ಕಲಕೇರಿ: ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಉತ್ತಮವಾದ ಮೌಲ್ಯಗಳನ್ನು ರೂಡಿಸಿಕೊಳ್ಳಬೇಕು ಇದರಿಂದ ಬದುಕು ಸುಂದರವಾಗುತ್ತದೆ. ಮೌಲ್ಯಗಳನ್ನು ಕಲಿಯಲು ಮಹಾತ್ಮರ ಜೀವನ ಚರೀತ್ರೆಗಳನ್ನು ಓದುವುದರ ಜೊತೆಗೆ ಅವರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಾಹಿತಿ ಸಾಹೇಬಗೌಡ ಬಿರಾದಾರ ತಿಳಗೂಳ ಹೆಳಿದರು.
ಕಲಕೇರಿ ಗ್ರಾಮದ ಎಸ್‌ಎಂವಿವಿ ಸಂಘದ ಬಸವೇಶ್ವರ ಹಿರಿಯ ಪ್ರಾಥಮಿಕ ಹಾಗೂ ಪ್ರೌಡಶಾಲೆಯಲ್ಲ್ಲಿ ಹಮ್ಮಿಕೊಂಡ ಎಸ್‌ಎಸ್‌ಎಲ್‌ಸಿ ವಿಧ್ಯಾರ್ಥಿಗಳ ಬಿಳ್ಕೋಡುವ ಸಮಾರಂಭ ಹಾಗೂ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇಂದಿನ ದಿನಗಳಲ್ಲಿ ಸಮಾಜದಲ್ಲಿ ಮಾನವೀಯ ಮೌಲ್ಯಗಳೇ ಕಾಣೆಯಾಗುತ್ತಿವೆ. ಇವುಗಳನ್ನು ಮತ್ತೆ ಮರುಸ್ಥಾಪಿಸುವಲ್ಲಿ ಇಂದಿನ ವಿದ್ಯಾರ್ಥಿಗಳೆಲ್ಲರೂ ಶ್ರಮಿಸಬೇಕಿದೆ, ನಾನೂ ಕೂಡಾ ಈ ಬಸವೇಶ್ವರ ಶಾಲೆಯ ವಿಧ್ಯಾರ್ಥಿಯಾಗಿದ್ದೇನೆ ಎಂದು ಹೆಮ್ಮೆಯಿಂದ ಹೇಳುತ್ತೇನೆ, ಪ್ರತಿಯೊಬ್ಬ ವಿದ್ಯಾರ್ಥಿಗಳು ಪ್ರಾಮಾಣಿಕವಾಗಿ ಶ್ರಮ ಪಟ್ಟು ಅಭ್ಯಾಸ ಮಾಡಿದರೆ ಯಶಸ್ಸು ಗಳಿಸಲು ಸಾಧ್ಯವಾಗುತ್ತದೆ, ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳಲ್ಲಿ ಒಳ್ಳೆಯ ಅಂಕಗಳನ್ನು ಪಡೆದು ಉತ್ತಮ ಸಾಧನೆ ಮಾಡಿ ಕಲಿತ ಶಾಲೆಗೆ ಹಾಗೂ ಗ್ರಾಮಕ್ಕೆ ಕೀರ್ತಿ ತರಬೇಕು ಎಂದು ಈ ಸಂದರ್ಭದಲ್ಲಿ ಅವರು ಹೆಳಿದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಗುರುಮರುಳಾಧ್ಯರ ಹಿರೇಮಠದ ಸಿದ್ದರಾಮ ಶಿವಾಚಾರ್ಯ ಸ್ವಾಮಿಜಿಗಳು ಮಾತನಾಡಿದರು.
ಸಂಸ್ಥೆಯ ಹಿರಿಯ ನಿರ್ಧೇಶಕ ವ್ಹಿ ಆರ್ ಝಳಕಿ ಕಾರ್ಯಕ್ರಮವನ್ನು ಉದ್ಘಾಟಿಸಿದರು, ಮುಖ್ಯಗುರು ಜಗದೀಶ ಗುಮಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು, ಸಂಸ್ಥೆ ಅಧ್ಯಕ್ಷ ಶಾಂತಗೌಡ ಪಾಟೀಲ, ಪ್ರಾಚಾರ್ಯ ಸಿ ಎಸ್ ಹಿರೇಮಠ ಮಾತನಾಡಿದರು.
ಈ ವೇಳೆ ೨೦೨೨-೨೩ ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಸಂಜೆ ಪ್ರಾಥಮಿಕ ಶಾಲೆ ಹಾಗೂ ಪ್ರೌಡಶಾಲೆಯ ಮಕ್ಕಳಿಂದ ಮನರಂಜನಾ ಕಾರ್ಯಕ್ರಮಗಳು ನಡೆದವು.
ಈ ಸಂದರ್ಭದಲ್ಲಿ ಇಸಿಓ ಶ್ರೀಶೈಲ ನಾಯ್ಕೋಡಿ, ಕನಕರಾಜ್ ವಡ್ಡರ್, ಷಣ್ಮುಕಪ್ಪ ಝಳಕಿ, ಸಿದ್ದಣ್ಣ ಚಳ್ಳಗಿ, ಶಿವಪುತ್ರಪ್ಪ ಕಡಕೋಳ, ಮಲಕಾಜಪ್ಪಗೌಡ ಬಿರಾದಾರ, ದೇವಿಂದ್ರ ಗುಮಶೆಟ್ಟಿ, ಅಪ್ಪಾಸಾಬ್ ಗುಮಶೆಟ್ಟಿ, ಬಿ ಜಿ ಚನಗೊಂಡ, ಶಿವಾನಂದ ಹರಿಜನ, ವಿಶ್ವನಾಥ ಸಿಂದಗಿ, ಕಂಠೀರವ ದೇಸಾಯಿ, ರವಿಕುಮಾರ ಗುಮಶೆಟ್ಟಿ, ಬಿ ಎಂ ಕುಂಬಾರ, ಎಸ್ ಪಿ ರಾಣಗಟ್ಟಿ, ವ್ಹಿ ಟಿ ಜಾನಮಟ್ಟಿ, ಶಿವಾನಂದ ಕೋರವಾರಮಠ, ಸುಧಾ ಭಜಂತ್ರಿ, ತೈಶಿನ್ ಖಾನಾಪೂರ, ನಿಂಗನಗೌಡ ಗುಂಡಕನಾಳ, ಬಸವರಾಜ ದೇವರಮನಿ, ಸೇರಿದಂತೆ ಇತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

