ಸಿಂದಗಿ: ಪಟ್ಟಣದ ಯುವನಟ, ನಿರ್ದೇಶಕ, ನಿರ್ಮಾಪಕ ವಿಶ್ವಪ್ರಕಾಶ ಮಲಗೊಂಡ ಅವರ ಮಲಗೊಂಡ ಫಿಲಂ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣಗೊಂಡ ತುಷಾರ್ ಚಿತ್ರಕ್ಕೆ ಬಾಗಲಕೋಟೆಯ ಸಿದ್ದನಕೊಳ್ಳದಲ್ಲಿ ಜರುಗಿದ ೨೦೨೪ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾವೈಕ್ಯ ಸಾರುವ ಹಾಗೂ ಸಾಮಾಜಿಕ ಸಂದೇಶವುಳ್ಳ ಒಳ್ಳೆಯ ಚಿತ್ರ ಎಂದು ಪರಿಗಣಿಸಿ ಅವಾರ್ಡ್ ನೀಡಲಾಗಿದೆ.
ಇದೇ ಸಂದರ್ಭದಲ್ಲಿ ಶ್ರೀ ಸಿದ್ದನಕೊಳ್ಳ ಮಠದ ಡಾ.ಶಿವಕುಮಾರ ಸ್ವಾಮಿಗಳು, ಚಿತ್ರನಟ ಶೋಭರಾಜ್, ಕೆಜಿಎಫ್ ಸಿನಿಮಾ ಖ್ಯಾತಿಯ ಸಾಹಿತಿ ಹಾಗೂ ಚಿತ್ರ ನಿರ್ದೇಶಕ ಕಿನ್ನಾಳ ರಾಜ್, ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ, ಕೆಪಿಸಿಸಿ ಸದಸ್ಯೆ ರಕ್ಷಿತಾ ಇಟಿ, ಉದ್ಯಮಿ ಕಾಂಗ್ರೆಸ್ ಹಿರಿಯ ನಾಯಕ ಸಿದ್ದಣ್ಣ ಮೇಟಿ, ನಟ ನಿರ್ದೇಶಕ ನಿರ್ಮಾಪಕ ಡಾ.ಪ್ರಭು ಗಂಜಿಹಾಳ ಸೇರಿದಂತೆ ಅನೇಕರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

