ಚಡಚಣ: ಲೋಕಸಭಾ ಚುನಾವಣೆಯನ್ನು ಅತ್ಯಂತ ಯಶಸ್ವಿಯಾಗಿ ಮತ್ತು ಅಚ್ಚುಕಟ್ಟಾಗಿ ನಿರ್ವಹಿಸಲು ಭಾರತೀಯ ಅರೆ ಸೇನಾ ಪಡೆಯ ಯೋಧರು ಹಾಗೂ ಸ್ಥಳೀಯ ಪೊಲೀಸರು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ರವಿವಾರ ಪಥಸಂಚಲನ ನಡೆಸಿದರು.
ಪ್ರೋಬೆಷನರಿ ಎಸ್‌ಪಿ ಕುಮಾರಿ ಶಾಲು ಅವರ ನೇತ್ರತ್ವದಲ್ಲಿ ಪಥಸಂಚಲನ ನಡೆಯಿತು.
ಶಾಂತಿ, ಸುವ್ಯವಸ್ಥಿತವಾಗಿ ಚುನಾವಣೆ ನಡೆಸುವ ಹಿನ್ನಲೆಯಲ್ಲಿ ಸಾರ್ವಜನಿಕರಿಗೆ ಧೈರ್ಯ ತುಂಬಿ, ಚುನಾವಣಾ ಜಾಗೃತಿ ಮೂಡಿಸುವ ಸಲುವಾಗಿ ಹಾಗೂ ಮುಂಜಾಗೃತೆಯ ಕ್ರಮವಾಗಿ ಈ ಪಥಸಂಚಲನ ನಡೆಯಿತು. ಲೋಕಸಭಾ ಚುನಾವಣಾ ನಿಮಿತ್ಯ ಚಡಚಣ ತಾಲೂಕಿನಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಬೆಟಾಲಿನ್ ೧ರ ಸೈನಿಕರು ಹಾಗೂ ಸ್ಥಳೀಯ ಪೊಲೀಸರಿಂದ ಪಥಸಂಚಲನ ಜಾಗೃತಿ ನಡೆಯಿತು.
ಈ ಸಂದರ್ಭದಲ್ಲಿ ಬೆಟಾಲಿನ್ ೧ರ ಕಮಾಂಡೆಂಟ ಸೌರಭ, ಚಡಚಣ ಸಿಪಿಐ ಎಚ್.ಡಿ. ಮುಲ್ಲಾ, ಪಿಎಸ್‌ಐ ರಾಘವೇಂದ್ರ ಖೋತ ಹಾಗೂ ಸ್ಥಳೀಯ ಠಾಣೆಯ ಪೊಲೀಸರು ಪಥಸಂಚಲದಲ್ಲಿ ಪಾಲ್ಗೊಂಡಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

