ಇಂಡಿ: ಸಾವು ಗೆದ್ದು ಬಂದ ಸ್ವಾತಿಕ್ ನ ಯಶಸ್ವಿ ಕಾರ್ಯಾಚರಣೆ ಹಿನ್ನೆಲೆಯಲ್ಲಿ ಅಸಿಸ್ಟೆಂಟ್ ಕಮಿಷನರ್ ಅಬೀದ್ ಗದ್ಯಾಳ ಅವರಿಗೆ ಸನ್ಮಾಸಿ ಗೌರವಿಸುವ ಮೂಲಕ ತಾಲ್ಲೂಕು – ಜಿಲ್ಲಾ ಆಡಳಿತ, ಜನ ಪ್ರತಿನಿಧಿ ಹಾಗೂ ಸರಕಾರದ ಕಾರ್ಯ ಅತ್ಯಂತ ಶ್ಲಾಘನೀಯ ಎಂದು ಅಭಿನಂದನೆ ಸಲ್ಲಿಸಿದರು.
ಶುಕ್ರವಾರ ಪಟ್ಟಣದಲ್ಲಿರುವ ತಾಲ್ಲೂಕು ಅಡಳಿತ ಸೌಧದ ಉಪವಿಭಾಗ ಕಛೇರಿಯಲ್ಲಿ, ಎಸ್ ಎಸ್ ಪ್ಯಾರಾ ಮೆಡಿಕಲ್ ಕಾಲೇಜು ಹಾಗೂ ನೂತನ “ಸ್ನೇಹ ಸಂಗಮ” ಗೆಳೆಯರ ಬಳಗದ ವತಿಯಿಂದ ಅಭಿನಂದನೆ ಸಲ್ಲಿಸಿದರು.
ತಾಲ್ಲೂಕಿನ ಲಚ್ಯಾಣ ಗ್ರಾಮದಲ್ಲಿ ಆಕಸ್ಮಿಕ ಜರುಗಿದ್ದ ಕೊಳವೆ ಬಾವಿ ದುರಂತದಲ್ಲಿ ಸಾತ್ವಿಕ ಮೃತ್ಯುಂಜಯನಾಗಿ ಹೊರಬಂದಿದ್ದಾನೆ. ಬೋರ್ ವೆಲ್ ನಲ್ಲಿ ಸಿಲುಕಿದ್ದ ಮಗುವಿನ ರಕ್ಷಣೆಯನ್ನು ಸುಮಾರು 20 ಗಂಟೆಗಳ ಕಾಲದ ನಿರಂತರ ಕಾರ್ಯಾಚರಣೆಯಲ್ಲಿ NDRF – SDRF, ಪೊಲೀಸರು, ಅಗ್ನಿಶಾಮಕ ದಳ, ಆರೋಗ್ಯ ಇಲಾಖೆ, ತಾಲ್ಲೂಕು – ಜಿಲ್ಲಾ ಆಡಳಿತದ ಕಾರ್ಯಾಚರಣೆ ಹಾಗೂ ಅವಿರತ ಪರಿಶ್ರಮ ಸಾತ್ವಿಕ ವಿಜಯಶಾಲಿ ಆಗಿದ್ದಾನೆ ಎಂದು ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ನ್ಯಾಯವಾದಿ, ಎಸ್ ಎಸ್ ಪ್ಯಾರಾ ಮೆಡಿಕಲ್ ಕಾಲೇಜು ಹಾಗೂ ಆಂಗ್ಲ ಮಾದ್ಯಮ ಪ್ರಾಥಮಿಕ ಶಾಲೆಯ ಅಧ್ಯಕ್ಷ ಎಸ್ ಬಿ ಕೆಂಬೋಗಿ ಮಾತನಾಡಿದ ಅವರು, ನಮ್ಮ ತಾಲ್ಲೂಕಿನಲ್ಲಿ ಎರಡನೇ ಹಾಗೂ ಜಿಲ್ಲೆಯಲ್ಲಿ ಇದು ಮೂರನೇ ದುರ್ಘಟನೆಯಾಗಿದೆ. ಆದರೆ ಎರಡು ಘಟನೆಯಲ್ಲಿ ಯಶಸ್ವಿ ಕಾರ್ಯಾಚರಣೆ ಮಾಡಿದರೂ ಮಕ್ಕಳನ್ನು ಉಳಿಸಿಕೊಳ್ಳಲಾಗಲಿಲ್ಲ. ಆದರೆ ಈ ಬಾರಿ ಅತ್ಯಂತ ಕ್ರೀಯಾಶೀಲ, ಚುರುಕುತನದಿಂದ ಯೋಜಿತ ಕಾರ್ಯನಿರ್ವಹಣೆಯಿಂದ ಮಗುವಿನ ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದು ಅತ್ಯಂತ ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು.
ಪತ್ರಕರ್ತ ಶಂಕರ್ ಜಮಾದಾರ ಮಾತನಾಡಿ, ಇಡೀ ರಾಜ್ಯದ ಕನ್ನಡಿಗರ ಒಕ್ಕೊರಲಿನ ಪ್ರಾರ್ಥನೆಯಿಂದ, ಈ ಭಾಗದ ದೈವಿ ಶಕ್ತಿ ಕೃಪೆಯಿಂದ ತಾಲ್ಲೂಕು – ಜಿಲ್ಲಾ ಆಡಳಿತ ಹಾಗೂ ಜನಪ್ರತಿನಿಧಿಗಳ ಅವರಿತವಾದ ಪರಿಶ್ರಮದಿಂದ ಸ್ವಾತಿಕ್ ನ ಪುನರ್ಜನ್ಮವಾಯಿತು. ಭೀಮಾತೀರದ ಪಯಣ ಎಂದರೆ, ಇಲ್ಲಿ ಕಷ್ಟಕರ ನಿಲ್ದಾಣಗಳು, ಅಪಾಯಕಾರಿ ಸವಾಲುಗಳು ಹೆಚ್ಚಾಗಿವೆ. ಇಲ್ಲಿ ಜನರೊಂದಿಗೆ ಪರಸ್ಪರ ನಂಬಿಕೆ ವಿಶ್ವಾಸ ಪ್ರಾಮಾಣಿಕ ಕರ್ತವ್ಯಗಳೊಂದಿಗೆ ಮನುಷ್ಯ ಜಾತಿ “ತಾನೊಂದೆ ನೆಲಂ” ಆದಿಕವಿ ಪಂಪನ ಮಾತನ್ನು ಅನುಸರಿಸಿಕೊಂಡು ಸಾಗಿದರೆ ಖಂಡಿತ ಯಶಸ್ವಿಯಾಗಲು ಸಾಧ್ಯ ಎಂದರು.
ಉಪನ್ಯಾಸಕ ಮಹಾಂತೇಶ ಪಾಟೀಲ, ಶಿಕ್ಷಕ ಸಾಹಿತಿ ದಶರಥ ಕೋರಿ ಮಾತನಾಡಿದರು.
ಈ ಸಂದರ್ಭದಲ್ಲಿ ಜೈ ಹನುಮಾನ್ ಸಹಕಾರಿ ಸಂಘದ ಅಧ್ಯಕ್ಷ ಜಗದೇವ ರಾಠೋಡ, ಉಪನ್ಯಾಸಕ ಮಕ್ತುಮ ಮುಲ್ಲಾ, ಫಯಾಜ ಭಾಗವಾನ, ಸುರೇಶ ಡೊಂಗ್ರಜ್, ಶಿವಶರಣ ನಾಟಿಕಾರ, ರೇವಣ್ಣ ಹತ್ತಳ್ಳಿ, ಹಣಮಂತ ಗುಡ್ಲ, ಸಾಯಿಕುಮಾರ ಪಾಟೀಲ, ರಫಿಕ್ ಚೌಧರಿ, ಸುನೀಲ ಚವ್ಹಾಣ ಹಾಗೂ ಇನ್ನೂ ಅನೇಕ ಸ್ನೇಹಿತ ಮಿತ್ರರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

