ದೇವರಹಿಪ್ಪರಗಿ: ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದರ ೧೬೧ನೇ ಜಯಂತಿ ಅಂಗವಾಗಿ ಭಾವಚಿತ್ರಕ್ಕೆ ಪೂಜೆ ಹಾಗೂ ಪುಷ್ಪನಮನ ಸಲ್ಲಿಸಿ ರಾಷ್ಟ್ರೀಯ ಯುವ ದಿನಾಚರಣೆ ಆಚರಿಸಲಾಯಿತು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಯುವರೆಡ್ ಕ್ರಾಸ್, ಸಾಂಸ್ಕೃತಿಕ ವಿಭಾಗ, ಎನ್‌ಎಸ್‌ಎಸ್ ಘಟಕ ಮತ್ತು ಐಕ್ಯೂಸಿ ವಿಬಾಗದ ಸಹಯೋಗದಲ್ಲಿ ಜರುಗಿದ ಕಾರ್ಯಕ್ರಮವನ್ನು ಪ್ರಾರ್ಥನೆಯೊಂದಿಗೆ ಪ್ರಾರಂಭಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ ಬಿಜಾಪುರ ಮಾತನಾಡಿ, ಸ್ವಾಮಿ ವಿವೇಕಾನಂದರ ವಿಚಾರಧಾರೆಗಳನ್ನು ಮೈಗೂಡಿಸಿಕೊಂಡು ವಿದ್ಯಾರ್ಥಿಗಳು ಯುವಭಾರತವನ್ನು ನಿರ್ಮಿಸಲು ಮುಂದಾಗಬೇಕು. ವಿವೇಕಾನಂದರು ತಮ್ಮ ಚಿಂತನೆಗಳಿಂದ ಇಡೀ ಜಗತ್ತಿಗೆ ಮಾದರಿಯಾಗಿ, ಭವ್ಯ ಭಾರತದ ಹೆಸರನ್ನು ಅಜರಾಮರವಾಗಿರಿಸಿದ್ದಾರೆ. ಇಂತಹ ಮಹಾನ್ ಚೇತನರ ತತ್ವಾದರ್ಶಗಳು ಯುವಜನತೆ ಅಳವಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಅಶೋಕ ಹೆಗಡೆ ವಹಿಸಿದ್ದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಯುವ ದಿನದ ಕುರಿತು ವಿವಿಧ ವಿಷಯಯಗಳ ಮೇಲೆ ಲಘು ಭಾಷಣಣವನ್ನು ಏರ್ಪಡಿಸಿ, ಬಹುಮಾನ ಮತ್ತು ಪ್ರಮಾಣ ಪತ್ರವನ್ನು ವಿತರಿಸಲಾಯಿತು.
ಉಪನ್ಯಾಸಕರುಗಳಾದ ಆಕ್ರಮ್ ಪಾಷಾ, ಡಾ.ದಾಕ್ಷಾಯಣಮ್ಮ ಎನ್.ಸಿ, ಶಿವಪುತ್ರ ಜಾಲವಾದಿ, ಪ್ರೇಮಕುಮಾರಿ ಪಿ. ದೈಹಿಕ ಶಿಕ್ಷಣ ನಿರ್ದೇಶಕ ಡಾ.ಅಶೋಕಕುಮಾರ ಜಾಧವ, ತುಳಸಿಗಿರೀಶ್ ಫೌಂಡೇಶನ್ ಸದಸ್ಯ ಮೋಹನ್ ಚವ್ಹಾಣ್, ರವಿ ರಾಠೋಡ್ ಸೇರಿದಂತೆ ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

