ಆಲಮೇಲ: ತಾಲೂಕಿನ ದೇವರನಾವದಗಿ ಗ್ರಾಮದ ಶ್ರೀ ಕಲ್ಲಪ್ಪ ಗುರಪ್ಪ ಗುಗ್ಗರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ಫಲಿತಾಂಶ ಶೇ.೧೦೦ಕ್ಕೆ ನೂರು ಫಲಿತಾಂಶ ಬಂದಿದೆ. ಒಟ್ಟು ೯೨ ವಿದ್ಯಾರ್ಥಿಗಳಲ್ಲಿ ೯೨ ವಿದ್ಯಾರ್ಥಿಗಳು ಉತ್ತಿರಣರಾಗಿದ್ದಾರೆ. ಅದರಲ್ಲಿ ೬೪ ವಿದ್ಯಾರ್ಥಿಗಳು ಡಿಸ್ಟಿಂಗಷನ್, ೨೮ ಪ್ರಥಮ ಸ್ಥಾನದಲ್ಲಿ ಉತ್ತಿರಣರಾಗಿದ್ದಾರೆ. ಇಬ್ಬರು ವಿದ್ಯಾರ್ಥಿಗಳು ರಾಜ್ಯಕ್ಕೆ ನಾಲ್ಕನೇ ರ‍್ಯಾಂಕ ಪಡೆದುಕೊಂಡಿದ್ದು ಮತ್ತು ಪರೀಕ್ಷಾ ಕೇಂದ್ರಕ್ಕು ಪ್ರಥಮ ಮತ್ತು ದ್ವಿತೀಯ ಸ್ಥಾನವು ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ.
ವಿದ್ಯಾರ್ಥಿನಿ ಬನಶಂಕರಿ ಹೂವಿನಹಳ್ಳಿ ಮತ್ತು ಸಂಗಮ್ಮ ಸಿನ್ನೂರ ಇಬ್ಬರು ವಿದ್ಯಾರ್ಥಿನಿಯರು ೫೯೩(೯೮.೮೩%) ಅಂಕ ಪಡೆದು ರಾಜ್ಯಕ್ಕೆ ನಾಲ್ಕನೇ ರ‍್ಯಾಂಕ ಪಡೆದುಕೊಂಡಿದ್ದಾರೆ ಮತ್ತು ಪರೀಕ್ಷಾ ಕೇಂದ್ರಕ್ಕೆ ಪ್ರಥಮ, ಅಂಬಿಕಾ ಮಾನಕರ ೫೯೧(೯೮%) ಅಂಕ ಪಡೆದು ಪರೀಕ್ಷಾ ಕೇಂದ್ರಕ್ಕೆ ದ್ವಿತೀಯ ಸ್ಥಾನ, ಮೇಲಪ್ಪಗೌಡ ಬಿರಾದಾರ ೫೮೯(೯೮%) ಅಂಕ ಪಡೆದು ತೃತೀಯ ಸ್ಥಾನದಲ್ಲಿ ಆಯ್ಕೆ ಆಗಿದ್ದಾರೆ.
ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದು ಅವರ ಸಾಧನೆಗೆ ಸಂಸ್ಥೆ ಅಧ್ಯಕ್ಷ ಮಹಾಂತೇಶ ಗುಗ್ಗರಿ, ಆಡಳಿತ ಮಂಡಳಿ ಹಾಗೂ ಕಾಲೇಜಿನ ಸಿಬ್ಬಂದಿ ವರ್ಗ ಹರ್ಷ ವೆಕ್ತಪಡಿಸಿದ್ದಾರೆ ಎಂದು ಪ್ರಾಚಾರ್ಯ ಎಂ.ಜಿ. ಉಪ್ಪಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಲಮೇಲದ ಗ್ರಾಮೀಣ ಅಭಿವೃದ್ದಿ ವಿದ್ಯಾವರ್ಧಕ ಸಂಸ್ಥೆಯ ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ೧೦೦ಕ್ಕೆ ೧೦೦ ಫಲಿತಾಂಶ ಬಂದಿದೆ. ಒಟ್ಟು ೯೨ ವಿದ್ಯಾರ್ಥಿಗಳಲ್ಲಿ ೯೨ ವಿದ್ಯಾರ್ಥಿಗಳು ಉತ್ತಿರ್ಣರಾಗಿದ್ದಾರೆ.
ವಿದ್ಯಾರ್ಥಿಗಳಾದ ಕುಮಾರ ರಿಹಾನ ಖೋಜಗೀರ ೫೬೩ ಅಂಕ ಪಡೆದು ಕಾಲೇಜಿಗೆ ಪ್ರಥಮ, ರಕ್ಷೀತಾ ಕರ್ಜಗಿ ೫೬೧ ಅಂಕ ಪಡೆದು ದ್ವಿತೀಯ ಸ್ಥಾನ, ರಾಜೇಶ್ವರಿ ಮಠಪತಿ ೫೬೦ ಅಂಕ ಪಡೆದು ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಶಿವುಕುಮಾರ ಗುಂದಗಿ, ಆಡಳಿತ ಮಂಡಳಿ ನಿದೇರ್ಶಕರು ಹಾಗೂ ಶಾಲಾ ಸಿಬ್ಬಂದಿವರ್ಗ ಹರ್ಷ ವ್ಯಕ್ತಪಡಿಸಿದ್ದಾರೆ ಎಂದು ಪ್ರಾಚಾರ್ಯ ಎಸ್.ಬಿ. ಬ್ಯಾಡಗಿಹಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
Subscribe to Updates
Get the latest creative news from FooBar about art, design and business.
Related Posts
Add A Comment
