ತಿಕೋಟಾ: ಗ್ರಾಮಸ್ಥರ ಸಹಕಾರದಿಂದ ಅಭಿವೃದ್ಧಿ ಹೊಂದುತ್ತಿರುವ, ಉತ್ತಮ ಕಲಿಕಾ ವಾತಾವರಣ, ಅಗತ್ಯ ಮೂಲಭೂತ ಸೌಲಭ್ಯ ಹಾಗೂ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುತ್ತಿರುವ ತಾಲ್ಲೂಕಿನ ಜಾಧವನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಗ್ರಾಮೀಣವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಮೋದಿನಿ ಬಳೋಲಮಟ್ಟಿ ಬೇಟಿ ನೀಡಿ ಅಭಿನಂದನಾ ಪತ್ರ ವಿತರಿಸಿ ಶುಕ್ರವಾರ ಶಿಕ್ಷಕರಿಗೆ ಸನ್ಮಾನಿಸಿದರು.
ಗ್ರಾಮಸ್ಥರ ಹಾಗೂ ಶಿಕ್ಷಕರ ಸಹಕಾರದಿಂದ ನಿರ್ಮಾಣವಾದ ಶಾಲಾ ಗೇಟ್ (ದ್ವಾರಬಾಗಿಲು) ಉದ್ಘಾಟನೆಗೊಳಿಸಿ ಮಾತನಾಡಿದ ಬಳೋಲಮಟ್ಟಿ ಗಡಿಭಾಗದ ಹೆಚ್ಚಾಗಿ ಮರಾಠಾ ಜನಾಂಗ ಇರುವ ಈ ಪ್ರದೇಶದಲ್ಲಿ ಕನ್ನಡ ಶಾಲೆಯ ಅಭಿವೃದ್ಧಿ ಕಂಡು ಹರ್ಷವ್ಯಕ್ತಪಡಿಸಿದರು. ಶಾಲೆಯೂ ಸಂಸ್ಕಾರಯುತ ಉತ್ತಮ ಪರಿಸರ ಹೊಂದಿದ್ದು, ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಶಿಕ್ಷಕರು ಹಾಗೂ ಗ್ರಾಮಸ್ಥರು ಶ್ರಮಿಸಿದ್ದಾರೆ ಎಂದರು.
ಶಾಲೆಯ ಬದ್ರ ಬುನಾದಿಗೆ ಹಿರಿಯ ಶಿಕ್ಷಕ ಡಿ.ಎನ್.ಘೋಣಸಗಿ ಅವರು ಬಹಳ ಶ್ರಮಿಸಿದ್ದಾರೆ. ಎ.ಎಸ್. ಅನಂತಪೂರ ಗುರುಗಳು ಮಕ್ಕಳಿಗೆ ಕಲಿಸುವ ಯೋಗ, ಉಪನ್ಯಾಸ, ಭಗವದ್ಗೀತೆ ಅಭ್ಯಾಸ ಹಾಗೂ ಮಕ್ಕಳಿಗೆ ಜೀವನದ ಉತ್ತಮ ಮೌಲ್ಯಗಳ ಕಲಿಕೆ ಉಪಯುಕ್ತವಾಗಿದೆ. ಶಾಲೆಯ ಎಲ್ಲ ಸಿಬ್ಬಂದಿ ಮಕ್ಕಳಿಗೆ ಉತ್ತಮವಾದ ಶಿಕ್ಷಣ ನೀಡಲು ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಶಿಕ್ಷಕರ ಕುರಿತು ಶ್ಲಾಘಿಸಿದರು.
ಶಾಲೆಯ ಹಳೆಯ ವಿಧ್ಯಾರ್ಥಿ ಪೆಂಟರ್ ಗೋಪಾಲ ಪವಾರ ತನ್ನ ಕೈಚಳಕದಿಂದ ಶಾಲಾ ಗೋಡೆ, ನಾಮಫಲಕ ಹಾಗೂ ಚಿತ್ರಗಳಿಂದ ಶಾಲಾ ಅಂದ ಚಂದ ಹೆಚ್ಚಿಸಿದ್ದಕ್ಕಾಗಿ ಶಿಕ್ಷಣಾಧಿಕಾರಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಇಸಿಓ ಜಿ.ಟಿ.ಕಾಗವಾಡ, ಪ್ರಭು ಬಿರಾದಾರ, ಎ.ಎಸ್.ಪಂಚಾಳ, ಎಂ.ಎಂ.ಜೇವೂರ, ಡಿ.ಬಿ.ಪಾಂಡೆಗಾವಿ, ಜಿ.ಜಿ.ದೊಡ್ಡಿಹಾಳ, ಶಾಂತೇಶ ದಾಶ್ಯಾಳ, ಎಸ್.ಎಂ.ಮುದಕವಿ, ಪಯಾಜ್ ಗರಡಿಮನಿ, ಮುಖ್ಯೋಪಾಧ್ಯಾಯ ಎ.ಎಸ್.ಹಾಲಳ್ಳಿ, ಮಧುಕರ ಜಾಧವ, ಶಿವಪ್ಪ ಚಲವಾದಿ, ಪ್ರಶಾಂತ ಝಂಡೆ, ಜಾಲಿಂದ್ರ ಘಾಟಕೆ, ಉತ್ತಮ ಝಂಡೆ, ಜಾಲಿಂದ್ರ ಘಾಟಕೆ, ಗೊವಿಂದ ಘಾಟಕೆ, ಅಶೋಕ ನಿಂಬಾಳಕರ, ಎಸ್.ಜಿ.ಬಗಲಿ, ಶಿಲ್ಪಾ ಹಂಜಿ, ವಿ.ಎಂ.ಮುಳಗುಂದ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

