ಬ್ರಹ್ಮದೇವನಮಡು: ಧಾಮಿ೯ಕ ಕಾಯ೯ಕ್ರಮಗಳಲ್ಲಿ ಪಾಲ್ಗೊಳ್ಳುವುದರಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ದೊರೆಯುತ್ತದೆ ಎಂದು ತಾಳಿಕೋಟಿಯ ಖಾಸ್ಗತೇಶ್ವರ ಮಠದ ಸಿದ್ದಲಿಂಗ ದೇವರು ಹೇಳಿದರು. ದೇವರಹಿಪ್ಪರಗಿ ತಾಲೂಕಿನ ಚಟ್ನಳ್ಳಿ ಗ್ರಾಮದಲ್ಲಿ ಮಹಾಶಿವರಾತ್ರಿ ಹಬ್ಬದ ನಿಮಿತ್ಶ ಸೋಮವಾರ ರಾತ್ರಿ ಹಮ್ಮಿಕೊಂಡಿದ್ದ ಶ್ರೀ ಭಕ್ತಿಬಂಡಾರಿ ಬಸವೇಶ್ವರ ಪುರಾಣ ಪ್ರವಚನ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿ ಅವರು ಆಶೀವ೯ಚನ ನೀಡಿದರು.
ಹಳ್ಳಿಯ ದೇವಸ್ಥಾನಗಳಲ್ಲಿ ಜರುಗುವ ಧಾಮಿ೯ಕ ಕಾಯ೯ಕ್ರಮಗಳು ಸಾಮರಸ್ಶದ ಸಂಕೇತವಾಗಿವೆ. ಜಾತಿ ಭೇದ ಮರೆತು ಪುರಾಣ,ಪ್ರವಚನಗಳಲ್ಲಿ ಪಾಲ್ಗೊಳ್ಳುವುದರಿಂದ ಭಕ್ತಿಯ ಮನೋಭಾವ ಮನೆ ಮಾಡುತ್ತದೆ.ಮಹಾತ್ಮರ ಚರಿತ್ರೆ ಕೇಳುವುದರಿಂದ ಮನಪರಿವತ೯ನೆಯಾಗಿ ಜೀವನದಲ್ಲಿ ಧಮ೯ ಕಾಯ೯ ಮಾಡಲು ಪ್ರೇರಣೆಯಾಗುತ್ತದೆ. ಭಕ್ತರು ದಾನ ಮಾಡುವ ಪ್ರವೃತ್ತಿ ಬೆಳಸಿಕೊಳ್ಳಬೇಕು. ಒತ್ತಡ, ಜಂಜಾಟ ನಿವಾರಣೆಗೆ ಧಾಮಿ೯ಕ ಕ್ಷೇತ್ರಗಳು ನೆಮ್ಮದಿಯ ತಾಣವಾಗಿವೆ ಎಂದರು.
ಯಂಕಂಚಿ ಹಿರೇಮಠದ ಅಭಿನವ ರುದ್ರಮುನಿ ಶಿವಾಚಾಯ೯ರು ಅಧ್ಶಕ್ಷತೆ ವಹಿಸಿದ್ದರು. ಖಾನಾಪೂರದ ಮೌನಯೋಗಿ ಕಲ್ಶಾಣದಯ್ಶ ಸ್ವಾಮೀಜಿ, ಹೊನ್ನಳ್ಳಿಯ ಗುರುಲಿಂಗಯ್ಶ ಗದ್ದಗಿಮಠ ಸ್ವಾಮೀಜಿ, ಸಿದ್ದಯ್ಶ ಹಿರೇಮಠ ಇದ್ದರು.
ಪ್ರವಚನಕಾರ ಈರಣ್ಣ ಶಾಸ್ತ್ರಿಗಳು ಪ್ರವಚನ ನೀಡಿದರು. ಕಲ್ಲಯ್ಶ ಪಡದಳ್ಳಿ ಅವರ ಸಂಗೀತ ಸೇವೆಯೊಂದಿಗೆ ಪ್ರಾಣೇಶ ಯಡ್ರಾಮಿ ತಬಲ್ ಸಾಥ್ ನೀಡಿದರು.
ಈ ವೇಳೆ ಪತ್ರಕತ೯ ಮಲ್ಲು ಕೆಂಭಾವಿ ಅವರನ್ನು ತಾಳಿಕೋಟಿಯ ಖಾಸ್ಗತೇಶ್ವರ ಮಠದ ಸಿದ್ದಲಿಂಗ ದೇವರು ಆಶೀವ೯ದಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

