ವಿಜಯಪುರ: ಜಗತ್ಪ್ರಸಿದ್ಧ ಕಲಾವಿದ ಲಿಯೋನಾರ್ಡ್ ಡಾ ವಿಂಚಿ ಕೇವಲ ಒಬ್ಬ ಕಲಾವಿದ ಅಲ್ಲದೆ ಪ್ರಖ್ಯಾತ ವಾಸ್ತುಶಿಲ್ಪಿ, ಅಂಗರಚನಾ ತಜ್ಞರಾಗಿದ್ದು, ವೈದ್ಯಕೀಯ ಕ್ಷೇತ್ರದಲ್ಲಿ ತನ್ನದೆ ಆದ ಮಹತ್ವದ ಸೇವೆ ಸಲ್ಲಿಸಿದ ಶ್ರೇಷ್ಠ ಕಲಾವಿದ ಇತಿಹಾಸಕಾರರಾಗಿದ್ದರು ಎಂದು ಡಾ. ಫ.ಗು ಹಳಕಟ್ಟಿ ಇಂಜಿನಿಯರಿಂಗ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ. ಅನುರಾಧಾ ಟಂಕಸಾಲಿ ಹೇಳಿದರು.
ಸೋಮವಾರ ನಗರದ ಆರ್ಟ್ ಗ್ಯಾಲರಿಯಲ್ಲಿ ನಡೆದ ವಿಶ್ವದೃಶ್ಯಕಲಾ ದಿನಾಚರಣೆಯ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ನಮ್ಮ ದೇಶದ ಪ್ರಖ್ಯಾತ ಕಲಾವಿದ ರಾಜಾ ರವಿವರ್ಮ ಅವರ ಜನ್ಮದಿನವನ್ನು ನಮ್ಮ ದೇಶದ ಕಲಾ ದಿನವನ್ನಾಗಿ ಆಚರಿಸಬೇಕೆಂದು ಸಲಹೆ ನೀಡಿದರು.
ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ಮಲ್ಲಿಕಾರ್ಜುನ ಭಜಂತ್ರಿ ಮತನಾಡಿ, ಕಲಾವಿದರು ಸರ್ವ ಸ್ವತಂತ್ರರು. ಕವಿ ಕಾಣದನ್ನು ಕಲಾವಿದ ಕಂಡಹಾಗೆ ಸಮಾಜಕ್ಕೆ ತನ್ನದೆ ದೃಶ್ಯಭಾಷೆಯಲ್ಲಿ ಸಂದೇಶಗಳನ್ನು ನೀಡುತಿದ್ದಾರೆ. ಅವರು ನಿಜವಾದ ಸಮಾಜದ ಆಸ್ತಿ ಎಂದರು.
ಕಲಾವಿದ ರಾಜಾ ರವಿವರ್ಮ ಅವರ ಜನ್ಮದಿನಾಚರಣೆಗೆ ಸಂಪೂರ್ಣ ಸಹಾಯ ನೀಡುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಕಲಾವಿದ ಪಿ.ಎಸ್.ಕಡೆಮನಿ ಮಾತನಾಡಿ, ಜಗತ್ತುಕಂಡ ಶ್ರೇಷ್ಠ ಕಲಾವಿದ ಲಿಯೋನಾರ್ಡ್ ಡಾ. ವಿಂಚಿ ಅವರ ಜನ್ಮದಿನವನ್ನು ವಿಶ್ವ ದೃಶ್ಯಕಲಾ ದಿನವನ್ನಾಗಿ ಜಗತ್ತಿನ ಎಲ್ಲ ದೇಶಗಳಲ್ಲಿ ಆಚರಿಸಲಾಗುತ್ತಿದೆ. ನಾವೆಲ್ಲರು ಕಲಾವಿದರಾಗಿ ಅವರ ಆದರ್ಶಗಳನ್ನು ಪಾಲಿಸಿದರೆ, ಉತ್ತಮ ಕಲಾವಿದರಾಗಲು ಸಹಕಾರಿಯಾಗುತ್ತದೆ ಎಂದರು.
ಚಿತ್ರ ರಚಿಸುವ ಮೂಲಕ ಹಿರಿಯ ಕಲಾವಿದ ಎಸ್.ಟಿ ಕೆಂಭಾವಿ ಕಾರ್ಯಕ್ರಮ ಉದ್ಘಾಟಿಸಿದರು.
ಹಿರಿಯ ಕಲಾವಿದ ವಿದ್ಯಾಧರ ಸಾಲಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಕ್ಯಾನವಾಸ ಆರ್ಟ್ ಫೌಂಡೇಶನ್ ಕಾರ್ಯದರ್ಶಿ ರಮೇಶ ಚವ್ಹಾಣ ಕಾರ್ಯಕ್ರಮ ನಿರೂಪಿಸಿದರು.
ಕಲಾಶಿಬಿರದಲ್ಲಿ ಕಲಾವಿದರಾದ ಪಿ.ಎಸ್.ಕಡೆಮನಿ, ವಿದ್ಯಾಧರ ಸಾಲಿ, ವಿ.ವಿ.ಹಿರೇಮಠ, ಬಿ.ಎಸ್.ಪಾಟೀಲ್, ಡಾ.ಶಶಿಕಲಾ ಹೂಗಾರ, ಶಿವಾನಂದ ಅಥಣಿ, ನಯಿಮ್ ನಾಗಠಾಣ, ಸಿದ್ದು ಬಳುಲಗಿಡದ, ಯಾಮಿನಿ ಶಹಾ, ರವಿ ಮುದಗಲ್ಲ, ಮಹಾದೇವಿ ಕೊಪ್ಪದ, ಮದನ ವಗ್ಯಾನವರ, ಲಿಂಗರಾಜ ಕಾಚಾಪೂರ ದಾಕ್ಷಾಯಣಿ ಇಮನಾದ, ಶಬ್ಬಿರ ನದಾಫ್, ರಮೇಶ ಚವ್ಹಾಣ, ವಿಶ್ವನಾಥ ಅಗಸರ, ಸಚಿನ ಚವ್ಹಾಣ, ಭಾಗವಹಿಸಿ ಎರಡು ದಿನಗಳ ಕಾಲ ಕಲಾಕೃತಿಗಳನ್ನು ರಚಿಸುವರು.
ಕಾರ್ಯಕ್ರಮದಲ್ಲಿ ಕಲಾವಿದರಾದ ಎಂ.ಕೆ.ಪತ್ರಾರ, ಕಮಲೇಶ ಬಜಂತ್ರಿ, ಪ್ರಶಾಂತ ಮನಗೂಳಿ, ಗಂಗಾಧರ ಮಾಯಾಚಾರಿ ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
ವಿಶ್ವಕ್ಕೆ ಆಧುನಿಕ ಸ್ಪರ್ಶ ನೀಡಿದ ಚಿತ್ರಕಲಾವಿದರು :ಡಾ.ಅನುರಾಧ
Related Posts
Add A Comment

