ಸಿಂದಗಿ: “ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಜೆಟ್ ಬಡವರ ಕಾಳಜಿಯುಳ್ಳದ್ದು. ಮಹಿಳೆಯರು, ಬಡವರು, ಅಲ್ಪಸಂಖ್ಯಾತರು, ರೈತರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಜನಕಲ್ಯಾಣಕ್ಕಾಗಿ ಬಜೆಟ್‌ನಲ್ಲಿ ವಿಶೇಷ ಅನುದಾನ ಘೋಷಿಸಿದ್ದು, ಇದು ಅಭಿವೃದ್ಧಿ ಪರವಾಗಿರುವ ಬಜೆಟ್ ಆಗಿದೆ. ಶಿಕ್ಷಣ,ಮೀನುಗಾರಿಕೆ, ಪ್ರವಾಸದ ಅಭಿವೃದ್ಧಿಗೆ ಅನುದಾನ ಕಾಯ್ದಿರಿಸಿದ್ದು, ಇದು ಬಡವರ ಪರವಾದ ಬಜೆಟ್ ಆಗಿದೆ. ಅಲ್ಲದೇ ವಿಜಯಪುರ ಜಿಲ್ಲೆಯ ಆಲಮೇಲದಲ್ಲಿ ತೋಟಗಾರಿಕೆ ಕಾಲೇಜು ಮಂಜೂರು ಮಾಡಲಾಗಿದ್ದು, ಈ ಭಾಗದ ರೈತರ ಬಹುದಿನದ ಆಸೆ ಈಡೇರಿಸಿದ ಮುಖ್ಯಮಂತ್ರಿ ಹಾಗೂ ಶಾಸಕ ಅಶೋಕ ಮನಗೂಳಿ ಅವರಿಗೂ ಧನ್ಯವಾದಗಳು.”
– ವೈ.ಸಿ.ಮಯೂರ
ವಿಜಯಪುರ ಜಿಲ್ಲಾ ಸಂಚಾಲಕರು, ದಲಿತ ಸಂಘರ್ಷ ಸಮಿತಿ

