ಸಿಂದಗಿ: ಶ್ರೀ ಶ್ರೀಕ್ಷೇತ್ರ ಧರ್ಮಸ್ಥಳ ಸಂಸ್ಥೆಯು ೫೨ ಕಾರ್ಯಕ್ರಮಗಳನ್ನು ನಿರ್ವಹಿಸುತ್ತಿದೆ ಎಂದು ತಾಲೂಕು ಯೋಜನಾಧಿಕಾರಿ ಗಿರೀಶಕುಮಾರ ಎಮ್ ಹೇಳಿದರು.
ತಾಲೂಕಿನ ಯರಗಲ್ ಬಿಜೆ ಗ್ರಾಮದ ಭೀರಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಸಂಸ್ಥೆಯ ವತಿಯಿಂದ ೧ಲಕ್ಷ ರೂ. ದೇಣಿಗೆ ಡಿಡಿಯನ್ನು ವಿತರಿಸಿ ಮಾತನಾಡಿದ ಅವರು, ನಮ್ಮ ಸಂಸ್ಥೆಯು ನಿರ್ಗತಿಕರಿಗೆ ಮಾಶಾಸನಾ, ಸುಜ್ಞಾನ ನಿಧಿ, ಶಿಷ್ಯ ವೇತನ, ರುದ್ರಭೂಮಿ ವಾಸ್ತಲ್ಯ ಮನೆ ಮತ್ತು ಸಮುದಾಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ನೀಡುತ್ತಿದೆ ಎಂದು ಹೇಳಿದರು.
ಈ ವೇಳೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಸಂತೋಷಕುಮಾರ ರೈ, ಕಮಿಟಿಯ ಸದಸ್ಯ ಮಡಿವಾಳಪ್ಪಗೌಡ ಕಡ್ಲಗೊಂಡ, ಹಾಶಿಮ ಅವಟಿ, ಬಸಯ್ಯ ಮಹಾ ಸ್ವಾಮಿಗಳು, ಖಾದಿರಬಾಷಾ ಬಂಕಲಗಿ, ಸಾಯಿಪಟೇಲ ಅವಟಿ, ಭೀಮಾಶಂಕರ ಪಾಟೀಲ್, ಗುಂಡಪ್ಪ ಭಾಸಗಿ, ಶರಣಪ್ಪ ಹೂಗಾರ, ಅಂಬಲೆಪ್ಪ ಬಾಲಪ್ಪಗೊಳ, ಕುಪೇಂದ್ರ ಪೂಜಾರಿ, ಬಸು ಘತ್ತರಗಿ, ಸಾತಪ್ಪ ಬಿ ಭಾಸಗಿ, ಸಿದ್ದಲಿಂಗ ಪೂಜಾರಿ, ಬಾಗಮ್ಮ ಪರಗೊಂಡ ಸೇರಿದಂತೆ ಒಕ್ಕೂಟದ ಅದ್ಯಕ್ಷರು, ವಲಯದ ಮೇಲ್ವಿಚಾರಕರು, ಸೇವಾ ಪ್ರತಿನಿದಿಗಳು, ಸಂಘದ ಸದಸ್ಯರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

