ವಿಜಯಪುರ: ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ(ಇಗ್ನೊ) ಪ್ರಸಕ್ತ ವರ್ಷ 2024ರ ಮೊದಲ ಭಾಗ(ಜನೇವರಿ) ಪದವಿ ಮತ್ತು ಸ್ನಾತಕೋತ್ತರ ಪದವಿಗಳಿಗೆ ಹಾಗೂ ಸರ್ಟಿಫಿಕೆಟ್ ಕೋರ್ಸುಗಳಿಗೆ ಪ್ರವೇಶಗಳು ಪ್ರಾರಂಭವಾಗಿದ್ದು, 31.01.2024ರ ಒಳಗಾಗಿ ಪ್ರವೇಶ ಪಡೆಯಬಹುದಾಗಿದೆ ಎಂದು ಇಗ್ನೊ ಅಧ್ಯಯನ ಕೇಂದ್ರದ ಸಂಯೋಜನಾಧಿಕಾರಿ ಡಾ. ಮಂಜುನಾಥ ಕೋರಿ ತಿಳಿಸಿದ್ದಾರೆ.
ಇಗ್ನೊದಲ್ಲಿ ವರ್ಷಕ್ಕೆ ಎರಡು ಬಾರಿ ಯಾವುದೇ ಪದವಿ ಮತ್ತು ಸ್ನಾತಕೋತ್ತರ ಪದವಿ ಹಾಗೂ ಸರ್ಟಿಫಿಕೇಟ್ ಕೋರ್ಸುಗಳಿಗೆ ಪ್ರವೇಶ ಪಡೆಯಲು ಅವಕಾಶವಿದೆ. ಈಗ ಮೊದಲ ಹಂತದ ಪ್ರವೇಶಕ್ಕೆ ನೋಂದಣಿ ಆರಂಭವಾಗಿವೆ ಎಂದು ಅವರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಇಗ್ನೊ ಅದ್ಯಯನ ಕೇಂದ್ರ, 1307, ಬಿ.ಎಲ್.ಡಿ.ಇ ಸಂಸ್ಥೆಯ ಜೆ.ಎಸ್.ಎಸ್ ಶಿಕ್ಷಣ ಮಹಾವಿದ್ಯಾಲಯ, ರಾಮ ಮಂದಿರ ರಸ್ತೆ, ಎಸ್. ಎಸ್. ಕ್ಯಾಂಪಸ್ ವಿಜಯಪುರ, ಮೊಬೈಲ್ ಸಂಖ್ಯೆ- 9980691291 ಸಂಪರ್ಕಿಸಬಹುದಾಗಿದೆ. ಅಲ್ಲದೇ, ಪ್ರವೇಶ ಬಯಸುವವರು www.ignou.ac.in ನಲ್ಲಿ ಲಾಗಿನ್ ಆಗಿ ಆನಲೈನ್ ಮೂಲಕವೂ ನೋಂದಣಿ ಮಾಡಿಸಬಹುದಾಗಿದೆ ಎಂದು ಡಾ. ಮಂಜುನಾಥ ಕೋರಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
ಸ್ನಾತಕೋತ್ತರ ಪದವಿ & ಸರ್ಟಿಫಿಕೆಟ್ ಕೋರ್ಸುಗಳಿಗೆ ಪ್ರವೇಶಗಳು ಪ್ರಾರಂಭ
Related Posts
Add A Comment
