Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಉದಯರಶ್ಮಿ ಇಂದಿನ ದಿನಪತ್ರಿಕೆ ಏಪ್ರಿಲ್ 19, 2026

ಸರ್ಕಾರಿ ಯೋಜನೆಗಳಿಂದ ಬದುಕು ರೂಪಿಸಿಕೊಳ್ಳಿ :ಇಂಡಿ

ನಮ್ಮ ಪರಂಪರೆ ಸಂರಕ್ಷಿಸುವ ಜವಾಬ್ದಾರಿ ನಮ್ಮದು :ಡಾ.ಮಯೂರ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ಸಾಧನೆಯು ಸಾಧಕನ ಸ್ವತ್ತೇ ವಿನಃ ಸೋಮಾರಿಯ ಸ್ವತ್ತಲ್ಲ
ವಿಶೇಷ ಲೇಖನ

ಸಾಧನೆಯು ಸಾಧಕನ ಸ್ವತ್ತೇ ವಿನಃ ಸೋಮಾರಿಯ ಸ್ವತ್ತಲ್ಲ

By Updated:No Comments3 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

’ವಿಶೇಷ ಲೇಖನ’- ಸಂತೋಷ್ ರಾವ್ ಪೆರ್ಮುಡ,ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ-೫೭೪೧೯೮ದೂ:೯೭೪೨೮೮೪೧೬೦

ಯಾರು ಬದುಕಿನಲ್ಲಿ ಯಾವುದೇ ವಿಷಯದ ಕುರಿತಾಗಿ ಕಠಿಣ ಪರಿಶ್ರಮವನ್ನು ಮಾಡುತ್ತಾರೋ ಅವರು ಆಯಾ ಕ್ಷೇತ್ರದಲ್ಲಿ ಸಾಧಕರಾಗಿ ಮೂಡಿ ಬರುತ್ತಾರೆ. ಯಾರು ಸೋಮಾರಿಗಳಾಗಿ ಕಾಲಹರಣ ಮಾಡುತ್ತಾರೋ ಅವರು ಸಾಧಕರ ಸಾಲಿಗೆ ಸೇರಲು ಸಾಧ್ಯವಿಲ್ಲ ಎನ್ನುವುದು ಎಲ್ಲರಿಗೂ ತಿಳಿದಿರುವ ಸತ್ಯ. ಯಾವುದೇ ಶ್ರಮವನ್ನು ಹಾಕದೆ ಮಹಾನ್ ಸಾಧಕರಾಗಿ ಗುರುತಿಸಿಕೊಳ್ಳಲು ಯಾವುದೇ ಸುಲಭದ ದಾರಿಗಳು (ಶಾರ್ಟ್ಕಟ್) ಇಲ್ಲ ಎನ್ನುವುದನ್ನು ಎಲ್ಲರೂ ಅರಿಯಬೇಕಿದೆ.
ಒಂದು ವ್ಯವಸ್ಥೆಯಲ್ಲಿ ಒಬ್ಬರು ಕಠಿಣ ಪರಿಶ್ರಮಿ ಮತ್ತು ಇನ್ನೊಬ್ಬರು ಸೋಮಾರಿ ಇದ್ದು, ಪರಿಶ್ರಮಿಯ ನಿರಂತರ ಸಾಧನೆಗಳು ಮತ್ತು ಸದಾ ಗುರುತಿಸಿಕೊಳ್ಳುವ ರೀತಿಯನ್ನು ನೋಡಿದಾಗ ಸೋಮಾರಿಗೆ ತಾನು ಸಾಧನೆಯಲ್ಲಿ ಹಿಂದೆ ಉಳಿದಿರುವುದಕ್ಕೆ ಬೇಸರ ಆಗುವುದು ಸಹಜ. ಈಗ ಸೋಮಾರಿಯು ಪರಿಶ್ರಮಿಯನ್ನು ಮೀರಿ ಸಾಧಕನಾಗಲು ಏನು ಮಾಡಬೇಕೆಂಬ ಪ್ರಶ್ನೆಯು ಸೋಮಾರಿಯ ಮನಸ್ಸಿನಲ್ಲಿ ಮೂಡುತ್ತದೆ. ಕೆಲವು ಸೋಮಾರಿಗಳು ತಮ್ಮಿಂದ ಮುಂದಿರುವ ಪರಿಶ್ರಮಿ ಸಾಧಕರಿಗಿಂತ ದೊಡ್ಡವರಾಗಿ ಗುರುತಿಸಿಕೊಳ್ಳಲು ಪರಿಶ್ರಮಿಗಳ ಸಾಧನೆಯ ಹಾದಿಗೇ ಅಡ್ಡಗಾಲು ಹಾಕಿ ಅವರಿಗೆ ಕೊಡಬಾರದ ತೊಂದರೆಯನ್ನು ಕೊಟ್ಟು, ಅವರ ಸಾಧನೆಯ ವೇಗಕ್ಕೆ ನಿಯಂತ್ರಣವನ್ನು ಹಾಕುವ ಮೂಲಕ ತಮ್ಮಿಂದಲೂ ಹಿಂದೆ ಬೀಳುವಂತೆ ಮಾಡುತ್ತಾರೆ ಮತ್ತು ಇದರಿಂದ ತಾವು ಗುರುತಿಸಿಕೊಳ್ಳುತ್ತಾರೆ. ಆದರೆ ಇದು ನಿಜವಾಗಿಯೂ ಒಂದು ವ್ಯವಸ್ಥೆ ಮತ್ತು ವ್ಯಕ್ತಿಯ ಬೆಳವಣಿಗೆಯ ದೃಷ್ಟಿಯಿಂದ ಉತ್ತಮವೇ ಎಂದು ಕೇಳಿದರೆ ಖಂಡಿತಾ ಅಲ್ಲ. ಏಕೆಂದರೆ ಸೋಮಾರಿಯು ತಾನು ಕಠಿಣ ಪರಿಶ್ರಮಿಗಿಂತ ಹೆಚ್ಚಿನ ಪ್ರಯತ್ನವನ್ನು ಮಾಡಿ ಗುರುತಿಸಿಕೊಂಡಿಲ್ಲ. ಬದಲಿಗೆ ತನಗಿಂತ ಕಡಿಮೆ ಸಾಧನೆಯನ್ನು ಕಠಿಣ ಪರಿಶ್ರಮಿಯು ಮಾಡುವಂತೆ ಆತನಿಗೆ ತೊಂದರೆ ಕೊಟ್ಟು ತಾನು ಈ ಹಿಂದೆ ಇದ್ದಂತೆಯೇ ಇದ್ದು ಗುರುತಿಸಿಕೊಳ್ಳುವ ಕೆಲಸವನ್ನು ಮಾಡಿದ್ದಾನೆ.
ಇಲ್ಲಿ ಸೋಮಾರಿಯು ಪರಿಶ್ರಮಿಯ ಶ್ರಮ ಮತ್ತು ಬದ್ಧತೆಯನ್ನು ಮೀರಿ ನಿಲ್ಲಲು ಯಾವುದೇ ವಿಶೇಷ ಶ್ರಮವಾಗಲೀ, ಕೆಲಸದ ಯಶಸ್ಸಿನ ಯೋಜನೆಯನ್ನು ಆಗಲೀ ಮಾಡಿಲ್ಲ. ಬದಲಿಗೆ ಪರಿಶ್ರಮಿಯ ಓಡುವ ಕುದುರೆಯ ಕಾಲನ್ನು ಮುರಿದು ಅಥವಾ ಕಾಲಿನ ಲಾಳವನ್ನು ಕಿತ್ತು ನಿಧಾನವಾಗಿ ಓಡುತ್ತಿರುವ ಸೋಮಾರಿಯ ಕುದುರೆಯು ತನ್ನದೇ ಸಹಜವಾದ ವೇಗದಲ್ಲಿ ಗೆಲುವಿನ ಗೆರೆಯನ್ನು ತಲುಪುವಂತೆ ಮಾಡಲಾಗಿದೆ. ಇದರಿಂದ ಸೋಮಾರಿಯ ಕುದುರೆಯ ಓಡುವ ವೇಗವು ಪರಿಶ್ರಮಿಯ ಕುದುರೆಯ ವೇಗಕ್ಕಿಂತ ಕಿಂಚಿತ್ತೂ ಹೆಚ್ಚಾಗಿಲ್ಲ ಮತ್ತು ಹಾಗೆಯೇ ಇತ್ತು ಅಥವಾ ವೇಗವು ಮತ್ತಷ್ಟು ಕಡಿಮೆ ಆಗಿತ್ತು.
ಓಡುವ ಕುದುರೆಯನ್ನು ಓಡದಂತೆ ಅದರ ವೇಗಕ್ಕೆ ಕಡಿವಾಣವನ್ನು ಹಾಕಿ, ನಿಧಾನವಾಗಿ ಓಡುವ ಕುದುರೆಯನ್ನು ಗೆಲ್ಲುವಂತೆ ಮಾಡುವ ವಾಮಮಾರ್ಗವನ್ನು ಅನುಸರಿಸುವ ಬದಲಿಗೆ ಸೋಮಾರಿಯು ಪರಿಶ್ರಮಿಯ ಶ್ರಮಕ್ಕಿಂತ ಹೆಚ್ಚಿನ ಶ್ರಮವನ್ನು ಹಾಕಿ ಯಾ ವಿಭಿನ್ನವಾದ ಕಾರ್ಯಯೋಜನೆಯನ್ನು ಹಾಕಿಕೊಂಡು ಪರಿಶ್ರಮಿಯನ್ನು ಹಿಂದಿಕ್ಕಿ ಮುಂದೆ ಸಾಗಿ ಯಶಸ್ಸನ್ನು ತನ್ನದಾಗಿ ಮಾಡಿಕೊಂಡಾಗ ಮಾತ್ರ ವ್ಯವಸ್ಥೆಯಲ್ಲಿ ಇಬ್ಬರು ಸಾಧಕರು ಹಾಗೂ ಪೈಪೋಟಿದಾರರು ಮೂಡಿ ಬರಲು ಸಾಧ್ಯ ಆಗುತ್ತದೆ.
ಉದಾಹರಣೆ: ೬ ಸೆಂ.ಮೀ ಮತ್ತು ೪ ಸೆಂ.ಮೀ ಅಳತೆಯ ಎರಡು ಸರಳ ರೇಖೆಗಳ ಪೈಕಿ ಯಾವುದು ಉದ್ದವಿದೆ ಎಂದರೆ ಮೊದಲಿನದ್ದು ಸಹಜವಾಗಿಯೇ ಉದ್ದವಿದೆ ಮತ್ತು ಎರಡನೆಯದ್ದು ಅಳತೆಯಲ್ಲಿ ಸಹಜವಾಗಿಯೇ ಗಿಡ್ಡವಿದೆ ಎನ್ನಬಹುದು. ಈಗ ಎರಡೂ ಸರಳರೇಖೆಗಳು ಅಳತೆಯಲ್ಲಿ ಪರಸ್ಪರ ಸಮಾನ ಆಗಬೇಕು ಎಂದರೆ ಏನು ಮಾಡಬೇಕು? ಇದಕ್ಕೆ ಎರಡು ಸಾಧ್ಯತೆಗಳು ಇವೆ. ಮೊದಲನೆಯ ಸಾಧ್ಯತೆಯಲ್ಲಿ ೬ ಸೆಂ.ಮೀ ಅಳತೆಯ ರೇಖೆಯನ್ನು ೨ ಸೆಂ.ಮೀ ಕತ್ತರಿಸಿ ೪ ಸೆಂ.ಮೀ ಅಳತೆಯ ರೇಖೆಗೆ ಸಮಾನ ಮಾಡುವುದು. ಎರಡನೆಯ ಸಾಧ್ಯತೆಯಲ್ಲಿ ೪ ಸೆಂ.ಮೀ ಅಳತೆಯ ರೇಖೆಯನ್ನು ೨ ಸೆಂ.ಮೀ ಹೆಚ್ಚಿಸಿ ೬ ಸೆಂ.ಮೀ ಅಳತೆಯ ರೇಖೆಗೆ ಸಮಾನ ಮಾಡುವುದು. ಈ ಎರಡು ರೀತಿಯ ಸಾಧ್ಯತೆಗಳಲ್ಲಿ ಎರಡನೆಯ ವಿಧಾನವು ಒಂದು ವ್ಯವಸ್ಥೆಯ ಅಭಿವೃದ್ಧಿ ಹಾಗೂ ಬೆಳವಣಿಗೆಯ ದೃಷ್ಟಿಯಿಂದ ಉತ್ತಮ. ಏಕೆಂದರೆ ಅಳತೆಯಲ್ಲಿ ಹೆಚ್ಚು ಸಾಧನೆಯನ್ನು ಮಾಡಿದ ಮೊದಲನೆಯ ಸರಳ ರೇಖೆಯನ್ನು ಕಡಿಮೆ ಸಾಧನೆ ಮಾಡಿದ ರೇಖೆಯ ಅಳತೆಗೆ ಕುಂಠಿತಗೊಳಿಸಿ ಎರಡನ್ನೂ ಸಮಾನ ಮಾಡುವುದಕ್ಕಿಂತ ಕಡಿಮೆ ಸಾಧನೆ ಮಾಡಿದ ರೇಖೆಯನ್ನು ಹೆಚ್ಚು ಸಾಧನೆ ಮಾಡಿದ ರೇಖೆಯ ಮಟ್ಟಕ್ಕೆ ಹೆಚ್ಚಿಸುವುದು ಉತ್ತಮ. ಇದರಿಂದ ಧನಾತ್ಮಕವಾದ ಸಾಧನೆ ಆಗಲು ಸಾಧ್ಯವಾಗುತ್ತದೆ. ಆದ್ದರಿಂದ ಇತರರ ಸಾಧನೆಯನ್ನು ಕಂಡು ಅಯ್ಯೋ ನನ್ನಿಂದ ಆಗಲಿಲ್ಲವಲ್ಲಾ ಎಂದು ಅಸೂಯೆ ಪಡುವ ಬದಲು ತನ್ನ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡು, ವಿಭಿನ್ನ ಕಾರ್ಯತಂತ್ರದ ಮೂಲಕ ಸ್ವ ಸಾಧನೆಯ ಕಡೆಗೆ ಹೆಚ್ಚಿನ ಗಮನವನ್ನು ಕೊಡಬೇಕು.

– ಸಂತೋಷ್ ರಾವ್ ಪೆರ್ಮುಡ,
ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ-೫೭೪೧೯೮
ದೂ:೯೭೪೨೮೮೪೧೬೦

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಉದಯರಶ್ಮಿ ಇಂದಿನ ದಿನಪತ್ರಿಕೆ ಏಪ್ರಿಲ್ 19, 2026

ಸರ್ಕಾರಿ ಯೋಜನೆಗಳಿಂದ ಬದುಕು ರೂಪಿಸಿಕೊಳ್ಳಿ :ಇಂಡಿ

ನಮ್ಮ ಪರಂಪರೆ ಸಂರಕ್ಷಿಸುವ ಜವಾಬ್ದಾರಿ ನಮ್ಮದು :ಡಾ.ಮಯೂರ

ವಿಜಯಪುರ ಲೋಕಾಯುಕ್ತ ಬಲೆಗೆ ಸರ್ಕಾರಿ ಸಿಬ್ಬಂದಿ!

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಉದಯರಶ್ಮಿ ಇಂದಿನ ದಿನಪತ್ರಿಕೆ ಏಪ್ರಿಲ್ 19, 2026
    In ದಿನಪತ್ರಿಕೆ
  • ಸರ್ಕಾರಿ ಯೋಜನೆಗಳಿಂದ ಬದುಕು ರೂಪಿಸಿಕೊಳ್ಳಿ :ಇಂಡಿ
    In (ರಾಜ್ಯ ) ಜಿಲ್ಲೆ
  • ನಮ್ಮ ಪರಂಪರೆ ಸಂರಕ್ಷಿಸುವ ಜವಾಬ್ದಾರಿ ನಮ್ಮದು :ಡಾ.ಮಯೂರ
    In (ರಾಜ್ಯ ) ಜಿಲ್ಲೆ
  • ವಿಜಯಪುರ ಲೋಕಾಯುಕ್ತ ಬಲೆಗೆ ಸರ್ಕಾರಿ ಸಿಬ್ಬಂದಿ!
    In (ರಾಜ್ಯ ) ಜಿಲ್ಲೆ
  • ನಮ್ಮ ನಿಸ್ವಾರ್ಥ ಸತ್ಕಾರ್ಯಗಳು ನಮ್ಮನ್ನು ಕಾಪಾಡುತ್ತವೆ :ಡಾ.ಗೀತಾ
    In (ರಾಜ್ಯ ) ಜಿಲ್ಲೆ
  • ಏ.೨೪ಕ್ಕೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ
    In (ರಾಜ್ಯ ) ಜಿಲ್ಲೆ
  • ಪ್ರತಿಷ್ಠಿತ ಶಾಲೆ ಪ್ರವೇಶಕ್ಕೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನ
    In (ರಾಜ್ಯ ) ಜಿಲ್ಲೆ
  • ಏ.೨೨ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ
    In (ರಾಜ್ಯ ) ಜಿಲ್ಲೆ
  • ಏ.೨೨ರಿಂದ ಸಿಇಟಿ ಪ್ರರೀಕ್ಷೆ: ಸುಸೂತ್ರ ನಡೆಸಲು ಎಡಿಸಿ ಸೂಚನೆ
    In (ರಾಜ್ಯ ) ಜಿಲ್ಲೆ
  • ಹ್ಯಾಂಡ್ ಪೋಸ್ಟ್ ಟು ಕೋಟೆ ಜೋಡಿ ರಸ್ತೆ- ಹೈಟೆಕ್ ಪಾರ‍್ಕ್ ನಿರ‍್ಮಾಣ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.