ಸಿಂದಗಿ: ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮತ್ತು ಪಕ್ಷದವರು ನನ್ನನ್ನೇ ನೇರ ಗುರಿಯಾಗಿಸಿಕೊಂಡು ವಿಮರ್ಶೆ ಮಾಡುತ್ತಿದ್ದಾರೆ ಎಂದು ಬಿಜೆಪಿ ಲೋಕಸಭಾ ಅಭ್ಯರ್ಥಿ ರಮೇಶ ಜಿಗಜಿಣಗಿ ಹೇಳಿದರು.
ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಶುಕ್ರವಾರ ಸಾಯಂಕಾಲ ಲೋಕಸಭಾ ಚುನಾವಣಾ ನಿಮಿತ್ಯವಾಗಿ ಹಮ್ಮಿಕೊಂಡ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೆ ದೀನದಲಿತರ ಪರವಾಗಿ ಇರುವ ಅನುದಾನವನ್ನು ಯಾವ ಸರಕಾರಗಳೂ ಬೇರೊಂದಕ್ಕೆ ಬಳಕೆ ಮಾಡಿಕೊಂಡಿರಲಿಲ್ಲ. ಆದರೆ ರಾಜ್ಯ ಕಾಂಗ್ರೆಸ್ ಸರಕಾರ ದಲಿತರ ಎಸ್‌ಸಿಪಿಟಿ ಹಣವನ್ನು ಬೇರೆ ಬೇರೆ ಇಲಾಖೆಗೆ ಬಳಸಿದ್ದು ನ್ಯಾಯವೇ? ದಲಿತರನ್ನು ಕಾಂಗ್ರೆಸ್ ಪಕ್ಷ ಕೇವಲ ಮತ ಬ್ಯಾಂಕ್ ಆಗಿ ಬಳಕೆ ಮಾಡಿಕೊಳ್ಳುತ್ತಿದೆ. ರಾಜ್ಯದಲ್ಲಿ ದಲಿತರಿಗೆ ಅನ್ಯಾಯವಾದಾಗ ಎಸ್.ಸಿ ಮಹಾದೇವಪ್ಪ, ರಾಜು ಆಲಗೂರ ಏನು ಮಾಡುತ್ತಿದ್ದಿರಿ? ನನಗೆ ಕಾಂಗ್ರೆಸ್ ಪಕ್ಷಕ್ಕೆ ಆಫರ್ ಬಂದಾಗ ತಿರಸ್ಕರಿಸಲು ಕಾರಣ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಸಮಾಧಿಗೆ ಸ್ಥಳ ಕೊಡದ ಪಕ್ಷಕ್ಕೆ ನನಗೇನು ಎಂಬ ಕಾರಣಕ್ಕೆ ಬಿಜೆಪಿ ಪಕ್ಷ ಸೇರಿದ್ದೇನೆ. ಅದನ್ನು ಪಂಚತೀರ್ಥ ಮಾಡಿ ಪ್ರವಾಸಿ ಕ್ಷೇತ್ರವನ್ನಾಗಿ ಮಾಡಿದ್ದು ಬಿಜೆಪಿ ಸರಕಾರ ಎಂದು ಹೇಳಿದರು.
ಈ ವೇಳೆ ಮಾಜಿ ವಿಪ ಸದಸ್ಯ ಅರುಣ ಶಹಾಪುರ ಮಾತನಾಡಿ, ಕಾಂಗ್ರೆಸ್ ಪಕ್ಷ ಅನಗತ್ಯವಾಗಿ ನರೇಂದ್ರ ಮೋದಿ ಅವರನ್ನು ಕಾಂಗ್ರೆಸ್ ಪಕ್ಷ ಹೀಯಾಳಿಸಿ ಟೀಕೆ ಮಾಡಿ ಪ್ರಚಾರ ಮಾಡುತ್ತಿರುವುದು ಸರಿಯಲ್ಲ, ರೂ.೧ಲಕ್ಷ ಕೋಟಿ ಅನುದಾನ ತಂದು ಅಭಿವೃದ್ಧಿ ಮತ್ತು ವೈಯಕ್ತಿಕ ಆಧಾರದ ಮೇಲೆ ಜಿಗಜಿಣಗಿ ಅವರು ಮತಯಾಚನೆ ಮಾಡುತ್ತಿದ್ದಾರೆ. ಜಿಗಜಿಣಗಿ ಅವರನ್ನು ಬೈಯೋದರಿಂದ ನಿಮಗೆ ಮತ ಬರೋಲ್ಲ. ಕಾಂಗ್ರೆಸ್ ಸಂಘಟನೆಗೆ ಜಿಲ್ಲಾಧ್ಯಕ್ಷರಾಗಿ ನೀವೇ ನ್ಯಾಯಕೊಡೋದು ಆಗಿಲ್ಲ. ಅದನ್ನು ಬಿಟ್ಟು ಜಿಗಜಿಣಗಿ ಅವರ ಮೇಲೆ ಅರೋಪಿಸುವುದು ಸರಿಯಲ್ಲ ಎಂದು ಹರಿಹಾಯ್ದರು.
ಕಾಂಗ್ರೆಸ್ ಪಕ್ಷದಲ್ಲಿ ಅಭ್ಯರ್ಥಿ ಇಲ್ಲದ ಕಾರಣ ಆಲಗೂರಗೆ ಟಿಕೆಟ್ ನೀಡಿದ್ದಾರೆ. ಇವೆಲ್ಲಾ ಟೀಕೆ ಟಿಪ್ಪಣಿ ಬಿಟ್ಟು ನೀವು ಶಾಸಕರಾಗಿದ್ದ ಸಮಯದಲ್ಲಿ ನಿಮ್ಮ ಜನಾಂಗಕ್ಕೆ ಕೊಟ್ಟ ಕೊಡುಗೆ ತೋರಿಸಿ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಮಾಜಿ ರಮೇಶ ಭೂಸನೂರ ಮಾತನಾಡಿದರು.
ಈ ವೇಳೆ ಮಲ್ಲಿಕಾರ್ಜುನ ಜೋಗುರ, ಸಿದ್ದು ಬುಳ್ಳಾ, ಎಸ್.ಎಸ್.ಹಿರೇಮಠ, ಗುರು ತಳವಾರ, ಸಾಯಬಣ್ಣ ದೇವರಮನಿ, ಖಾಜು ಬಂಕಲಗಿ, ಯಲ್ಲು ಇಂಗಳಗಿ ಸೇರಿದಂತೆ ಬಿಜೆಪಿ ಪಕ್ಷದ ಕಾರ್ಯಕರ್ತರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

