Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ವಿಜಯಪುರ ಜಿಲ್ಲೆಯ 10 ತಾಲೂಕುಗಳು ಬರಪೀಡಿತವೆಂದು ಘೋಷಣೆ

ಉದ್ಯಮಗಳಿಗೆ ಬೆಂಬಲ ನೀಡಿದಾಗ ಮಾತ್ರ ರಾಜ್ಯದ ಅಭಿವೃದ್ಧಿ ಸಾಧ್ಯ

ನಂಬಿಕೆಯೇ ಸಹಕಾರಿ ಸಂಸ್ಥೆಗಳ ಯಶಸ್ಸಿನ ಮೂಲ :ನಿರಾಣಿ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಬಡವರ ಸೇವೆಯೇ ದೇವರ ಪೂಜೆ :ಡಾ.ಚನ್ನವೀರ ಶ್ರೀ
(ರಾಜ್ಯ ) ಜಿಲ್ಲೆ

ಬಡವರ ಸೇವೆಯೇ ದೇವರ ಪೂಜೆ :ಡಾ.ಚನ್ನವೀರ ಶ್ರೀ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಮುದ್ದೇಬಿಹಾಳ: ಬಡವರ ಸೇವೆ ದೇವರ ಪೂಜೆ. ಬಡವರಲ್ಲಿ ಮಾನವೀಯತೆ ಮತ್ತು ದೈವತ್ವದ ಸ್ವರೂಪವನ್ನು ಕಾಣುವವರು ನಿಜವಾದ ಮಾನವರಾಗುತ್ತಾರೆ ಎಂದು ಕುಂಟೋಜಿ ಸಂಸ್ಥಾನ ಹಿರೇಮಠದ ಪೀಠಾಧಿಪತಿ ಡಾ.ಚನ್ನವೀರ ಶಿವಾಚಾರ್ಯರು ನುಡಿದರು.
ಪಟ್ಟಣದ ಹುಡ್ಕೋ ಬಡಾವಣೆಯಲ್ಲಿ ಮನಿಯಾರ್ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ, ರಂಜಾನ್ ಹಬ್ಬದ ದಿನಸಿ ಕಿಟ್ ವಿತರಣಾ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಬಡವರು ಹಬ್ಬ ಆಚರಿಸಿದ ನಂತರದಲ್ಲೇ ನಾನು ಹಬ್ಬ ಆಚರಿಸುವೆ ಎಂದು ಸಂಕಲ್ಪತೊಟ್ಟು ಅಂದಾಜು ೨೪ ವರ್ಷಗಳಿಂದ ನಿರಂತರವಾಗಿ ರಂಜಾನ್ ಹಬ್ಬದ ದಿನಸಿ ಕಿಟ್ ವಿತರಣೆ ಮಾಡುತ್ತ, ಕಣ್ಣು ಕಳೆದುಕೊಂಡವರಿಗೆ ಉಚಿತವಾಗಿ ಶಸ್ತ್ರಚಿಕಿತ್ಸೆಯ ಸೇವೆ ನೀಡುವ ಮೂಲಕ, ಬಡವರ ಕಣ್ಣಲ್ಲಿ ತಮ್ಮ ತಂದೆ ತಾಯಿಗಳನ್ನು ಕಾಣುವ ಅಯ್ಯೂಬ ಮನಿವಾರ ಅವರ ಸೇವೆ ನಿಜಕ್ಕೂ ಶ್ಲಾಘನೀಯ. ಮುಂಬರುವ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಬಡವರ ಸೇವೆ ನೀಡುವ ಶಕ್ತಿ ಭಗವಂತ ಅವರಿಗೆ ನೀಡಲಿ ಎಂದು ಆಶೀರ್ವದಿಸಿದರು.
ಜಿಲ್ಲಾ ಪಂಚಾಯತ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಅವರು ಮಾತನಾಡಿ, ಯಾವುದೇ ಫಲಾಪೇಕ್ಷೆ ಇಲ್ಲದೇ ಮಾಡುವ ದಾನ ಭಗವಂತನಿಗೆ ಸಲ್ಲುತ್ತದೆ. ಮನಿಯಾರ ಅವರು ಈ ವರೆಗೂ ಯಾವುದೇ ಫಲಾಪೇಕ್ಷೆ ಬಯಸದೇ ನಿರಂತರ ದಾನ ಮಾಡುತ್ತ ಬಂದಿದ್ದಾರೆ. ಯಾವುದೇ ಜಾತಿ ಧರ್ಮ ಎನ್ನದೇ ಬಡತನದ ಬೇಗೆಯಿಂದ ಬೆಂದು ತಮ್ಮ ಕಣ್ಣುಗಳನ್ನು ಕಳೆದುಕೊಂಡು, ಶಸ್ತçಚಿಕಿತ್ಸೆ ಮಾಡಿಸಲು ಹಣವಿಲ್ಲದೇ ಪರದಾಡುತ್ತಿರುವ ಬಹುತೇಕರಿಗೆ ಖುದ್ದು ತಾವೇ ಶ್ರಮಿಸಿ ಶಸ್ತç ಚಿಕಿತ್ಸೆ ಮಾಡಿಸುವ ಮೂಲಕ ಮಾನವೀಯತೆ ಮರೆಯುತ್ತಿದ್ದಾರೆ. ಇವರ ಸೇವಾ ಕೈಂಕರ್ಯ ಇನ್ನೂ ಹೆಚ್ಚು ನಡೆಯಲಿ ಎಂದರು.
ಸಮಾಜ ಸೇವಕ ಅಯ್ಯೂಬ ಮನಿಯಾರ ಮಾತನಾಡಿ, ಪ್ರತೀ ವರ್ಷದಂತೆ ಈ ವರ್ಷವೂ ಕಣ್ಣಿನ ಶಸ್ತçಚಿಕಿತ್ಸೆಯನ್ನು ಹಮ್ಮಿಕೊಳ್ಳುವ ಎಲ್ಲ ತಯಾರಿಯನ್ನು ಮಾಡಿದ್ದೆವು. ಆದರೆ ಚುನಾವಣೆ ನೀತಿಸಂಹಿತೆ ಇರುವದರಿಂದ ಸ್ವಲ್ಪ ಅಡೆತಡೆಯಾಗಿದೆ. ಚುನಾವಣೆ ಮುಗಿದ ಬಳಿಕ ಈ ಸೇವೆಯನ್ನು ಮುಂದುವರೆಸುವೆ ಎಂದರು.
ಕಸಾಪ ನಿಕಟಪೂರ್ವ ಅಧ್ಯಕ್ಷ ಎಂ.ಬಿ.ನಾವದಗಿ, ಸಾಹಿತಿ ಲಾಲ್‌ಹುಸೇನ ಕಂದಗಲ್ಲ, ನ್ಯಾಯವಾದಿ ವಿ.ಎಸ್.ಸಾಲಿಮಠ, ಪುರಸಭೆ ಸದಸ್ಯೆ ಸಂಗಮ್ಮ ದೇವರಳ್ಳಿ, ಪೋಸ್ಟ್ ಮಾಸ್ಟರ್ ಮಹಾಬಳೇಶ್ವರ ಗಡೇದ ಮಾತನಾಡಿ, ದೇವರು ಬಹಳ ಜನರಿಗೆ ಸಾಕಷ್ಟು ಐಶ್ವಯ್ಯ ಕೊಟ್ಟಿರುತ್ತಾನೆ. ಆದರೆ ಅವರಲ್ಲಿ ದಾನ ಮಾಡುವ ಗುಣ ಇರಲ್ಲ. ಮನಿಯಾರ ಅವರ ಈ ಸೇವೆಯಲ್ಲಿ ಅವರ ಧರ್ಮಪತ್ನಿ ಪರ್ವೀನ್ ಮನಿಯಾರ ಅವರ ಪಾತ್ರವೂ ಬಹಳ ಮಹತ್ವದ್ದು. ಈ ಕುಟುಂಬ ಇನ್ನೂ ಸಾಕಷ್ಟು ಬಡವರಿಗೆ ಸೇವೆ ನೀಡುವಂತಾಗಲಿ ಎಂದರು.
ಸಾನಿಧ್ಯ ವಹಿಸಿದ್ದ ಅಫ್ತಾಬ್ ಮೌಲಾನಾ ಆಶೀರ್ವಚನ ನೀಡಿದರು. ಮೌಲಾನಾ ಅಲ್ಲಾಭಕ್ಷ ಖಾಜಿ ಕುರಾನ್ ಪಠಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ೩೦೦ ಕ್ಕೂ ಹೆಚ್ಚು ಸೀರೆ ಒಳಗೊಂಡ ದಿನಸಿ ಕಿಟ್ ಜೊತೆಗೆ ಹಾಲು ಖರೀದಿಸಲೆಂದು ತಲಾ ೧೦೦ ರೂ ಗಳನ್ನು ಬಡಕುಟುಂಬಗಳಿಗೆ ವಿತರಿಸಲಾಯಿತು.
ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲ್ಬುರ್ಗಿ, ಡಾ.ವಿ.ಎಂ.ವಿರಾದಾರ, ಪಂಚಮಸಾಲಿ ಸಮಾಜದ ಅಧ್ಯಕ್ಷ ಅಮರೇಶ ಗೂಳಿ, ಐ.ಎಲ್.ಮಮದಾಪೂರ, ಮಹಮ್ಮದ ಸಾತಿಹಾಳ, ರಜಿಯಾಬೇಗಂ ಒಂಟಿ, ಗೀತಾ ಹುರಕಡ್ಲಿ, ಮುಖಂಡ ಲಾಡ್ಲೇಮಶಾಕ ನಾಯ್ಕೋಡಿ, ಅಫ್ತಾಬ ಮನಿಯಾರ, ಶೇಖ ಸೇರಿದಂತೆ ಮತ್ತೀತರರು ಇದ್ದರು. ಮುಜಾಹೀದ ನಮಾಜಕಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮ ನಿರ್ವಹಿಸಿದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ವಿಜಯಪುರ ಜಿಲ್ಲೆಯ 10 ತಾಲೂಕುಗಳು ಬರಪೀಡಿತವೆಂದು ಘೋಷಣೆ

ಉದ್ಯಮಗಳಿಗೆ ಬೆಂಬಲ ನೀಡಿದಾಗ ಮಾತ್ರ ರಾಜ್ಯದ ಅಭಿವೃದ್ಧಿ ಸಾಧ್ಯ

ನಂಬಿಕೆಯೇ ಸಹಕಾರಿ ಸಂಸ್ಥೆಗಳ ಯಶಸ್ಸಿನ ಮೂಲ :ನಿರಾಣಿ

ಸೆ.೩೦ ರೊಳಗೆ ಇಂಡಿ ತಾಲೂಕು ಬರಪೀಡಿತವೆಂದು ಘೋಷಣೆ ಸಾದ್ಯತೆ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ವಿಜಯಪುರ ಜಿಲ್ಲೆಯ 10 ತಾಲೂಕುಗಳು ಬರಪೀಡಿತವೆಂದು ಘೋಷಣೆ
    In (ರಾಜ್ಯ ) ಜಿಲ್ಲೆ
  • ಉದ್ಯಮಗಳಿಗೆ ಬೆಂಬಲ ನೀಡಿದಾಗ ಮಾತ್ರ ರಾಜ್ಯದ ಅಭಿವೃದ್ಧಿ ಸಾಧ್ಯ
    In (ರಾಜ್ಯ ) ಜಿಲ್ಲೆ
  • ನಂಬಿಕೆಯೇ ಸಹಕಾರಿ ಸಂಸ್ಥೆಗಳ ಯಶಸ್ಸಿನ ಮೂಲ :ನಿರಾಣಿ
    In (ರಾಜ್ಯ ) ಜಿಲ್ಲೆ
  • ಸೆ.೩೦ ರೊಳಗೆ ಇಂಡಿ ತಾಲೂಕು ಬರಪೀಡಿತವೆಂದು ಘೋಷಣೆ ಸಾದ್ಯತೆ
    In (ರಾಜ್ಯ ) ಜಿಲ್ಲೆ
  • ಸಿಂದಗಿ-ಆಲಮೇಲ ತಾಲೂಕುಗಳು ಬರಪೀಡಿತವೆಂದು ಘೋಷಣೆ
    In (ರಾಜ್ಯ ) ಜಿಲ್ಲೆ
  • ಸ್ವಾಮಿ ರಾಮಾನಂದ ತೀರ್ಥರ ಸ್ಮಾರಕ ರಾಷ್ಟ್ರೀಯ ಸ್ಮಾರಕವಾಗಿ ಘೋಷಿಸಲಿ
    In (ರಾಜ್ಯ ) ಜಿಲ್ಲೆ
  • ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ವಿಶೇಷ ಅನುದಾನ :ಶಾಸಕ ಮನಗೂಳಿ
    In (ರಾಜ್ಯ ) ಜಿಲ್ಲೆ
  • ಪ್ರಧಾನಿ ಮೋದಿ ಜನ್ಮದಿನ ಪ್ರಯುಕ್ತ ಅಭಿಮಾನಿಗಳಿಂದ ಪೂಜೆ
    In (ರಾಜ್ಯ ) ಜಿಲ್ಲೆ
  • ದೇವರಹಿಪ್ಪರಗಿಯಲ್ಲಿ ವಿಶ್ವಕರ್ಮ ಜಯಂತ್ಯುತ್ಸವ
    In (ರಾಜ್ಯ ) ಜಿಲ್ಲೆ
  • ಭಕ್ತಿಯ ಪುರ & ಹೃದಯವಂತರ ಬೀಡಾಗಿರುವ ಬಬಲೇಶ್ವರ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.