ವಿಜಯಪುರ: ವಿಜಯಪುರ ತಾಲೂಕಿನ ಹೊನ್ನುಟಗಿ ಗ್ರಾಮದ ೫೫ ವರ್ಷದ ಪ್ರಕಾಶ ಸಂಗಪ್ಪ ಚೂರಿ ಎಂಬ ವ್ಯಕ್ತಿ ದಿನಾಂಕ : ೦೪-೦೫-೨೦೨೩ ರಿಂದ ಹೊನ್ನುಟಗಿಯಿಂದ ಕಾಣೆಯಾಗಿರುವ ಕುರಿತು ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾಣೆಯಾದ ವ್ಯಕ್ತಿ ಪತ್ತೆಗೆ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಕಾಣೆಯಾಗಿರುವ ವ್ಯಕ್ತಿಯು ೫.೮ ಎತ್ತರ, ಸಾಧಾರಣ ಮೈಕಟ್ಟು, ಕಪ್ಪು ಬಣ್ಣ ಕೋಲುಮುಖ, ಉದ್ದ ಮೂಗು, ಕುರುಚಲು ಗಡ್ಡ ಬಿಟ್ಟಿದ್ದು, ಕನ್ನಡ ಹಾಗೂ ಹಿಂದಿ ಭಾಷೆ ಬಲ್ಲವನಾಗಿದ್ದು, ಕಾಣೆಯಾದ ಸಂದರ್ಭದಲ್ಲಿ ಬಿಳಿ ಬಣ್ಣದ ಟೀ ಶರ್ಟ ಹಾಗೂ ಚಾಕಲೇಟ್ ಬಣ್ಣದ ಪ್ಯಾಂಟ್ ಧರಿಸಿದ್ದನು. ಈ ಚಹರೆಪಟ್ಟಿಯುಳ್ಳ ವ್ಯಕ್ತಿ ಪತ್ತೆಯಾದಲ್ಲಿ ಸಾರ್ವಜನಿಕರು ಪೊಲೀಸ್ ಅಧೀಕ್ಷಕರು ದೂ: ೦೮೩೫೨-೨೫೦೧೫೨, ಜಿಲ್ಲಾ ನಿಸ್ತಂತು ಕಚೇರಿ ದೂ: ೦೮೩೫೨-೨೫೦೮೪೪, ವಿಜಯಪುರ ಗ್ರಾಮೀಣ ಠಾಣೆ ದೂ: ೦೮೩೫೨-೨೫೦೯೨೩ ಸಂಖ್ಯೆಗೆ ಮಾಹಿತಿ ನೀಡುವಂತೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

