ಮುದ್ದೇಬಿಹಾಳ: ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆ ಆರೋಗ್ಯ ಇಲಾಖೆಯ ವತಿಯಿಂದ ಮತದಾರರಲ್ಲಿ ಮತದಾನ ಜಾಗೃತಿ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಮತದಾನ ನಮ್ಮ ಹಕ್ಕು, ಯಾವ ಭಯವಿಲ್ಲದೆ-ಮತದಾನ ಮಾಡೋಣ, ೧೮ವರ್ಷ ಮೇಲ್ಪಟ್ಟವರು ಕಡ್ಡಾಯವಾಗಿ ಮತದಾನ ಮಾಡಿ ಎನ್ನುವ ಘೋಷಣೆಗಳೊಂದಿಗೆ ಆರೋಗ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಆಶಾ ಕಾರ್ಯಕರ್ತೆಯರು ಇಲ್ಲಿನ ತಾಲೂಕ ಆರೋಗ್ಯ ಅಧಿಕಾರಿಗಳ ಕಾರ್ಯಾಲಯದಿಂದ ಮುಖ್ಯ ಬಜಾರ್ ನಲ್ಲಿರುವ ಗ್ರಾಮ ದೇವತೆ ದೇವಸ್ಥಾನ, ಬಸವೇಶ್ವರ ವೃತ್ತ, ಬಸ್ ನಿಲ್ದಾಣ, ಕಿತ್ತೂರು ರಾಣಿ ಚನ್ನಮ್ಮ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಅಂಬೇಡ್ಕರ ವೃತ್ತ ಸೇರಿಂದತೆ ಪ್ರಮುಖ ಬೀದಿಗಳಲ್ಲಿ ಸಾಗಿ ಜಾಗೃತಿ ಮೂಡಿಸಲಾಯಿತು.
ಅಂಬೇಡ್ಕರ್ ವೃತದಲ್ಲಿ ಜಾಥಾ ಕಾರ್ಯಕ್ರಮವನ್ನು ಉದ್ದೇಶಿಸಿ ತಹಸೀಲ್ದಾರ್ ಬಸವರಾಜ ನಾಗರಾಳ ಮಾತನಾಡಿ, ಪ್ರಜಾಪ್ರಭುತ್ವದ ಆಧಾರ ಸ್ತಂಭ ಮತದಾನ. ೧೮ ವರ್ಷ ಮೇಲ್ಪಟ್ಟ ಎಲ್ಲರು ತಪ್ಪದೆ ಮತ ಚಲಾಯಿಸಿ ಸಂವಿಧಾನ ಪ್ರಕಾರ ಪ್ರಜೆಗಳೇ ಪ್ರಭುಗಳು ಎಂದು ನಿರೂಪಿಸಬೇಕು ಎಂದರು.
ತಾಲೂಕ ಆರೋಗ್ಯ ಅಧಿಕಾರಿ ಡಾ.ಸತೀಶ ತಿವಾರಿ ಮಾತನಾಡಿ, ಯಾವುದೇ ಕಾರಣಕ್ಕೂ ಮತದಾನ ಮಾಡದೆ ಇರಕೂಡದು, ಪ್ರತಿಯೊಬ್ಬರು ಮತ ಚಲಾಯಿಸುವಂತೆ ಜಾಗೃತಿ ಮೂಡಿಸಿ, ಜನರ ಮನವೊಲಿಸುವಂತೆ ಕರೆ ನೀಡಿದರು.
ಅಭಿಯಾನದಲ್ಲಿ ಆರೋಗ್ಯ ಇಲಾಖೆಯ ಡಾ.ಪ್ರವೀಣ್ ಸುನಕಲ್ಲ, ಜೆಓಸಿಸಿ ಬ್ಯಾಂಕ್ ನಿರ್ದೇಶಕರಾದ ಆನಂದಗೌಡ ಬಿರಾದಾರ, ಅನುಸೂಯ ತೇರದಾಳ, ಐ.ಸಿ.ಮಾನಕರ, ಟಿ.ಎಚ್.ಲಮಾಣಿ, ಬಸಮ್ಮ ಸಾರವಾಡ, ಎಂ.ಎಂ.ಟಪಾಲ, ಯಲ್ಲಪ್ಪ ಛಲವಾದಿ, ಎಂ.ಎಸ್.ಗೌಡರ, ಎಸ್.ಸಿ.ರುದ್ರವಾಡಿ, ಸಂತೋಷ ನಾಗರಬೆಟ್ಟ, ಸಂತೋಷ ಅಂಗಡಗೇರಿ, ಪ್ರಶಿಭಾರಾಣಿ ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಹಾಗೂ ಆಶಾ ಮೆಂಟರ್, ಆಶಾ ಕಾರ್ಯಕರ್ತೆಯರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

