ದ್ವಿತಿಯ ಪಿಯುಸಿ ಪರೀಕ್ಷೆ ಕಲಾವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ವೇದಾಂತ ನಾವಿ
ವಿಜಯಪುರ: 2024 ನೇ ಸಾಲಿನ ದ್ವೀತಿಯ ಪಿಯುಸಿ ಪರೀಕ್ಷೆಯ ಕಲಾವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ನಮ್ಮ ಜಿಲ್ಲೆಯ ಎಸ್.ಎಸ್.ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ವೇದಾಂತ ಜ್ಞಾನೋಬಾ ನಾವಿ ಅವರಿಗೆ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದಿಂದ ಅಭಿನಂದಿಸಲಾಯಿತು.
ಅಭಿನಂದಿಸಿ ಮಾತನಾಡಿದ ಜಿಲ್ಲಾ ನೌಕರರ ಸಂಘದ ಜಿಲ್ಲಾಧ್ಯಕ್ಷ ಸುರೇಶ ಶೇಡಶ್ಯಾಳ, ಅತ್ಯಂತ ಕಡು ಬಡತನದಲ್ಲಿ ಬಿಸಿಎಂ ವಸತಿ ನಿಲಯದಲ್ಲಿ ಉಳಿದುಕೊಂಡು ಕಠಿಣವಾದ ಪರಿಶ್ರಮದಿಂದ 596 ಅಂಕಗಳನ್ನು ಗಳಿಸಿ ರಾಜ್ಯಕ್ಕೆ ಕಲಾ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆಯುವದರೊಂದಿಗೆ ಜಿಲ್ಲೆಗೆ ಕೀರ್ತಿ ತಂದಿದ್ದಾನೆಂದು ಪ್ರಶಂಸಿದರು.
ವೇದಾಂತ ಜ್ಞಾನೋಬಾ ನಾವಿ ಅವನ ಕಲಿಕೆಗೆ ಸಹಕರಿಸಿದ ಕಾಲೇಜಿನ ಪ್ರಾಚಾರ್ಯ, ಸಿಬ್ಬಂದಿಗಳಿಗೂ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ, ಚಂದ್ರಶೇಖರ ಹೊಸಮನಿ ಹಾಗೂ ಸಿಬ್ಬಂದಿಗಳಿಗೂ ಅಭಿನಂದನೆಗಳನ್ನು ಸಲ್ಲಿಸಲಾಯಿತು.
ವಿಜಯಪುರ ಜಿಲ್ಲೆ ಕಳೆದ ಸಾಲಿನಲ್ಲಿ 84% ಪ್ರತಿಶತ ಫಲಿತಾಂಶದೊಂದಿಗೆ ರಾಜ್ಯಕ್ಕೆ 5 ನೇ ಸ್ಥಾನದಲ್ಲಿತ್ತು. ಈ ಸಲ ಜಿಲ್ಲೆಯ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡುವುದರೊಂದಿಗೆ 94% ಪಡೆದುಕೊಂಡು ಜಿಲ್ಲೆಯನ್ನು 3 ನೇ ಸ್ಥಾನಕ್ಕೆ ಏರಿಸಿದ್ದಾರೆ. ಈ ಸಾಧನೆಗೈದ ಜಿಲ್ಲೆಯ ಎಲ್ಲ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೂ ಅಭಿನಂದನೆಗಳನ್ನು ಹೇಳಲಾಯಿತು.
ಈ ಸಂದರ್ಭದಲ್ಲಿ ವಿಜಯಕುಮಾರ ಹತ್ತಿ, ರಾಜಶೇಖರ ದೈವಾಡಿ, ಜುಬೇರ ಕೆರೂರ, ಗಂಗಾಧರ ಜೇವೂರ, ಪ್ರಕಾಶ ಗೊಂಗಡಿ, ನಿಜು ಮೇಲಿನಕೇರಿ, ಬಿ. ಬಿ. ಪಾಟೀಲ, ನಾಗೇಶ ಹರೋಲಿ ಮುಂತಾದವರು ಉಪಸ್ಥಿತರಿದ್ದರು.

