ಬಸವನಬಾಗೇವಾಡಿ: ರಾಜ್ಯ ಸಭಾ ಚುನಾವಣೆಯಲ್ಲಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದ ನಾಶೀರ್ ಹುಸೇನ್ ಅವರ ವಿಜಯೋತ್ಸವದಲ್ಲಿ ಪಾಕಿಸ್ತಾನ ಎಂದು ಜಿಂದಾಬಾದ್ ಘೋಷಣೆ ಕೂಗಿರುವುದು ನಾಚಿಕೆಗೇಡಿನ ವಿಷಯವಾಗಿದೆ ಎಂದು ಭಾಜಪ ಮಹಿಳಾ ಮೋರ್ಚಾ ಅಧ್ಯಕ್ಷೆ ಸಾವಿತ್ರಿ ಕಲ್ಯಾಣಶೆಟ್ಟಿ ಬಲವಾಗಿ ಖಂಡಿಸಿದ್ದಾರೆ.
ಈ ರೀತಿ ರಾಜ್ಯದಲ್ಲಿ ಪದೇ ಪದೇ ಘಟನೆಗಳು ನಡೆಯುತ್ತಿದ್ದರೂ ಕೂಡ ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ಪದೇ ಪದೇ ಇಂಥ ಘಟನೆಗಳು ನಡೆಯುತ್ತಿರುವುದು ರಾಜ್ಯದ ಜನ ತಲೆತಗ್ಗಿಸುವಂತಾಗಿದೆ. ಇಲ್ಲಿವರೆಗೂ ಕಾಂಗ್ರೆಸ್ ಪಕ್ಷದ ಮುಖಂಡರು ಈ ಘಟನೆಯನ್ನು ಬಲವಾಗಿ ಖಂಡಿಸಲು ಹಿಂದೇಟು ಹಾಕುತ್ತಿರುವ ಹಿಂದಿನ ಉದ್ದೇಶವೇನು ಎನ್ನುವುದು ರಾಜ್ಯದ ಜನರಿಗೆ ಅರ್ಥವಾಗಬೇಕಾಗಿದೆ. ಅಪರಾಧಿಗಳನ್ನು ತ್ವರಿತವಾಗಿ ಬಂಧಿಸಬೇಕು. ಇಂದು ವಿಧಾನಸಭೆಯಲ್ಲಿ ಸಚಿವರುಗಳಾದ ಪ್ರಿಯಾಂಕ ಖರ್ಗೆ ,ಕೃಷ್ಣ ಬೈರೇಗೌಡ, ಶಿವರಾಜ್ ತಂಗಡಿಗಿಯವರು ವರ್ತಿಸಿದ ರೀತಿ ನೋಡಿದರೆ ತಲೆತಗ್ಗಿಸುವಂತಾಗಿದೆ. ನಾಸಿರ್ ಹುಸೇನ್ ಅವರು ಪತ್ರಕರ್ತರಿಗೆ ಅವಾಚ್ಯವಾಗಿ ನಿಂದಿಸಿರುವರು ಖಂಡನೀಯವಾಗಿದೆ. ಯಾವುದೇ ಬುದ್ಧಿಜೀವಿಗಳು ಪ್ರಗತಿಪರರು ಸಂವಿಧಾನದ ಬಗ್ಗೆ ಉದ್ದುದ್ದ ಭಾಷಣ ಬಿಗಿಯುವರು ಈ ಕುರಿತು ಮೌನ ವಹಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರ ಬಂದ ಮೊದಲನೇ ದಿನವೇ ಬೆಳಗಾವಿಯಲ್ಲಿ ಪಾಕಿಸ್ತಾನದ ಘೋಷಣೆ ಕೂಗಿರುವುದು ಇನ್ನೂ ನೆನಪಿದೆ. ಮಾತೆತ್ತಿದರೆ ಅಪರಾಧಿಗಳಿಗೆ ಶಿಕ್ಷೆ ವಿಧಿಸಲಾಗುವುದು ಎಂದು ಪದೇ ಪದೇ ಹೇಳಿದ ಪ್ರಿಯಾಂಕಾ ಖರ್ಗೆ ಈಗ ಸುಮ್ಮನಿರುವುದು ಏಕೆ. ಒಟ್ಟಾರೆಯಾಗಿ ಪರೋಕ್ಷವಾಗಿ ಕಾಂಗ್ರೆಸ್ ಪಕ್ಷದ ಬೆಂಬಲದಿಂದ ಇಂಥ ಘಟನೆಗಳ ಪದೇ ಪದೇ ನಡೆಯುತ್ತಿವೆ. ಮೊಳಕೆಯಲ್ಲಿ ಚೂಟಿದರೆ ಮುಂದೆ ಇಂತಹ ಘಟನೆಗಳು ನಡೆಯುವುದಿಲ್ಲ. ಈ ವಿಷಯದಲ್ಲಿ ರಾಜ್ಯಪಾಲರು ಮಧ್ಯಪ್ರವೇಶಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಹೇಳಬೇಕೆಂದು ಭಾಜಪ ಮಹಿಳಾ ಮೋರ್ಚಾ ಅಧ್ಯಕ್ಷೆ ಸಾವಿತ್ರಿ ಕಲ್ಯಾಣಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

