ಇಂಡಿ: ಒಂದು ಸೂಜಿಯು ತಯಾರಾಗದ ಸ್ಥಿತಿಯಲ್ಲಿದ್ದ ಮತ್ತು ಬಡತನವನ್ನೆ ಹೊಂದಿದ್ದ ದೇಶವನ್ನು ಆರ್ಥಿಕವಾಗಿ ಊಸಿರಾಡುವಂತೆ ಮಾಡಿದ್ದು ಕಾಂಗ್ರೆಸ್ ಪಕ್ಷ ದೇಶಕ್ಕೆ ಕಾಂಗ್ರೆಸ್ ಅಕ್ಷದ ಕೊಡುಗೆ ಅಪಾರವಾಗಿದೆ ಎಂದು ಕಾಂಗ್ರೆಸ್ ಪಕ್ಷದ ಲೋಕಸಭಾ ಅಧ್ಯರ್ಥಿ ರಾಜು ಆಲಗೂರ ಹೇಳಿದರು.
ತಾಲೂಕಿನ ತಾಂಬಾ ಗ್ರಾಮದ ಶಾದಿ ಮಹಲ್‌ನಲ್ಲಿ ಚುನಾವಣಾ ಪ್ರಚಾರಾರ್ಥ ಹಮ್ಮಿಕೊಂಡ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ಸಂವಿಧಾನ ರಚಿಸಿದ್ದು ಕಾಂಗ್ರೆಸ್, ದುರ್ಬಲರನ್ನು ಎತ್ತಿಹಿಡಿದ ಪಕ್ಷ ಕಾಂಗ್ರೆಸ್, ನಮ್ಮ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಚುನಾವಣೆಯಲ್ಲಿ ಕೊಟ್ಟ ಬರವಸೆಯಂತೆ ೫ಗ್ಯಾರೆಂಟಿಗಳನ್ನು ಕೇವಲ ೮ತಿಂಗಳಲ್ಲಿ ಜಾರಿಗೊಳಿಸಿ ನುಡಿದಂತೆ ನಡೆದಿದ್ದಾರೆ. ಕೇಂದ್ರದಲ್ಲೂ ಕಾಂಗ್ರೆಸ್ ಅಧಿಕಾರ ಹಿಡಿದರೆ ಅಲ್ಲಿಯೂ ಗ್ಯಾರೆಂಟಿಗಳು ಜಾರಿಯಾಗಲಿವೆ. ಜಿಗಜಿಣಗಿಯವರು ಮೂರುಸಲ ಸಂಸದರಾದರು ಲೋಕಸಭೆಯಲ್ಲಿ ಒಂದೇ ಒಂದು ಪ್ರಶ್ನೆ ಕೇಳಿಲ್ಲ. ಎಲ್ಲರು ಒಕ್ಕಟ್ಟಾಗಿ ಎಲ್ಲ ಸಮಾಜಬಾಂದವರು ಕಾಂಗ್ರೆಸ್ ಪಕ್ಷಕ್ಕೆ ಮತನೀಡಿ ಎಂದು ವಿನಂತಿಸಿದರು.
ಸಿಂದಗಿ ಶಾಸಕ ಅಶೋಕ ಮನಗೂಳಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರಮಾಣ ವಚನ ತಗೆದುಕೊಂಡ ತಕ್ಷಣ ಘೋಷಿಸಿದ್ದ ಗ್ಯಾರೆಂಟಿಗಳು ಜಾರಿಗೆತಂದರು. ಈ ಹಿಂದೆ ಮುಖ್ಯಮಂತ್ರಿ ಇದ್ದಾಗ ಅನ್ನ ಭಾಗ್ಯವನ್ನು ನೀಡಿ ಬಡವರ ಹೊಟ್ಟೆ ತುಂಬಿಸಿದ ನಮ್ಮ ಮುಖ್ಯಮಂತ್ರಿಗಳು. ನಾವು ಕೇಲಸಮಾಡಿ ಮತಕೇಳುತ್ತಿದ್ದೆವೆ. ಅಭಿವೃದ್ಧಿ ಪರ ಇರುವ ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರವರಿಗೆ ಮತ ನೀಡಿ, ಈ ಮತ ಸಿದ್ದರಾಮಯ್ಯನವರಿಗೆ ನೀಡಿದಂತೆ ಎಂದು ಮತದಾರರಲ್ಲಿ ವಿನಂತಿಸಿದರು.
ಮಾಜಿ ಶಾಸಕರಾದ ಶರಣಪ್ಪ ಸುಣಗಾರ, ಕಾಂಗ್ರೆಸ್ ಮುಖಂಡರಾದ ರವಿಕುಮಾರ ಚವ್ಹಾಣ, ಗುರುಲಿಂಗಪ್ಪಗೌಡ ಪಾಟೀಲ ಮಾತನಾಡಿದರು.
ಎಸ್.ಎಮ್.ಪಾಟೀಲ ಗಣಿಯಾರ, ಅಪ್ಪಣ್ಣ ಕಲ್ಲೂರ, ಜೆ.ಎಸ್.ಹತ್ತಳ್ಳಿ, ರಾಚಪ್ಪ ಗಳೇದ, ಕೆ.ಎಸ್.ಉಕ್ಕಲಿ, ಸತೀಶ ಅಡವಿ, ರಾಮಚಂದ್ರ ದೊಡಮನಿ, ನಾಗಪ್ಪ ಕುರುಬತಳ್ಳಿ, ರಜಾಕ ಚಿಕ್ಕಗಸಿ, ಪಾರುಕ್ ಮುಲ್ಲಾ, ಸಿದ್ದು ಹತ್ತಳಿ, ಕುಲಪ್ಪ ಬಜಂತ್ರಿ, ಮೈಬೂಬ ಸುತ್ತಾರ, ರಾಯಗೊಂಡ ನಾಟೀಕಾರ, ಮಾಸಿಮ್ ವಾಲಿಕಾರ, ಕಾಂತನಗೌಡ ಪಾಟೀಲ, ಮಹ್ಮದ ದಡೇದ, ಪರಸು ಬಿಸನಾಳ, ಸಿದ್ದಣ್ಣ ಕಿಣಗಿ ಮತ್ತಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

