ಚಡಚಣ: ಆಧ್ಯಾತ್ಮಿಕ ಪ್ರವಚನಗಳು ಮನುಷ್ಯನಿಗೆ ಮಾನಸಿಕ ನೆಮ್ಮದಿಯನ್ನು ನೀಡಿ ಸಾತ್ವಿಕ ಜೀವನ ನಡೆಸಲು ಶಕ್ತಿಯನ್ನು ನೀಡುತ್ತವೆ ಎಂದು ಕಾತ್ರಾಳದ ಗುರುದೇವ ಆಶ್ರಮದ ಅಮೃತಾನಂದ ಶ್ರೀಗಳು ಹೇಳಿದರು.
ಸಮೀಪದ ಜೀರಂಕಲಗಿ ಗ್ರಾಮದಲ್ಲಿ ಹತ್ತು ದಿನಗಳವರೆಗೆ ನಡೆದ ಪ್ರವಚನ ಕಾರ್ಯಕ್ರಮದ ಕೊನೆಯ ದಿನ ಶ್ರೀಗಳು ಭಕ್ತರನ್ನು ಉದ್ದೇಶಿಸಿ ಅವರು ಆಶೀರ್ವಚನ ನೀಡಿದರು.
ಹತ್ತು ದಿನಗಳವರೆಗೆ ಬೆಳಗ್ಗೆ 6.30 ರಿಂದ 7.30 ರ ವರೆಗೆ ಶ್ರೀಗಳು ವಿವಿಧ ಶರಣರ ವಚನಗಳನ್ನು ಮತ್ತು ಸಿದ್ದೇಶ್ವರ ಶ್ರೀಗಳ ಜೀವನ ಮತ್ತು ಪ್ರವಚನಗಳ ಕೆಲವು ಭಾಗಗಳನ್ನು ವಿಶ್ಲೇಷಣೆ ಮಾಡುತ್ತ ಭಕ್ತರಿಗೆ ಆಧ್ಯಾತ್ಮಿಕ ಜ್ಞಾನವನ್ನು ಉಣಬಡಿಸಿದರು.
ಕಿಸೆ ಇಲ್ಲದ ಸಂತ ನಾಡಿನಗುರು ಸಿದ್ದೇಶ್ವರ ಶ್ರೀಗಳ ಬದುಕು ನಮ್ಮೆಲ್ಲರಿಗೆ ಆದರ್ಶಪ್ರಾಯವಾಗಿದೆ. ನಿಸರ್ಗದಲ್ಲಿ ದೇವರನ್ನು ಕಾಣುವ ಇವರು ಅವರ ತತ್ವಾದರ್ಶ ನಮ್ಮೆಲ್ಲರಿಗೆ ಪೂರಕವಾಗಿ, ಅವರ ಪ್ರವಚನಗಳ ಧ್ವನಿ ಸುರಳಿಯನ್ನು ದಿನಂಪ್ರತಿ ಕೇಳಿ ಆನಂದಪಡೋಣ ಎಂದರು.
ಕಾರ್ಯಕ್ರಮದಲ್ಲಿ ಜ್ಞಾನಯೋಗಾಶ್ರಮದ ಅನೇಕ ಶ್ರೀಗಳು ಭಾಗವಹಿಸಿ ಪ್ರತಿದಿನ ತಮ್ಮ ಪ್ರವಚನ ನೀಡಿದರು.
ಜೀರಂಕಲಗಿ ಮತ್ತು ಸುತ್ತಮುತ್ತಲಿನ ನೂರಾರು ಗ್ರಾಮಗಳ ಸಾವಿರಾರು ಭಕ್ತರು ಪ್ರತಿದಿನ ಪ್ರವಚನ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀಗಳ ಪ್ರವಚನವನ್ನು ಆಲಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

