ವಿಜಯಪುರ: ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಮುದ್ದೇಬಿಹಾಳ ತಾಲ್ಲೂಕಿನ ಹಿರಿಹೊಳಿ ತಟದ ಅಯ್ಯನಗುಡಿ ಶ್ರೀ ಗಂಗಾಧರೇಶ್ವರ ಜಾತ್ರೆಯು ಫೆಬ್ರವರಿ ೧೮ ರಿಂದ ೨೧ ವರೆಗೆ ನಾಲ್ಕು ದಿವಸ ನಡೆಯುವುದು.
ಈ ಭಾಗದ ಹಿಂದಿನ ಸಂಸ್ಥಾನಿಕರಾದ ಬಲದಿನ್ನಿ ನಾಡಗೌಡ್ರ ಯಜಮಾನಿಕೆಯಲ್ಲಿ ನಡೆಯುತ್ತಿರುವ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಜಾನಪದ, ಸಂಗೀತ,ನಾಟಕ, ವಸ್ತು ಪ್ರದರ್ಶನ, ಮತ್ತು ಜಾನುವಾರು ಪ್ರದರ್ಶನ ಕಾರ್ಯಕ್ರಮ ಹಮ್ಮಿಕೊಂಡು ಸಾಂಸ್ಕೃತಿಕ ಲೋಕ ಅನಾವರಣಗೊಳ್ಳಲಿದೆ.
ಲಿಂಗೈಕ್ಯ ಶಂಕರರಾವ್ ಎನ್ ನಾಡಗೌಡ್ರ ವೇದಿಕೆಯಲ್ಲಿ ಶ್ರೀಮಂತ ಸೋಮಶೇಖರ್ ಎಸ್ ನಾಡಗೌಡ್ರ ಅದ್ಯಕ್ಷತೆಯಲ್ಲಿ ದಿನಾಂಕ ೧೮.೨.೨೦೨೪ ರವಿವಾರ ರಂದು ಬೆಳಗ್ಗೆ ನಾಲತವಾಡ ಪಟ್ಟಣದಲ್ಲಿ ಪಲ್ಲಕ್ಕಿ ಮತ್ತು ಕಳಸೋತ್ಸವ ಮೆರವಣಿಗೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿಜಯಪುರ ಇವರ ಸಹಯೋಗದಲ್ಲಿ ರಾಜ್ಯಮಟ್ಟದ ಜನಪದ ಕಲಾತಂಡಗಳಾದ ಹುಬ್ಬಳ್ಳಿ ಜಗ್ಗಲಿಗೆ, ಮಂಗಳೂರು ಜೋಗತಿ ನೃತ್ಯ, ಸಾರವಾಡ ಗಾರುಡಿಗೊಂಬೆ, ಉಪ್ಪಲದಿನ್ನಿ ಹೆಜ್ಜೆಮೇಳ, ಬಬಲೇಶ್ವರ ಡೊಳ್ಳುಕುಣಿತ ಸೇರಿದಂತೆ ಹಲಗೆಮಜಲು,ಹಲಗೆವಾದನ, ಶಹನಾಯಿ, ಕಲಾತಂಡಗಳು ಮತ್ತು ನಾಲತವಾಡ ಪಟ್ಟಣದ ಎಲ್ಲಾ ಶಾಲಾ ಕಾಲೇಜುಗಳಿಂದ ಸ್ಥಬ್ಧ ಚಿತ್ರಗಳ ಮೆರವಣಿಗೆ. ಸಂಜೆ ೫ ಗಂಟೆಗೆ ವಿವಿಧ ವಸ್ತು ಮಳಿಗೆಗಳ ಪ್ರದರ್ಶನ. ರಾತ್ರಿ ೮ ಗಂಟೆಗೆ ಮುದ್ದೇಬಿಹಾಳದ ಪುಟ್ಟರಾಜ ಕಲಾ ವೇದಿಕೆ ವತಿಯಿಂದ ರಸಮಂಜರಿ.
ರಾತ್ರಿ ೧೦ ಗಂಟೆಗೆ ಗದ್ದೆಮ್ಮ ಮತ್ತು ದ್ಯಾಮವ್ವ ದೇವಿ ಪಲ್ಲಕ್ಕಿ ಆಗಮನ.
ದಿನಾಂಕ ೧೯.೨.೨೦೨೪ ಸೋಮವಾರ ಬೆಳಿಗ್ಗೆ ಗಂಗಾಧರೇಶ್ವರ ದೇವರಿಗೆ ರುದ್ರಾಭಿಷೇಕ.ಸಂಜೆ ೫ ಗಂಟೆಗೆ ಮಹಾರಥೋತ್ಸವ. ೬ ಗಂಟೆಗೆ ವಿಜಯಪುರದ ಎ ಕೆ ಮೆಲೋಡಿಸ್ ವತಿಯಿಂದ ರಸಮಂಜರಿ. ರಾತ್ರಿ ೮ ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ಪ್ರಾರಂಭ. ಶಾಸಕ ಸಿ ಎಸ್ ನಾಡಗೌಡ್ರ (ಅಪ್ಪಾಜಿ) ಉದ್ಘಾಟನೆ , ಸೋಮಶೇಖರ್ ನಾಡಗೌಡ್ರ ಅಧ್ಯಕ್ಷತೆ, ಮುಖ್ಯ ಅತಿಥಿಗಳಾಗಿ ಕ ಸಂ ಇಲಾಖೆ ಸಹಾಯಕ ನಿರ್ದೇಶಕ ಕರ್ಣಕುಮಾರ ಜೈನಾಪುರ, ಸಾಹಿತಿ ಶಂಕರ ಬೈಚಬಾಳ, ಪೃಥ್ವಿರಾಜ್ ನಾಡಗೌಡ,ಡಾ.ಬಲವಂತ ಪೋಲಿಸ್ ಪಾಟೀಲ (ಉಣ್ಣಿಬಾವಿ) ಕನ್ನಡ ಜಾನಪದ ಪರಿಷತ್ ವಿಜಯಪುರ ಜಿಲ್ಲಾಧ್ಯಕ್ಷ ಬಾಳನಗೌಡ ಪಾಟೀಲ,ಆಗಮಿಸುವರು. ರಾತ್ರಿ ೧೦ ಗಂಟೆಗೆ ಶಿವಲಿಂಗೇಶ್ವರ ನಾಟ್ಯ ಸಂಘ ಕುಲ್ಹಳ್ಳಿ ವತಿಯಿಂದ” ಮನೆ ಹೊಕ್ಕ ಮಿಡಿನಾಗ ” ನಾಟಕ ಪ್ರದರ್ಶನ.
ದಿನಾಂಕ ೨೦.೨.೨೦೨೪ ಮಂಗಳವಾರ ಸಂಜೆ ೬ ಗಂಟೆಗೆ ಮೌಲಾಸಾಬ ಮಕಾನದಾರ ಮತ್ತು ಅವ್ವಮ್ಮ ಬ್ಯಾಲಿಹಾಳ ಇವರಿಂದ ಹರದೇಶಿ – ನಾಗೇಶಿ ಗೀಗೀಪದ. ರಾತ್ರಿ ೧೦ ಗಂಟೆಗೆ ಬಸವೇಶ್ವರ ನಾಟ್ಯ ಸಂಘ ರನ್ನಬೆಳಗಲಿ ವತಿಯಿಂದ ” ಅಕ್ಕ ಅಪರಂಜಿ ತಂಗಿ ಗುಲಗಂಜಿ” ನಾಟಕ ಪ್ರದರ್ಶನ.
ದಿನಾಂಕ ೨೧.೨.೨೦೨೪ ಬುಧವಾರ ಸಂಜೆ ೬ ಗಂಟೆಗೆ ಬಾಡಗಿ ಮತ್ತು ಹೊಸೂರು ಇವರಿಂದ ವಾದಿ ಬೀದಿ ಚೌಡಕಿ ಪದಗಳು.ರಾತ್ರಿ ೮ ಗಂಟೆಗೆ ಅಯ್ಯನಗುಡಿ ಉತ್ಸವ ಸಮಾರೋಪ ಸಮಾರಂಭ.
ರಾತ್ರಿ ೧೦ ಗಂಟೆಗೆ ಶಿವಲಿಂಗೇಶ್ವರ ನಾಟ್ಯ ಸಂಘ ಕುಲ್ಹಳ್ಳಿ ವತಿಯಿಂದ ” ಮನೆ ಮುರುಕ ಅಳಿಯ” ನಾಟಕ ಪ್ರದರ್ಶನ.
ಈ ನಾಲ್ಕು ದಿವಸಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ನಾಲತವಾಡ, ಬಲದಿನ್ನಿ, ಅಯ್ಯನಗುಡಿ ಗ್ರಾಮದ ನಾಡಗೌಡ್ರ ಸಂಸ್ಥಾನದ ಹಿರಿಯರ, ಅಭಿಮಾನಿಗಳ ನೇತೃತ್ವದಲ್ಲಿ ನಡೆಯುತ್ತದೆ ಎಂದು ಕನ್ನಡ ಜಾನಪದ ಪರಿಷತ್ ವಿಜಯಪುರ ಜಿಲ್ಲಾಧ್ಯಕ್ಷ ಬಾಳನಗೌಡ ಪಾಟೀಲ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

