬೀಳಗಿ, ಮಹಿಬೂಬ್ ಹುಂಡೇಕಾರ, ಲಾಲಾಸಾಬ್ ಮಳಖೇಡ, ಹಸನ್ ವಡ್ಡೋಡಗಿ, ಹಿದಾಯತ್ ಮಾಶಾಳಕರ, ಸಲೀಮ ಶೇಖ, ಅಬ್ದುಲ್‌ಜಬ್ಬಾರ ಮೊಮೀನ, ಮುನ್ನಾ ಮಳಖೇಡ, ಬಂದೇನವಾಜ್ ಕತ್ನಳ್ಳಿ, ಸಯೀದ ರೂಗಿ, ರೆಹಮಾನ್ ವಡ್ಡೋಡಗಿ ಸೇರಿದಂತೆ ಮಹಿಳೆಯರು, ಮಕ್ಕಳು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

