ಇಂಡಿ: ಕೃಷ್ಣಾ ಮುಖ್ಯ ಕಾಲುವೆಯಿಂದ ಭೀಮೆಗೆ ನೀರು ಹರಿಯ ಬಿಡಲಾಗಿದೆ ಎಂದು ಕೆ.ಬಿ.ಜೆ.ಎನ್ ಎಲ್ ಅಧೀಕ್ಷಕ ಅಭಿಯಂತರ ಮನೋಜಕುಮಾರ ಗಡಬಳ್ಳಿ ತಿಳಿದ್ದಾರೆ.
ಕೃಷ್ಣಾ ಕಾಲುವೆಯಿಂದ ತೆಗ್ಗೆಳ್ಳಿ ಹಳ್ಳ, ಮಾರ್ಸನಳ್ಳಿ, ಅರ್ಜುಣಗಿ, ಹಂಚನಾಳ, ಮಿರಗಿ ಹಳ್ಳಗಳಿಗೆ ನೀರು ಹರಿಯುತ್ತಿದೆ.
ನಂತರ ಮಿರಗಿ ಹಳ್ಳದಿಂದ ಭೀಮಾ ನದಿಗೆ ಸೇರುತ್ತದೆ. ಈ ನೀರು ಜನ ಜಾನುವಾರುಗಳಿಗೆ ಗ್ರಾಮದ ಜನರಿಗೆ, ಅಡವಿ ವಸ್ತಿ ಜನರಿಗೆ ಕುಡಿಯಲು ಉಪಯೋಗವಾಗುತ್ತದೆ ಎಂದು ಗಡಬಳ್ಳಿ ತಿಳಿಸಿದ್ದಾರೆ.
ಸಹಾಯಕ ಅಭಿಯಂತರ ಸುಧಾಕರ ಶಿರಗಣ್ಣನವರ, ಭೀರಪ್ಪ ಪೂಜಾರಿ, ಕಿರಿಯ ಅಭಿಯಂತರ ಸಾಧಿಕ ಹೊನ್ನಟಗಿ ಮತ್ತಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

