ಮುದ್ದೇಬಿಹಾಳ: ಪ್ರತೀ ವರ್ಷ ೬೦ ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುತ್ತಿದ್ದೆವು. ಈ ವರ್ಷ ೧೦೦ ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುವುದರ ಜೊತೆಗೆ, ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ನೀಡಲು ಮುಂದಾಗಿದ್ದೇವೆ ಎಂದು ತಾಲೂಕಿನ ನಾಗರಬೆಟ್ಟ ಆಕ್ಸ್ಫರ್ಡ ಪಾಟೀಲ್ಸ್ ಕಾಲೇಜಿನ ಮುಖ್ಯಸ್ಥ ಎಂ.ಎಸ್.ಪಾಟೀಲ ಹೇಳಿದರು.
ಕಾಲೇಜು ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಟ್ಯಾಲೆಂಟ್ ಅವಾರ್ಡ ಸ್ಪರ್ಧೆಯ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಮ್ಮ ಭಾಗದಲ್ಲಿ ಸಾಕಷ್ಟು ಪ್ರತಿಭಾನ್ವಿತ ವಿದ್ಯಾರ್ಥಿಗಳಿದ್ದಾರೆ. ಆದರೆ ಹೆಚ್ಚಿನ ಫೀ ಭರಿಸಿ ಓದಿಸುವ ಶಕ್ತಿ ಅವರ ಪಾಲಕರಿಗೆ ಇಲ್ಲ. ಹಾಗಾಗಿ ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸಂಪೂರ್ಣ ಉಚಿತ ಶಿಕ್ಷಣ ನೀಡಿ ಪ್ರೋತ್ಸಾಹಿಸುವುದರ ಜೊತೆಗೆ ಮುಂದಿನ ಶಿಕ್ಷಣಕ್ಕೆ ನಮ್ಮ ಸಂಸ್ಥೆಯ ಕೈಲಾದ ಸಹಾಯ ಹಸ್ತ ಚಾಚುವ ನಿರ್ಧಾರವನ್ನು ಮಾಡಿದ್ದೇವೆ. ಬಡ ಪ್ರತಿಭಾನ್ವಿತ ವಿದ್ಯಾರ್ಥಿ ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವುದೇ ನಮ್ಮ ಸಂಸ್ಥೆಯ ಉದ್ದೇಶ ಎಂದರು.
ಢವಳಗಿ ಸರ್ಕಾರಿ ಕಾಲೇಜಿನ ಪ್ರಾಂಶುಪಾಲ ನಾಗರಾಜ ಬಿರಾಜ್ದಾರ ಅವರು ಮಾತನಾಡಿ, ಕುಗ್ರಾಮದಲ್ಲಿ ಪ್ರಾರಂಭಿಸಲಾದ ಸಂಸ್ಥೆ ಸಧ್ಯ ರಾಜ್ಯದಲ್ಲೇ ಸದ್ದು ಮಾಡಿರುವುದು ಹೆಮ್ಮೆಯ ವಿಷಯ. ಪ್ರತೀ ವರ್ಷ ನೀಟ್ ಪರೀಕ್ಷೆಯಲ್ಲಿ ೧೫೦ ಕ್ಕೂ ಹೆಚ್ಚು ಈ ಸಂಸ್ಥೆಯ ವಿದ್ಯಾರ್ಥಿಗಳು ಸ್ಥಾನ ಗಿಟ್ಟಿಸುತ್ತಿದ್ದು, ರಾಜ್ಯದ ಟಾಪ್ ಕಾಲೇಜುಗಳ ಪಟ್ಟಿಯಲ್ಲಿ ಆಕ್ಸ್ಫರ್ಡ ಪಾಟೀಲ್ಸ್ ಸಂಸ್ಥೆ ಗುರುತಿಸಿಕೊಂಡಿದೆ ಎಂದರೆ ಸಂಸ್ಥೆಯ ಮುಖ್ಯಸ್ಥರ ಪರಿಶ್ರಮ, ಬೋಧಕ ಸಿಬ್ಬಂದಿ, ಆಡಳಿತ ಸಿಬ್ಬಂದಿಗಳ ನಿರಂತರ ಶ್ರಮವನ್ನು ಶ್ಲಾಘಿಸಬೇಕು. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ವಿದ್ಯಾರ್ಥಿಗಳು ಈ ಸಂಸ್ಥೆಯಿಂದ ಟಾಪ್ ಲೀಸ್ಟ ನಲ್ಲಿ ಹೊರಬಂದು ಶೈಕ್ಷಣಿಕವಾಗಿ ನಮ್ಮ ದೇಶದ ಪ್ರಗತಿಯ ಒಂದು ಭಾಗವಾಗಲಿ ಎಂದರು.
ಇಳಕಲ್ ನ ಡಯಟ್ ಪ್ರಿನ್ಸಿಪಲ್ ಎಂ.ಎಂ.ಬೆಳಗಲ್ಲ, ಶಿಕ್ಷಕ ಸಂಗಮೇಶ ಹೂಗಾರ, ಸಂಸ್ಥೆಯ ಕಾರ್ಯದರ್ಶಿ ಅಮೀತಗೌಡ ಪಾಟೀಲ ಮಾತನಾಡಿದರು.
ಇದೇ ವೇಳೆ ಕಳೆದ ವರ್ಷ ನೀಟ್ ಪರೀಕ್ಷೆಯಲ್ಲಿ ಸಾಧನೆಗೈದ ೧೫೬ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂಸ್ಥೆಯಲ್ಲಿ ವಿದ್ಯಭ್ಯಾಸ ಪಡೆಯದ ಇಬ್ಬರು ಪ್ರತಿಭಾನ್ವಿತ ಬಡ ವಿದ್ಯಾರ್ಥಿಗಳಿಗೆ ಸಂಸ್ಥೆಯ ವತಿಯಿಂದ ತಲಾ ೨೫ಸಾವಿರ ಸಹಾಯ ಧನ ನೀಡಿ ಪ್ರೋತ್ಸಾಹಿಸಲಾಯಿತು.
Subscribe to Updates
Get the latest creative news from FooBar about art, design and business.
Related Posts
Add A Comment

