ಸಿಂದಗಿ: ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿಣಿ ಸಮಿತಿಗೆ ನಿಖಟ ಪೂರ್ವ ಅಧ್ಯಕ್ಷ ರಾಜಶೇಖರ ಕೂಚಬಾಳ ರಾಜಿನಾಮೆ ಸಲ್ಲಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ ಅವರು, ನಾನು ನೇಮಿತ ಅಧ್ಯಕ್ಷನಾಗಿ ತೃಪ್ತಿಕರವಾಗಿ ಕಾರ್ಯನಿರ್ವಹಿಸಿದ್ದೇನೆ. ಜಿಲ್ಲಾಧ್ಯಕ್ಷರ ಆದೇಶದಂತೆ ಅಧ್ಯಕ್ಷ ಸ್ಥಾನದಿಂದ ಪದಚ್ಯುತಗೊಂಡಿದ್ದರೂ ನಿಕಟ ಪೂರ್ವ ಅಧ್ಯಕ್ಷನಾಗಿ ಪರಿಷತ್ತಿನ ಹತ್ತು ಹಲವಾರು ಕಾರ್ಯ ಚಟುವಟಿಕೆಗಳನ್ನು ಪ್ರಸ್ತುತ ತಾಲೂಕಾಧ್ಯಕ್ಷರ ಬೆಂಬಲವಾಗಿ ನಿಂತು ಯಶಸ್ವಿಯಾಗಿ ನಿರ್ವಹಿಸಿದ್ದೇನೆ. ಆದರೆ ಇತ್ತೀಚಿನ ದಿನಮಾನದಲ್ಲಿನ ಪರಿಷತ್ತಿನ ಬೆಳವಣಿಗೆಗೆ ಬೆಸತ್ತು ಸ್ವ ಇಚ್ಚೆಯಿಂದ ರಾಜೀನಾಮೆಯನ್ನು ಜಿಲ್ಲಾಧ್ಯಕ್ಷರಿಗೆ ಸಲ್ಲಿಸುತ್ತಿದ್ದೇನೆ. ನನ್ನೊಂದಿಗೆ ತಾಲೂಕು ಗೌರವ ಕಾರ್ಯದರ್ಶಿ ಶಿವುಕುಮಾರ ಕಲ್ಲೂರ, ಸಂಘಟನಾ ಕಾರ್ಯದರ್ಶಿ ರಮೇಶ ಪೂಜಾರಿ, ದತ್ತಿ ಸಂಚಾಲಕ ಸಿದ್ದಲಿಂಗ ಕಿಣಗಿ, ಗೌರವ ಕೋಶಾಧ್ಯಕ್ಷ ಖಾದರಬಾಷಾ ವಾಲಿಕಾರ, ಪ್ರಚಾರ ಸಮಿತಿಯ ದುಂಡಪ್ಪ ಸೊನ್ನದ, ಕಾರ್ಯಕಾರಿಣಿ ಸದಸ್ಯ ಭೀಮಣ್ಣ ಹೆರೂರ ಯರಗಲ್ಲ ಬಿ.ಕೆ ಅವರು ರಾಜೀನಾಮೆಯನ್ನು ಸಲ್ಲಿಸುತಿದ್ದಾರೆ. ಇಲ್ಲಿಯವರೆಗೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕಾರ್ಯನಿರ್ವಹಿಸಲು ಅನುಕೂಲ ಮಾಡಿಕೊಟ್ಟ ಜಿಲ್ಲಾಧ್ಯಕ್ಷರಿಗೆ ಧನ್ಯವಾದಗಳನ್ನು ತಿಳಿಸುತ್ತೇವೆ ಎಂದು ಕೂಚಬಾಳ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
