ವಿಜಯಪುರ: ಭಾರತ ಕಂಡ ಶ್ರೇಷ್ಠ ವಿಜ್ಞಾನಿಗಳಲ್ಲಿ ಸರ್ ಸಿ.ವಿ ರಾಮನ್ ಅವರು ಅತ್ಯಂತ ಪ್ರಮುಖರು. ಇವರು ರಾಮನ್ ಪರಿಣಾಮ ಎಂಬ ಹೊಸ ಆವಿಷ್ಕಾರ ನೀಡಿ ಸಮುದ್ರದ ನೀರು ನೀಲಿಯಾಗಿ ಕಾಣಲು ಕಾರಣ ಬೆಳಕಿನ ಚದುರುವಿಕೆ ಎಂಬ ಹೊಸ ವೈಜ್ಞಾನಿಕ ಸಂಶೋಧನೆ ಮಾಡಿದ ಮೊದಲಿಗ ಎಂದು ಶೈಲಶ್ರೀ ನಾಯಕ ಅವರು ಅಭಿಪ್ರಾಯ ಪಟ್ಟರು.
ಸ್ಥಳಿಯ ದೇವರಹಿಪ್ಪರಗಿಯ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದ ರಾಷ್ಟ್ರೀಯ ವಿಜ್ಞಾನ ದಿನದ ಪ್ರಯುಕ್ತ ಮಾತನಾಡಿದ ಅವರು, 1930ರಲ್ಲಿ ನೋಬೆಲ್ ಪ್ರಶಸ್ತಿಯನ್ನು ಪಡೆದ ಭಾರತೀಯ ಭೌತಶಾಸ್ತ್ರಜ್ಞ ಸರ್ ಸಿ.ವಿ ರಾಮನರವರು ರಾಮನ್ ಪರಿಣಾಮ ಆವಿಷ್ಕಾರವನ್ನು ಗೌರವಿಸಲು ಪ್ರತಿವರ್ಷ ಫೆಬ್ರುವರಿ 28ರಂದು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಿಸಲಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಶಾಲೆಯ ಮಕ್ಕಳಿಂದ ವಿವಿಧ ವಿಜ್ಞಾನ ವಿಷಯಕ್ಕೆ ಸಂಭಂದಿಸಿದ ಮಾದರಿ, ಚಿತ್ರಗಳನ್ನು ತಯಾರಿಸಿ ವಸ್ತು ಪ್ರದರ್ಶನ ಮಾಡಲಾಯಿತು. ವಿದ್ಯಾರ್ಥಿಗಳಿಗೆ ವಿಜ್ಞಾನ ಮತ್ತು ತಂತ್ರಜ್ಞಾನದ ಮಹತ್ವವನ್ನು ಶಾಲೆಯ ಹಿರಿಯ ಶಿಕ್ಷಕ ರಮೇಶ ತರಲಗಟ್ಟಿಯವರು ತಿಳಿಸಿದರು.
ಶಾಲೆಯ ಶಿಕ್ಷಕರಾದ ಮಹೇಶ ಕಂಟಿಗೊಂಡ, ಮಧುಮತಿ,ರೇಖಾ ಹಜಾರೆ, ಎಲ್.ಎಸ್ ಹುಗ್ಗಿ,ರಾಜು ಕಂಬಾರ,ಮಲ್ಲಿಕಾರ್ಜುನ ಓಡಗೇರಿ,ಸಂಜಯ್ ಗಚ್ಚಿನಕಟ್ಟಿ, ಶ್ರೀಕಾಂತ ರಜಪೂತ ಮತ್ತಿತರರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

