ಕಲಕೇರಿ: ಸಮೀಪದ ಸುಕ್ಷೇತ್ರ ತಿಳಗೂಳ ಗ್ರಾಮದಲ್ಲಿ ಶ್ರೀ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಜಗನ್ಮಾತೆ ಶ್ರೀ ದೇವಿಯ ಮಾಹಾಪುರಾಣ ಪ್ರಾರಂಭೋತ್ಸವ ಕಾರ್ಯಕ್ರಮ ನಡೆಯಿತು.
ಶ್ರೀ ದೇವಿ ಪುರಾಣವು ಮಾ.೦೯ರ ವರೆಗೆ ನಡೆಯಲಿದ್ದು, ಗ್ರಾಮ ದೇವತೆ ಜಾತ್ರೆ & ರಥತ್ಸೋವವು ಮಾ. ೧೦ ರಂದು ನಡೆಯಲಿದ್ದು, ವೇ.ಮೂ ನಾಗಯ್ಯಶಾಸ್ತ್ರಿಗಳು ವಡವಡಗಿ ಅವರಿಂದ ವಿದ್ಯುಕ್ತವಾಗಿ ಪುರಾಣ ಪ್ರಾರಂಭಿಸಲಾಯಿತು. ಆಕಾಶವಾಣಿ ಕಲಾವಿದರಾದ ರೇಣುಕಾಚಾರ್ಯ ಹಿರೇಮಠ ಕೆರುಟಗಿ ಮತ್ತು ತಬಲಾವಾದಕರಾದ ಮಹಾಂತೇಶ ಕಾಳಗಿ ಇವರಿಂದ ಸಂಗೀತ ಸೇವೆ ನಡೆಯಿತು.
ಈ ಪುರಾಣ ಪ್ರಾರಂಭ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿಕೊಂಡ ಶ್ರೀ ಮಹಾಂತಯ್ಯ ಹಿರೇಮಠ ಮತ್ತು ಶ್ರೀ ಸಂಗಯ್ಯ ಮಠಪತಿ ಅವರು ಜ್ಯೋತಿ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಊರಿನ ಸದ್ಭಕ್ತರಾದ ವೀರಾತಪ್ಪ ಸಾತಿಹಾಳ, ಬಸಂತ ವಾಲಿಕಾರ, ಶಿವಪುತ್ರ ನೆಲ್ಲಗಿ, ಸೋಮನಗೌಡ ಯಾಳವಾರ, ಪ್ರೇಮಾನಂದ ಮಾಡಗಿ, ಶಿವಪುತ್ರ ಸಾತಿಹಾಳ, ಚಂದ್ರಾಮ ಹುಲಂಕಿ, ಶರಣಪ್ಪ ಗದ್ದಗಿ, ರಾಚಪ್ಪ ಯಡ್ರಾಮಿ, ಗುರಪ್ಪ ಕುಂಬಾರ, ಸಂಗಪ್ಪ ಬಾಗೇವಾಡಿ, ನಾಗಪ್ಪ ಸಜ್ಜನ, ಶಂಕ್ರೆಪ್ಪ ಮಾನ್ವಿ, ಸಂಗಮೇಶ ಬಿರಾದಾರ ಹಾಗೂ ಶ್ರೀ ದೇವಿ ಅರ್ಚಕರಾದ ಕಾಳಪ್ಪಾ ಬಡಿಗೇರ ಹಾಗೂ ಮುತ್ತು ಬಡಿಗೇರ, ಪ್ರಮೋದ ವಿಶ್ವಕರ್ಮ ಭಾಗವಸಿದ್ದರು. ಕಾರ್ಯಕ್ರಮವನ್ನು ನಿವೃತ್ತ ಶಿಕ್ಷರಾದ ಎಮ್ ಸಿ ಕಾಸರ ನಿರೂಪಿಸಿದರು, ಜಗದೀಶ ಸಾತಿಹಾಳ ಸ್ವಾಗತಿಸಿದರು, ಪ್ರತಿದಿನ ಸಾಯಂಕಾಲ ೭ ರಿಂದ ೯ ರವರೆಗೆ ಶ್ರೀ ದೇವಿ ಕಟ್ಟೆಯ ಮೇಲೆ ಶ್ರೀ ದೇವಿ ಪುರಾಣ ನಡೆಯಲಿದ್ದು, ಎಲ್ಲರೂ ಭಾಗವಹಿಸಿ ಕೃತಾರ್ಥರಾಗಬೇಕೆಂದು ಕಮೀಟಿ ವತಿಯಿಂದ ತಿಳಿಸಲಾಯಿತು.
Subscribe to Updates
Get the latest creative news from FooBar about art, design and business.
Related Posts
Add A Comment

