ಮುದ್ದೇಬಿಹಾಳ: ಮಹಾಜ್ಞಾನಿಗಳೂ, ಘನವಿದ್ವಾಂಸರೂ ಆದ ವಿದ್ಯಾಭೂಷಣ ಮುನಿಮಹಾರಾಜರು ದಿಗಂಬರ ದೀಕ್ಷೆಯನ್ನು ಪಡೆದು ಎ.೧೦ ಕ್ಕೆ ೧೫ ವರ್ಷಗಳು ಪೂರ್ಣಗೊಂಡು ೧೬ ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಹಿನ್ನೆಲೆ ತಾಲೂಕಿನ ಸಮಸ್ತ ದಿಗಂಬರ ಜೈನ ಸಮಾಜ ಬಾಂಧವರು ಮತ್ತು ಪರಮಪೂಜ್ಯರ ಶಿಷ್ಯ ಬಳಗದ ವತಿಯಿಂದ ದೀಕ್ಷಾದಿನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.
ಏ.೧೦ ರಂದು ಬೆಳಿಗ್ಗೆ ೯ಗಂಟೆಗೆ ಪಟ್ಟಣದ ಹಡಲಗೇರಿ ರಸ್ತೆಯಲ್ಲಿರುವ ಶ್ರೀ ಪದ್ಮಾವತಿ ದೇವಸ್ಥಾನದ ಸಮುದಾಯಭವನದ “ಶ್ರೀ ಗಣಪತ ರಾವ್ ಹಜಾರೆ ಸಭಾಮಂಟಪ” ದಲ್ಲಿ ಸಮಾರಂಭ ನಡೆಯಲಿದ್ದು, ತಾಲೂಕಿನ ಸಮಸ್ತ ದಿಗಂಬರ ಜೈನಸಮಾಜದ ಶ್ರಾವಕ ಶ್ರಾವಕಿಯರು ಹಾಗೂ ಪರಮಪೂಜ್ಯ ಶ್ರೀ ವಿದ್ಯಾಭೂಷಣ ಮುನಿಮಹಾರಾಜರ ಶಿಷ್ಯ ಬಳಗ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಈ ಸಮಾರಂಭವನ್ನು ಯಶಸ್ವಿಗೊಳಿಸುವಂತೆ ಪ್ರಕಟಣೆ ತಿಳಿಸಿದೆ.
Subscribe to Updates
Get the latest creative news from FooBar about art, design and business.
Related Posts
Add A Comment

