ದೇವರಹಿಪ್ಪರಗಿ: ಪ್ರತಿಯೊಬ್ಬ ಅರ್ಹ ಮತದಾರ ಕಡ್ಡಾಯವಾಗಿ ಮತದಾನ ಮಾಡುವುದರ ಮೂಲಕ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಬಲಪಡಿಸಬೇಕು ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಲ್.ಡಿ. ಮುಲ್ಲಾ ಹೇಳಿದರು.
ಪಟ್ಟಣದಲ್ಲಿ ಬುಧವಾರ ಲೋಕಸಭಾ ಚುನಾವಣಾ ಪ್ರಯುಕ್ತ ಸಿಬ್ಬಂದಿಯೊಂದಿಗೆ ಸೇರಿ ಮತದಾನ ಜಾಗೃತಿ ಜಾಥಾ ಕೈಗೊಂಡು ಅರಿವು ಮೂಡಿಸಿ ಮಾತನಾಡಿದರು. ದೇಶದ ಭವಿಷ್ಯ ನಿರ್ಧರಿಸುವಲ್ಲಿ ಚುನಾವಣೆಗಳ ಪಾತ್ರ ಹಿರಿದಾದದು. ಆದ್ದರಿಂದ ಬರುವ ಲೋಕಸಭೆಯ ಚುನಾವಣೆಯ ಅಂಗವಾಗಿ ಮೇ ೭ ರಂದು ಎಲ್ಲರೂ ತಮ್ಮ ಕಾರ್ಯಗಳಿಗೆ ಬಿಡುವು ನೀಡಿ ಮತದಾನದಲ್ಲಿ ಭಾಗವಹಿಸುವುದರ ಮೂಲಕ ತಮ್ಮ ಮತಶಕ್ತಿಯನ್ನು ತೋರಬೇಕು ಎಂದರು.
ಮತದಾನ ಜಾಗೃತಿ ಜಾಥಾ ಪಟ್ಟಣ ಪಂಚಾಯಿತಿಯಿಂದ ಹೋರಟು ಬಸ್ ನಿಲ್ದಾಣ ಮೂಲಕ ಅಂಬೇಡ್ಕರ್ ವೃತ್ತ ತಲುಪಿತು. ಇಲ್ಲಿ ಮಾನವ ಸರಪಳಿ ನಿರ್ಮಿಸಿ ಜಾಗೃತಿ ಮೂಡಿಸುವುದರ ಜೊತೆಗೆ ಮತದಾರರ ಪ್ರತಿಜ್ಞಾವಿಧಿ ಭೋದಿಸಲಾಯಿತು. ನಂತರ ಕಳೆದ ಬಾರಿ ಕಡಿಮೆ ಮತದಾನ ಮಾಡಿದ ೦೮, ೦೯, ೧೧ ನೇ ವಾರ್ಡುಗಳಲ್ಲಿ ಸಂಚರಿಸಿ ಅಲ್ಲಿಯೂ ಸಹ ಮತದಾನದ ಅರಿವು ಮೂಡಿಸಲಾಯಿತು.
ಕಿರಿಯ ಆರೋಗ್ಯ ನಿರೀಕ್ಷಕ ಫಿರೋಜ್ ಮುಲ್ಲಾ, ಸೋಮಶೇಖರ ಭೋವಿ, ಅಕ್ಷಯ ಹಿರೇಮಠ, ಮಾರ್ತಾಂಡ ಗುಡಿಮನಿ, ಬಸು ನಾಟೀಕಾರ ಸೇರಿದಂತೆ ಪೌರ ಕಾರ್ಮಿಕರು, ಸಿಬ್ಬಂದಿ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

