ಚಿಮ್ಮಡ: ಶೃಧ್ಧೆ ಹಾಗೂ ಒಗ್ಗಟ್ಟು ಇದ್ದರೆ ಯಾವುದೇ ಕಾರ್ಯವನ್ನು ಯಶಸ್ವಿಯಾಗಿ ನೆರವೇರಿಸಲು ಸಾಧ್ಯವೆಂದು ವಿರಕ್ತಮಠದ ಶ್ರೀ ಪ್ರಭು ಮಹಾಸ್ವಾಮಿಗಳು ಹೇಳಿದರು.
ಗ್ರಾಮದ ಶ್ರೀ ಬನಶಂಕರಿದೇವಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಪ್ರಭಾವಳಿ ಅರ್ಪಣಾ ಹಾಗೂ ಪ್ರಸಾದ ಪೂಜಾ ಕಾರ್ಯಕ್ರಮದ ನಂತರ ನಡೆದ ಸಭೆಯ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಯಾವುದೇ ಜಾತಿ, ಮತ, ಪಂಥಗಳನ್ನು ನೋಡದೆ ಪ್ರತಿಯೊಂದು ಸಮುದಾಯವನ್ನು ಒಟ್ಟಿಗೆ ಸೇರಿಸಿಕೊಂಡು ನಡೆಸುತ್ತಿರುವ ಇಂತಹ ಜಾತ್ರೆ, ಧಾರ್ಮಿಕ ಕಾರ್ಯಕ್ರಮ ನಡೆಸುತ್ತಿರುವುದು ಶ್ಲಾಘನೀಯ ಎಂದರು.
ರಘುನಾಥ ಪ್ರೀಯ ಸಾಧು ಮಹಾರಾಜರ ಮಠದ ಶ್ರೀ ಜನಾರ್ಧನ ಮಹಾರಾಜರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಟಗಾರ ಸಮಾಜದ ಪ್ರಮುಖ ಶ್ರೀಕಾಂತ ಜಾಡಗೌಡರ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ, ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಮಾಲಾ ಅಶೋಕ ಮೋಟಗಿ, ರಾಮಣ್ಣ ಮುಗಳಖೋಡ, ಅಣ್ಣಪ್ಪಗೌಡ ಪಾಟೀಲ, ಬಾಳಪ್ಪಾ ಹಳಿಂಗಳಿ, ಬಿ.ಎಸ್. ಪಾಟೀಲ, ಗುರಲಿಂಗಪ್ಪಾ ಪೂಜಾರಿ, ಗುರಪ್ಪಾ ಬಳಗಾರ, ಉಮೇಶ ಪೂಜಾರಿ, ರಾಚಯ್ಯ ಮಠಪತಿ, ಈಶ್ವರ ಬಡಿಗೇರ ಇಲಾಹಿ ಜಮಖಂಡಿ ವೇದಿಕೆಯಲ್ಲಿದ್ದರು.
ಬನಶಂಕರಿದೇವಿ ಸೇವಾ ಸಮೀತಿಯ ಕಾರ್ಯದರ್ಶೀ ಅಶೋಕ ಧಡೂತಿ ಪ್ರಾಸ್ತಾವಿಕವಾಗಿ ಮಾತನಾಡಿದರು,
ಪ್ರೌಢಶಾಲಾ ನಿವೃತ್ತ ಮುಖ್ಯೋಪಾದ್ಯಾಯ ಕಲ್ಲಪ್ಪ ವಿಜಾಪೂರ ನಿರೂಪಿಸಿ, ವಂದಿಸಿದರು.
ಇದೇ ವೇಳೆ ಶ್ರೀ ಬನಶಂಕರಿ ದೇವಿಗೆ ಸುಮಾರು ಐವತ್ತು ಸಾವಿರ ವೆಚ್ಚದಲ್ಲಿ ನಿರ್ಮಿಸಲಾದ ಪ್ರಭಾವಳಿ ಅರ್ಪಿಸಿದ ದೇವಪ್ಪಾ ಹಾದಿಮನಿ ಸೇರಿದಂತೆ ಹಲವು ದಾನಿಗಳನ್ನು ಸತ್ಕರಿಸಲಾಯಿತು.
Subscribe to Updates
Get the latest creative news from FooBar about art, design and business.
Related Posts
Add A Comment

