Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ವಿಶ್ವಶಾಂತಿಗಾಗಿ 14ನೇ ವೇದಾಂತ ಪರಿಷತ್

ಅಡಿಹುಡಿ ಸರ್ಕಾರಿ ಪ್ರೌಢಶಾಲೆ ನೂತನ ಎಸ್‌ಡಿಎಂಸಿ ರಚನೆ

ಜಿಲ್ಲಾಧಿಕಾರಿ ಡಾ.ಆನಂದ ಕೆ. ಅವರಿಂದ ಕೊಲ್ಹಾರ ತಾಲ್ಲೂಕಿನ ವಿವಿಧ ಕಚೇರಿಗಳಿಗೆ ಭೇಟಿ : ಪರಿಶೀಲನೆ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಬರದ ಛಾಯೆ ಮಧ್ಯೆ ಸಂಭ್ರಮದ ಯುಗಾದಿ
(ರಾಜ್ಯ ) ಜಿಲ್ಲೆ

ಬರದ ಛಾಯೆ ಮಧ್ಯೆ ಸಂಭ್ರಮದ ಯುಗಾದಿ

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಬರದ ಛಾಯೆ ಮಧ್ಯೆ ಸಂಭ್ರಮದ ಯುಗಾದಿ

ಬಸವನಬಾಗೇವಾಡಿ: ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಮಂಗಳವಾರ ಯುಗಾದಿ ಪಾಡ್ಯ ಹಬ್ಬವನ್ನು ಬರದ ಛಾಯೆ ಮಧ್ಯೆಯೂ ಸಡಗರ, ಸಂಭ್ರಮದಿಂದ ಜನರು ಆಚರಣೆ ಮಾಡಿದರು.
ಹಬ್ಬದಂಗವಾಗಿ ಅಮವಾಸ್ಯೆ ದಿನದಂದು ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಪಲ್ಲಕ್ಕಿ ಉತ್ಸವಗಳು ಜರುಗಿದವು. ಯುಗಾದಿ ಪಾಡ್ಯದಂದು ಹೊಸ ಬಟ್ಟೆ ತೊಟ್ಟ ಜನರು ತಮ್ಮ ಕುಟುಂಬ ಸದಸ್ಯರೊಂದಿಗೆ ದೇವಸ್ಥಾನಗಳಿಗೆ ತೆರಳಿ ದೇವರ ದರ್ಶನ ಮಾಡಿ ಪೂಜೆ ಸಲ್ಲಿಸಿದರು.
ಪಟ್ಟಣದ ಐತಿಹಾಸಿಕ ಬಸವೇಶ್ವರ ದೇವಸ್ಥಾನಕ್ಕೆ ವಿವಿಧೆಡೆಗಳಿಂದ ಅಪಾರ ಸಂಖ್ಯೆಯ ಜನರು ಆಗಮಿಸಿ ದೇವರ ದರ್ಶನ ಪಡೆದುಕೊಂಡರು. ಯುಗಾದಿ ಪಾಡ್ಯದಂದು ಜನರು ತಮ್ಮ ಮನೆಯ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಅಕ್ಕಪಕ್ಕದ ಮನೆಯವರಿಗೆ, ಸ್ನೇಹಿತರಿಗೆ ಬೇವು ವಿತರಿಸಿ ಯುಗಾದಿ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಬೇವನ್ನು ಸವಿದ ಜನರು ಜೀವನದಲ್ಲಿ ಸಿಹಿ-ಕಹಿ ಅನುಭವವನ್ನು ಸಮಾನವಾಗಿ ಸ್ವೀಕರಿಸಬೇಕೆಂಬ ಸಂದೇಶವನ್ನು ಸಾರಿದರು.
ಪಂಚಾಂಗ ವಾಚನ: ಪಟ್ಟಣದ ಬಸವೇಶ್ವರ ದೇವಸ್ಥಾನದಲ್ಲಿ ಮಂಗಳವಾರ ಸಂಜೆ ರವೀಂದ್ರ ಆಚಾರ್ಯ ಅವರು ಪಂಚಾಂಗ ಪೂಜೆ ನೆರವೇರಿಸಿ ಕ್ರೋದಿನಾಮ ಸಂವತ್ಸರ ಫಲಾಫಲ ವಾಚಿಸಿದರು. ಈ ವರ್ಷದ ಮಳೆ-ಬೆಳೆ, ರಾಶಿ ಫಲ ಸೇರಿದಂತೆ ನವ ಸಂವತ್ಸರ ಪಂಚಾಂಗದ ಸಾರವನ್ನು ವಾಚಿಸಿದರು. ಅನೇಕ ಜನರು ಪಂಚಾಂಗವನ್ನು ಶ್ರವಣ ಮಾಡಿದರು.
ಈ ಸಂದರ್ಭದಲ್ಲಿ ಗುರುಬಸಯ್ಯ ತೆಗ್ಗಿನಮಠ, ಗುರಯ್ಯ ಸಾರಂಗಮಠ, ದೇವಸ್ಥಾನದ ಅರ್ಚಕ ಗೌರಿಶಂಕರ ಚರಂತಿಮಠ, ಬಸವರಾಜ ಹಾರಿವಾಳ, ಸಂಗಪ್ಪ ಡಂಬಳ, ಬಸಣ್ಣ ದೇಸಾಯಿ, ನಿಂಗಪ್ಪ ಅಂಗಡಿ, ಬಸವಂತ ಅಡಗಿಮನಿ, ಮಲ್ಲಪ್ಪ ಗುಂಡಿ ಇತರರು ಇದ್ದರು.
ಪಾಡ್ಯದ ಹೇಳಿಕೆಗಳು: ಪಟ್ಟಣದ ಸಂಗೊಳ್ಳಿ ರಾಯಣ್ಣ ಗಲ್ಲಿಯಲ್ಲಿ ನಡೆದ ಪಲ್ಲಕ್ಕಿ ಉತ್ಸವದಲ್ಲಿ ಶಿವಾನಂದ ಈರಕಾರ ಮುತ್ಯಾ ಅವರು ಬುಧವಾರ ತೃತ ರೋಹಿಣಿ ಮಿರಗದ ಮಳಿಗಿ ಮಂಡಿ ಕಟ್ಟಿಸಿನಿ, ಮುಂಗಾರಿ ಪುಷ್ಯಾ, ಪುರ್ನವಸ್ಸು ಮಳಿಗಿ ಕೂರಗಿ ಕಡಿಯ್ಯಾಕ ಆಯ್ತು, ಆರಿದ್ರ ಮಳಿ ಬಂದು ಮೂಲಿ ಕಸರ ಉಳಿತು, ಮುಂಗಾರಿ ಬೆಳಿ ಸೋಸಿ ನೋಡುವದರೊಳಗ ಚಜ್ಜಿಕಟ್ಟಿಗೆ ಮಕ್ಕಳ ಆಯಿತು, ಹಿಂಗಾರಿ ಹುಬ್ಬಿ, ಉತ್ತರಿ ಮಳಿಗಿ ಮಂಡಿ ಕಟ್ಟಿಸಿನಿ, ಹತ್ತು ಕಾಳಿನಲ್ಲಿ ಬಿಳಿಕಾಳು ಮೇಲು, ಹತ್ತು ಮಳಿಗಳನ್ನು ಉಡಿಕಟ್ಟಿ ಆಡಿನಿ, ಗೋಧಿ, ಕುಸಬಿ, ಕಡ್ಲಿ, ಜೋಳದ ಬೆನ್ನ ಹತ್ಯಾವ, ಹತ್ತಿ ಸಾಲಾಗ ಹಮಣಿ ಒಗದಿನಿ, ವಕ್ಕಲಿಗ್ಯಾ ನಂಬಿಗಿ ಇಟ್ಟು ನಡೆದವರ ಮನಿಯಾಗ ಬಂಗಾರ ಕಂಬಿ ಆಗಿ ಇರತೀನಿ ಎಂದು ಯುಗಾದಿ ಪಾಡ್ಯದ ಹೇಳಿಕೆಗಳನ್ನು ನುಡಿದರು.
ಈ ಸಂದರ್ಭದಲ್ಲಿ ಬಸವರಾಜ ಹಾರಿವಾಳ, ಸಿದ್ದಣ್ಣ ಹೆರಕಲ್, ಶಿವಪ್ಪ ಯರನಾಳ, ಸಂಗಯ್ಯ ಒಡೆಯರ, ಶಾಂತಪ್ಪ ಪಡಶೆಟ್ಟಿ, ಬಸನಗೌಡ ಪಾಟೀಲ, ಮಲ್ಲಯ್ಯ ನರಸಲಗಿಮಠ, ಶರಣು ಉಕ್ಕಲಿ, ಮುತ್ತು ಉಕ್ಕಲಿ, ಬಸಪ್ಪ ಉಕ್ಕಲಿ, ಬಸಪ್ಪ ಹೆರಕಲ್ ಇತರರು ಇದ್ದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ವಿಶ್ವಶಾಂತಿಗಾಗಿ 14ನೇ ವೇದಾಂತ ಪರಿಷತ್

ಅಡಿಹುಡಿ ಸರ್ಕಾರಿ ಪ್ರೌಢಶಾಲೆ ನೂತನ ಎಸ್‌ಡಿಎಂಸಿ ರಚನೆ

ಜಿಲ್ಲಾಧಿಕಾರಿ ಡಾ.ಆನಂದ ಕೆ. ಅವರಿಂದ ಕೊಲ್ಹಾರ ತಾಲ್ಲೂಕಿನ ವಿವಿಧ ಕಚೇರಿಗಳಿಗೆ ಭೇಟಿ : ಪರಿಶೀಲನೆ

ಉತ್ತಮ ನಿರ್ಧಾರ ಯಶಸ್ಸಿನ ಕೀಲಿ ಕೈ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ವಿಶ್ವಶಾಂತಿಗಾಗಿ 14ನೇ ವೇದಾಂತ ಪರಿಷತ್
    In (ರಾಜ್ಯ ) ಜಿಲ್ಲೆ
  • ಅಡಿಹುಡಿ ಸರ್ಕಾರಿ ಪ್ರೌಢಶಾಲೆ ನೂತನ ಎಸ್‌ಡಿಎಂಸಿ ರಚನೆ
    In (ರಾಜ್ಯ ) ಜಿಲ್ಲೆ
  • ಜಿಲ್ಲಾಧಿಕಾರಿ ಡಾ.ಆನಂದ ಕೆ. ಅವರಿಂದ ಕೊಲ್ಹಾರ ತಾಲ್ಲೂಕಿನ ವಿವಿಧ ಕಚೇರಿಗಳಿಗೆ ಭೇಟಿ : ಪರಿಶೀಲನೆ
    In (ರಾಜ್ಯ ) ಜಿಲ್ಲೆ
  • ಉತ್ತಮ ನಿರ್ಧಾರ ಯಶಸ್ಸಿನ ಕೀಲಿ ಕೈ
    In ವಿಶೇಷ ಲೇಖನ
  • ಸರಗೂರು ತಾಲೂಕಿನಲ್ಲಿ ನಿಲ್ಲದ ಕಾಡುಪ್ರಾಣಿ-ಮಾನವ ಸಂಘರ್ಷ
    In (ರಾಜ್ಯ ) ಜಿಲ್ಲೆ
  • ಕೇವಲ ಅಂಕ ಗಳಿಕೆ ಶಿಕ್ಷಣವಲ್ಲˌ ತಹಶೀಲ್ದಾರ ಅನೀಲ ಬಡಿಗೇರ
    In (ರಾಜ್ಯ ) ಜಿಲ್ಲೆ
  • ಸಾರ್ವಜನಿಕ ಬ್ಯಾಂಕುಗಳಿಂದ ಆರ್ಥಿಕ ಸಾಕ್ಷರತೆ ಸಪ್ತಾಹ
    In (ರಾಜ್ಯ ) ಜಿಲ್ಲೆ
  • ಶನಿವಾರ ವಿದ್ಯುತ್ ವ್ಯತ್ಯಯ
    In (ರಾಜ್ಯ ) ಜಿಲ್ಲೆ
  • ಆಂಧ್ರದಲ್ಲಿ ಕೆ.ಜಿ ತಂಬಾಕಿಗೆ 400, ಕರ್ನಾಟಕದಲ್ಲಿ ಕೇವಲ 292 ರೂ.ಹೆಚ್ ಡಿ ಕೋಟೆಯಲ್ಲಿ ಹರಾಜು ಮಾರುಕಟ್ಟೆ ಬಂದ್, ರೈತರ ಆಕ್ರೋಶ
    In (ರಾಜ್ಯ ) ಜಿಲ್ಲೆ
  • ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಡಿಯಲ್ಲಿ ನಿರ್ಗತಿಕರಿಗೆ ವಾತ್ಸಲ್ಯ ಕಿಟ್ ವಿತರಣೆಉದಯರಶ್ಮಿ ದಿನಪತ್ರಿಕೆ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.