ವಿಜಯಪುರ: ಜಿಲ್ಲಾಡಳಿತದ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಭಾವಚಿತ್ರ ಅನಾವರಣ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ ಸಭಾಭವನಕ್ಕೆ ನಗರದ ಪ್ರತಿಷ್ಠಿತ ಆಕ್ಸ್ಫರ್ಡ್ ಶಿಕ್ಷಣ ಸಂಸ್ಥೆಯ ಮುದ್ದು ಮಕ್ಕಳು ಬಸವಾದಿ ಶರಣರ ವೇಷಭೂಷಣಗಳನ್ನು ಧರಿಸಿ ಸಮಾರಂಭಕ್ಕೆ ಆಗಮಿಸಿ ಎಲ್ಲರ ಗಮನವನ್ನು ಸೆಳೆದರು.
ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಭಾವಚಿತ್ರ ಅನಾವರಣಗೊಳಿಸಿದ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಬಿ ಪಾಟೀಲರಿಗೆ ಬಸವಾದಿ ಶರಣರ ವಚನಗಳ ಪುಸ್ತಕಗಳನ್ನ ನೀಡಿ ಮುಖ್ಯಮಂತ್ರಿಗಳಿಗೂ ಹಾಗೂ ಸಚಿವರಾದ ಎಂ ಬಿ ಪಾಟೀಲರಿಗೂ ಜಿಲ್ಲೆಯ ಜನತೆಯ ಪರವಾಗಿ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸಿದರು.
ಮಕ್ಕಳನ್ನು ನೋಡಿ ಸಂತೋಷ ಪಟ್ಟ ಸಚಿವರು ಮಕ್ಕಳೊಂದಿಗೆ ನಿಂತು ಭಾವಚಿತ್ರ ತೆಗೆಸಿಕೊಂಡು ಸಂಭ್ರಮಿಸಿದರು. ನಾಡಿನ ಮನೆ ಮನೆಗಳಲ್ಲಿ ಮತ್ತು ಮಕ್ಕಳ ಹೃದಯದಲ್ಲಿ ವಚನ ಸಾಹಿತ್ಯದ ಸಂಸ್ಕಾರ ಬೆಳೆಯುವಂತಾಗಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಆಕ್ಸ್ಫರ್ಡ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಜಿಲ್ಲಾಧಿಕಾರಿ ಟಿ.ಭೂಬಾಲನ್, ಜಿಪಂ ಸಿಇಓ ರಿಷಿ ಆನಂದ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೃಷಿಕೇಶ್ ಭಗವಾನ್, ಶಾಸಕರಾದ ವಿಠಲ್ ಕಟಕದೊಂಡ, ಮಹಾಪೌರರಾದ ಶ್ರೀಮತಿ ಹೊರ್ತಿ, ಮಾಜಿ ಶಾಸಕ ರಾಜು ಆಲಗೂರ, ಉಪ. ಮೇಯರ್ ದಿನೇಶ್ ಹಳ್ಳಿ, ಮುಖಂಡರಾದ ಗಂಗಾಧರ ಸಂಬಣ್ಣಿ, ರಾಜಶೇಖರ ಕೌಲಗಿ, ಜಿಎಂ ಕಟ್ಟಿ ಹಾಗೂ ಜಿಲ್ಲಾ ಮಟ್ಟದ ಎಲ್ಲ ಅಧಿಕಾರಿಗಳು ಹಾಗೂ ಬಸವ ಅಭಿಮಾನಿಗಳು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

