ಕೆಂಭಾವಿ: ಸುರಪೂರ ಘಟಕದಿಂದ ಕೂಡಲಗಿಗೆ ಬರುವ ಎಲ್ಲಾ ಬಸ್ ಗಳು ಮುದನೂರ್ ಮುಖಾಂತರ ಕೆಂಭಾವಿಗೆ ಮತ್ತು ಸುರಪೂರದಿಂದ ಬೈಚಬಾಳ್ ದ ವರೆಗೂ ಎಲ್ಲಾ ಬಸ್ ಗಳು ಹುಣಸಗಿವರೆಗೂ ಬಿಡುವಂತೆ ತೆಗ್ಗೆಳ್ಳಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ತೆಗ್ಗೆಳ್ಳಿ ಹಾಗೂ ಶಾಖಾಪೂರ್ ಗ್ರಾಮಸ್ಥರು ದಿನ ನಿತ್ಯವೂ ಹುಣಸಗಿ ಹಾಗೂ ಕೆಂಭಾವಿಗೆ ಹೊಗುತ್ತಾರೆ. ಹೀಗಾಗಿ ತೆಗ್ಗೆಳ್ಳಿ ಹಾಗೂ ಶಾಖಾಪೂರ ಗ್ರಾಮಸ್ಥರು ದಿನನಿತ್ಯವೂ ಯಾತನೆ ಅನುಭವಿಸುತ್ತಿದ್ದಾರೆ ಎಂಬುದು ಗ್ರಾಮಸ್ಥರ ಅಳಲಾಗಿದೆ. ಪ್ರತಿ ನಿತ್ಯವೂ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಸುಮಾರು ನಾಲ್ಕೈದು ಕಿಲೋಮೀಟರ್ ನಡೆದುಕೊಂಡೇ ಹೋಗಬೇಕಾಗಿದೆ. ಹೀಗಾಗಿ ತೆಗ್ಗೆಳ್ಳಿ ಗ್ರಾಮಸ್ಥರು ಸುರಪೂರದಿಂದ ಬರುವ ಬಸ್ ಗಳು ಹುಣಸಗಿವರೆಗೆ ಸಂಚರಿಸುವಂತೆ ಮನವಿ ಮಾಡಿದ್ದಾರೆ. ಒಂದು ವೇಳೆ ಮಾಡದಿದ್ದರೆ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ತೆಗ್ಗೆಳ್ಳಿ ಗ್ರಾಮದ ಮುಖಂಡರಾದ ತಾರಾನಾಥ್ ಇನಾಂದಾರ, ಸಿದ್ದಣ್ಣ ಪಾಸೋಡಿ, ಬಸವರಾಜ್ ಪೂಜಾರಿ, ಭೀಮಶಾ ರೂಗಿ, ನಂದನಗೌಡ ಬೆನಕನಾಳ್, ಮಲ್ಲು ಗೋನಾಲ್, ಸೇರಿದಂತೆ ಹಲವರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

