ವಿಜಯಪುರದ ಸಂಸ್ಕೃತಿ ಕಾಲೊನಿಯಲ್ಲಿ ಮಾಹೂರಿ ಜಿ-ಫ್ರೆಶ್ ಸೂಪರ್ ಮಾರ್ಕೆಟ್ ಮಳಿಗೆಗೆ ಚಾಲನೆ
ವಿಜಯಪುರ: ಉಪಾಯಗಳು ಜಗತ್ತನ್ನೇ ಬೆಳಗುತ್ತವೆ. ಹಾಗೆ ಮುಳವಾಡದ ಪ್ರತಿಷ್ಠಿತ ದೇಶಪಾಂಡೆ ಮನೆತನವು ತಮ್ಮ ಉನ್ನತ ವಿಚಾರಗಳಿಂದ ಹಲವು ಕ್ವೇತ್ರಗಳಲ್ಲಿ ಯಶಸ್ಸು ಸಾಧಿಸಿದ್ದಾರೆಂದು ಆಕ್ಸಪರ್ಡ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಹೇಳಿದರು.
ಗುರುವಾರ ನಗರದ ಸಂಸ್ಕೃತಿ ಕಾಲೊನಿಯಲ್ಲಿ ಮಾಹೂರಿ ಜಿ-ಫ್ರೆಶ್ ಸೂಪರ್ ಮಾರ್ಕೆಟ್ ಮಳಿಗೆ ಉದ್ಘಾಟಿಸಿ ಅವರು ಮಾತನಾಡಿದರು.
ಹತ್ತಾರು ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವ ಜನೋಪಯೋಗಿ ಉದ್ದಿಮೆ ಆರಂಭಿಸಿದ ದೇಶಪಾಂಡೆ ಅವರು ಇದರಲ್ಲಿ ಯಶಸ್ಸು ಕಾಣಲಿ ಎಂದು ಬಬಲೇಶ್ವರ ಹಾರೈಸಿದರು.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಮಕ್ಕಳ ಸಾಹಿತಿ ಪ.ಗು.ಸಿದ್ದಾಪೂರ ಮಾತನಾಡಿ, ಆದರ್ಶ ಕುಟುಂಬಗಳು ಇನ್ನೂ ನಶಿಸಿಲ್ಲ ಎನ್ನುವುದಕ್ಕೆ ದೇಶಪಾಂಡೆ ಮನೆತನವೇ ಸಾಕ್ಷಿ. ದೇಶಪಾಂಡೆ ಅವರು ಮುಳವಾಡದೊಂದಿಗೆ ಈಗ ವಿಜಯಪುರದಲ್ಲೂ ತಮ್ಮ ಹೆಜ್ಜೆಗುರುತು ಮೂಡಿಸಿದ್ದಾರೆ. ತಾವಷ್ಟೇ ಉದ್ಯೋಗಿಗಳಾಗದೇ ಹಲವರಿಗೆ ಉದ್ಯೋಗ ನೀಡುವ ಸುಪರ್ ಮಾರ್ಕೆಟ್ ಆರಂಭಿಸಿದ್ದು ಶ್ಲಾಘನೀಯ ಎಂದರು.
ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷ ಇಂದುಶೇಖರ ಮಣೂರ ಮಾತನಾಡಿ, ಈ ಭಾಗದ ನಿವಾಸಿಗಳ ಅಗತ್ಯತೆಯನ್ನು ಮನಗಂಡು ಸನಾತನ ದೇಶಪಾಂಡೆ ಮತ್ತು ಪ್ರಜಕ್ತ ದೇಶಪಾಂಡೆ ದಂಪತಿ ಇಲ್ಲಿ ಅತ್ಯಾಧುನಿಕ ಸುಪರ್ ಮಾರ್ಕೆಟ್ ಮಳಿಗೆ ಆರಂಭಿಸಿ ಗುಣಮಟ್ಟದ ಉತ್ಪನ್ನಗಳನ್ನು ಪೂರೈಸಲು ಮುಂದಾಗಿದ್ದು ಇದರ ಪ್ರಯೋಜನವನ್ನು ಗ್ರಾಹಕರು ಪಡೆಯಬೇಕು ಎಂದು ಆಶಿಸಿದರು.
ಮುಳವಾಡದ ಮಾಜಿ ಪ್ರಧಾನ ಎಸ್.ಆರ್ ಪಾಟೀಲ, ವೆಂಕಟೇಶ್ ದೇಶಪಾಂಡೆ ಮಾತನಾಡಿದರು.
ಸಾನಿಧ್ಯ ವಹಿಸಿದ ನಗರದ ಸಿದ್ದಾರೂಢ ಮಠದ ಶಂಕರಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.
ಸದಾಶಿವರಾವ್ ದೇಶಪಾಂಡೆ, ಡಿ.ಎಸ್.ದೇಶಪಾಂಡೆ, ಸನಾತನ ದೇಶಪಾಂಡೆ ವೇದಿಕೆ ಮೇಲಿದ್ದರು.
ಡಿ.ಎಸ್.ದೇಶಪಾಂಡೆ ಸ್ವಾಗತಿಸಿ, ವಂದಿಸಿದರು.
ಶ್ರೀಮತಿ ಅರುಂಧತಿ ದೇಶಪಾಂಡೆ, ಡಾ.ಭುವನ್ ದೇಶಪಾಂಡೆ, ಶ್ರೀಮತಿ ಪ್ರಜಕ್ತ ದೇಶಪಾಂಡೆ ಸೇರಿದಂತೆ ಹಲವರಿದ್ದರು.

