ಚಡಚಣ: ಪಟ್ಟಣದ ಸಂಗಮೇಶ್ವರ ಕಲಾ , ವಾಣಿಜ್ಯ, ವಿಜ್ಞಾನ ಮಹಾವಿದ್ಯಾಲಯ ಚಡಚಣದಲ್ಲಿ ರಾಷ್ಟ್ರೀಯ ವಿಜ್ಞಾನ ದಿನ ನಿಮಿತ್ತ ಪಾಲಿಮರ್ ನ್ಯಾನೊಕಾಂಪೊಸಿಟ್ಸ್ ಎಂಬ ಒಂದು ದಿನದ ಕಾರ್ಯಾಗಾರ ಹಮ್ಮಿಕೊಳ್ಳಲಾಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಸರ್ಕಾರಿ ಪ್ರಥಮ ದರ್ಜೆಯ ಕಾಲೇಜು ವಿಜಯಪುರದ ಬೌತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಆನಂದ ಕುಲಕರ್ಣಿ ಮಾತನಾಡಿ, ಒಂದು ಪಾಲಿಮರ್ ಎಂಬುದು ಬಹುದೊಡ್ಡ ಅಣುಗಳನ್ನು ಒಳಗೊಂಡಿರುವ ಒಂದು ವಸ್ತು ಅಥವಾ ಇದು ಅನೇಕ ಪುನರಾವರ್ತಿತ ಉಪಘಟಕಗಳಿಂದ ಕೂಡಿದೆ. ಅವುಗಳ ವಿಶಾಲ ವರ್ಣಪಟಲದ ಗುಣಲಕ್ಷಣಗಳಿಂದಾಗಿ, ಸಂಶ್ಲೇಷಿತ ಮತ್ತು ನೈಸರ್ಗಿಕ ಪಾಲಿಮರ್‌ಗಳು ದೈನಂದಿನ ಜೀವನದಲ್ಲಿ ಅಗತ್ಯ ಮತ್ತು ಸರ್ವತ್ರ ಪಾತ್ರಗಳನ್ನು ನಿರ್ವಹಿಸುತ್ತವೆ. ಪಾಲಿಮರ್‌ಗಳು ಪಾಲಿಸ್ಟೈರೀನ್‌ನಂತಹ ಪರಿಚಿತ ಸಿಂಥೆಟಿಕ್ಪ್ಲಾಸ್ಟಿಕ್‌ಗಳಿಂದ ಹಿಡಿದು ನೈಸರ್ಗಿಕ ಬಯೋಪಾಲಿಮರ್‌ಗಳವರೆಗೆ, ಜೈವಿಕ ರಚನೆ ಮತ್ತು ಕಾರ್ಯಕ್ಕೆ ಮೂಲಭೂತವಾದ ಪ್ರೋಟೀನ್‌ಗಳು. ಪಾಲಿಮರ್‌ಗಳು, ನೈಸರ್ಗಿಕ ಮತ್ತು ಸಂಶ್ಲೇಷಿತ ಎರಡೂ, ಮೊನೊಮರ್‌ಗಳು ಎಂದು ಕರೆಯಲ್ಪಡುವ ಅನೇಕ ಸಣ್ಣ ಅಣುಗಳ ಪಾಲಿಮರೀಕರಣದ ಮೂಲಕ ರಚಿಸಲ್ಪಡುತ್ತವೆ ಎಂದರು.
ಇದೇ ಸಂದರ್ಭದಲ್ಲಿ ಆಡಳಿತಾಧಿಕಾರಿ ಎಸ್.ಎಸ್.ಚೋರಗಿ, ಪ್ರಾಚಾರ್ಯ ಡಾ. ಎಸ್.ಬಿ.ರಾಠೋಡ, ನಮ್ಮ ಭಾರತ ದೇಶಕ್ಕೆ ವಿಜ್ಞಾನಿಗಳ ಕೊಡುಗೆ ಅಪಾರ ಎಂದು ತಮ್ಮ ಅಧ್ಯಕ್ಷೀಯ ಮಾತುಗಳಲ್ಲಿ ಹೇಳಿದರು. ಗ್ರಂಥಪಾಲಕ ಎಂ.ಕೆ. ಬಿರಾದಾರ,
ಐ.ಕ್ಯೂ.ಎ.ಸಿ.ಯ ಸಂಯೋಜಕ ಡಾ.ಎಸ್.ಎಸ್.ದೇಸಾಯಿ, ದೈಹಿಕ ಶಿಕ್ಷಣ ನಿರ್ದೇಶಕ ಎಸ್ ಎಸ್ ಅವಟಿ, ಪ್ರೊ.ದಿವ್ಯಾಶ್ರೀ ಭೋಗಾರ, ಪ್ರೊ.ಆಕಾಶ ಜಂಗಮಶೆಟ್ಟಿ, ಪ್ರೊ. ಗುರುರಾಜ ಮುಚ್ಚಂಡಿ, ಪ್ರೊ.ಅಣ್ಣಾರಾಯ ಪಾಟೀಲ, ಪ್ರೊ.ಎ.ಎ.ಬಿಡೆಗಾರ, ಪ್ರೊ.ಅಶ್ವೀನಿ ಹೀರೆಮಠ ಮುಂತಾದ ಸಿಬ್ಬಂದಿ ವರ್ಗ ಇದ್ದರು.
ಪ್ರೊ.ಬಸವರಾಜ ಯಳ್ಳೂರ ಕಾರ್ಯಕ್ರಮ ನಡೆಸಿಕೊಟ್ಟರು, ಪ್ರೋ.ನೇಹಾ ಉಮರಾಣಿ ವಂದಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

