ಬಸವನಬಾಗೇವಾಡಿ: ತಾಲೂಕಿನ ಇಂಗಳೇಶ್ವರ ಗ್ರಾಮದ ಬಸವೇಶ್ವರರ ತಾಯಿ ಮಾದಲಾಂಬಿಕೆ ಸ್ಮಾರಕ ಭವನ ಮುಂಭಾಗ ಮಂಗಳವಾರ
ಬಸವರಾಜ ಬಿರಾದಾರ ಅವರು ಬರೆದ ಬಸವ ರಾಜಕೀಯ ಪುಸ್ತಕವು ಜೋಡೆತ್ತಿನ ರೈತರಿಂದ ಲೋಕಾರ್ಪಣೆಗೊಂಡಿತು. ಇಂಗಳೇಶ್ವರ ಗ್ರಾಮದ ಹಿರಿಯ ಜೋಡೆತ್ತಿನ ರೈತ ಸಿದ್ರಾಮಪ್ಪ ಬಾಗೇವಾಡಿ ಅವರು ಪುಸ್ತಕ ಲೋಕಾರ್ಪಣೆ ಮಾಡಿ ಮಾತನಾಡಿ, ನಾಲ್ಕು ಕಾಲಿನಬಸವಣ್ಣ ಉಳಿದರೆ ಮಾತ್ರ ನಮ್ಮ ಮುಂದಿನ ಪೀಳಿಗೆಗೆ ಅನ್ನ ದೊರೆಯುವುದು. ಆದರೆ, ಇಂದು ಸಮಾಜವು ಜೋಡೆತ್ತಿನ ಕೃಷಿಕರ ಮಹತ್ವವನ್ನು ಅರಿಯದೇ ನಡೆಯುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಪುಸ್ತಕದ ಲೇಖಕ ಬಸವರಾಜ ಬಿರಾದಾರ ಅವರು ಮಾತನಾಡಿ, ಜೋಡೆತ್ತಿನ ಕೃಷಿ ಪುನಶ್ಚೇತನದಮಾರ್ಗೋಪಾಯಗಳನ್ನು ಪುಸ್ತಕದಲ್ಲಿ ವಿವರಿಸಲಾಗಿದೆ. ಬಸವ ಧರ್ಮದ ಮೂಲ ಬೇರು ಜೋಡೆತ್ತಿನ ಕೃಷಿಯಾಗಿದೆ. ಜೋಡೆತ್ತಿನ ಕೃಷಿ ಉಳಿದರೆ ಮಾತ್ರ ಬಸವ ಧರ್ಮ ಉಳಿಯಲು ಸಾಧ್ಯ ಎಂಬ ವಿಚಾರವನ್ನು ಮೂಲಾಧಾರವಾಗಿ ಇಟ್ಟುಕೊಂಡು ಪುಸ್ತಕ ಬರೆಯಲಾಗಿದೆ ಎಂದರು.
ಜೋಡೆತ್ತಿನ ಕೃಷಿ ಉಳಿದರೆ ಮಾತ್ರ ಬಯಲು ಸೀಮೆಯ ನಾಗರೀಕತೆಗಳು ಉಳಿಯಲು ಸಾಧ್ಯ. ಎತ್ತು ಸಾಕಾಣಿಕೆದಾರರಿಗೆ ಸೂಕ್ತ ಪ್ರೋತ್ಸಾಹ ದೊರೆಯದ ಕಾರಣ ಜೋಡೆತ್ತಿನಕೃಷಿ ಪ್ರತಿ ಗ್ರಾಮಗಳಲ್ಲಿ ನಶಿಸುತ್ತಿದೆ. ಅದಕ್ಕಾಗಿ ಸರ್ಕಾರವು ಜೋಡೆತ್ತಿನ ಕೃಷಿಕರಿಗಾಗಿ ವಿಶೇಷ ಯೋಜನೆ ಜಾರಿಗೆ ತಂದು ಎತ್ತು ಅಧಾರಿತ ಕೃಷಿ ಉಳಿಸಬೇಕಾಗಿದೆ. ಎತ್ತು ಅಧಾರಿತ ಕೃಷಿಕರಿಗೆ ಹಾಗೂ ಸಾವಯವ ಕೃಷಿಕರಿಗೆ ಪೂರಕವಾದ ಮಣ್ಣು ಪುನಶ್ಚೇತನ ಕಾನೂನನ್ನು ವ್ಯವಸ್ಥಿತವಾಗಿ ಅನುಷ್ಠಾನ ಮಾಡಬೆಕಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಲ್ಲಪ್ಪ ಬಾಗೇವಾಡಿ, ಸಿದ್ದಪ್ಪ ಪತ್ತಾರ, ಪ್ರಶಾಂತ ಬಾಗೇವಾಡಿ, ಸಿದ್ದೇಶ ಅವಟಿ, ಸಿದ್ದಲಿಂಗಪ್ಪ ನಂದಿ, ಚಂದ್ರಶೇಖರ ಬಾಗೇವಾಡಿ, ಚಂದ್ರಶೇಖರ ನಂದಿ, ಮಲ್ಲಪ್ಪ ಬೋಕಿ ಇತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

