ಕಲಕೇರಿಯಲ್ಲಿ ನಡೆದ ಜಿಪಂ ವ್ಯಾಪ್ತಿಯ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರೊ.ರಾಜು ಆಲಗೂರ ವಾಗ್ದಾಳಿ
ಕಲಕೇರಿ: ದೇವರ ಹಿಪ್ಪರಗಿ ಮತಕ್ಷೇತ್ರದ ಕಲಕೇರಿಯಲ್ಲಿ ಭಾನುವಾರ ನಡೆದ ಜಿಪಂ ವ್ಯಾಪ್ತಿಯ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್ ಪಕ್ಷದ ವಿಜಯಪುರ ಲೋಕಸಭೆ ಅಭ್ಯರ್ಥಿ ಪ್ರೊ.ರಾಜು ಆಲಗೂರ, ‘ದೇಶವನ್ನು ಬುಡದಿಂದ ಕಟ್ಟಿದ್ದು ಕಾಂಗ್ರೆಸ್ ಪಕ್ಷ ಆದರೆ ದೇಶವನ್ನು ಹಾಳುಗೆಡವಿ ಪಕೋಡ ಮಾರಲು ಹಚ್ಚಿದ್ದು ಮೋದಿಯವರ ಬಿಜೆಪಿ ಎಂದು ಹೇಳಿದರು.
ನೀವೆಲ್ಲ ಸೌಖ್ಯದಿಂದ ಇರಬೇಕಾದರೆ ಕಾಂಗ್ರೆಸ್ ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೆ ಬರಬೇಕು. ಜನರ ಜೀವನ ಸುಧಾರಿಸಬೇಕಾದರೆ ನಮ್ಮ ಪಕ್ಷಕ್ಕೆ ಮತ ನೀಡಿ, ರಾಜ್ಯ ಸರಕಾರ ನೀಡಿದ್ದ ಭರವಸೆಗಳೆಲ್ಲ ಈಡೇರಿಸಿದೆ. ನಮಗೆ ಓಟು ಕೇಳಲು ನೈತಿಕತೆ ಇದೆ. ಬಿಜೆಪಿಯವರ ಸುಳ್ಳಿನ ಮಾತಗಳನ್ನು ನಂಬಬೇಡಿ. ರಮೇಶ ಜಿಗಜಿಣಗಿಯವರು ಮೂವತ್ತು ವರ್ಷ ಲೋಕಸಭೆ ಸದಸ್ಯರಾಗಿ ಏನು ಮಾಡಿದ್ದಾರೆ ಹೇಳಿ. ಹಾಗಾಗಿ ಇದು ಬದಲಾವಣೆಯ ಸಮಯ, ಅವರನ್ನು ಬದಲಿಸಿ, ನಮಗೆ ಬೆಂಬಲಿಸಿ ಎಂದು ವಿನಂತಿಸಿದರು.
ಮಾಜಿ ಶಾಸಕರಾದ ಶರಣಪ್ಪ ಸುಣಗಾರ ಮಾತನಾಡಿ ನುಡಿದಂತೆ ನಡೆದದ್ದು ಹಾಗೂ ಮುಂದೆಯೂ ನಡೆಯುವುದು ನಮ್ಮ ಕಾಂಗ್ರೆಸ್ ಪಕ್ಷವಾಗಿದ್ದು, ಜನರ ಜೀವನ ಸುಂದರವಾಗಲು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಎಂದರು.
ಮುಖಂಡರಾದ ಸುಭಾಶ ಛಾಯಾಗೋಳ, ಬಿ.ಎಸ್. ಪಾಟೀಲ ಯಾಳಗಿ, ಡಾ.ಪ್ರಭುಗೌಡ ಲಿಂಗದಳ್ಳಿ, ಆನಂದಗೌಡ ದೊಡ್ಡಮನಿ, ಗೌರಮ್ಮ ಮುತ್ತತ್ತಿ, ಲಲಿತಾ ದೊಡ್ಡಮನಿ, ಸರಿತಾ ನಾಯಕ, ರಮೀಜಾ ನದಾಫ್, ಬಶೀರ್‌ಸೇಠ ಬೇಪಾರಿ, ಬಾಳಾಸಾಹೇಬ ಪಾಟೀಲ, ಬಾಪುಗೌಡ ಪಾಟೀಲ, ಸಂಗನಗೌಡ ಪಾಟೀಲ, ಸಾಹೇಬಗೌಡ ಬಿರಾದಾರ, ಜಹಾಂಗೀರಬಾಶಾ ಸಿರಸಗಿ, ಪರಶುರಾಮ ದಿಂಡವಾರ, ರಮೇಶ ಗುಬ್ಬೇವಾಡ, ದಾವಲಸಾಬ ನಾಯ್ಕೋಡಿ, ದೇವೇಂದ್ರ ಜಂಬಗಿ, ಕಾಶೀನಾಥ ತಳವಾರ, ರವೀಂದ್ರ ಸುಧಾಕರ, ಶಿವರಾಯ ಮೋಪಗಾರ, ರಾಜಅಹ್ಮದ ಸಿರಸಗಿ, ದ್ಯಾವಪ್ಪ ನಡುವಿನಕೇರಿ ಸೇರಿದಂತೆ ಅನೇಕರಿದ್ದರು.

