ಸಿಂದಗಿಯಲ್ಲಿ ವಿಜಯಪುರ ಜಿಲ್ಲಾ ಪೊಲೀಸ್ ಅಧೀಕ್ಷಕ ಋಷಿಕೇಶ ಸೋನಾವಣಿ ಮಾಹಿತಿ
ಸಿಂದಗಿ: ಪಟ್ಟಣದ ಡಿ. ೨೪ ರಂದು ರಾತ್ರಿ ೯ ಗಂಟೆಯ ಸುಮಾರಿಗೆ ಯಾರೋ ಕಳ್ಳರು ಸಿಂದಗಿ ಪಟ್ಟಣದ ಹಳೇ ಬಜಾರದ ಬಸವಣ್ಣ ದೇವರ ಗುಡಿಯ ಹತ್ತಿರ ಇರುವ ಶಾಂತವೀರಪ್ಪ ತಂದೆ ಗುರುಬಸಪ್ಪ ವಾರದ ಎಂಬುವವರ ಅಂಗಡಿಯಲ್ಲಿ ಒಟ್ಟು ೪೦,೮೭,೮೮೦/-ರೂ ಕಿಮ್ಮತ್ತಿನ ಸಿಗರೇಟ ಕಳ್ಳತನ ಮಾಡಿಕೊಂಡು ಹೋಗಿದ್ದು, ಪತ್ತೆ ಮಾಡಿಕೊಡಬೇಕು ಡಿ.೨೫ ರಂದು ಸಿಂದಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರನ್ವಯ ಖಚಿತ ಮಾಹಿತಿ ಮೇರೆಗೆ ಒಬ್ಬ ಆರೋಪಿಯನ್ನು ಬಂಧಿಸಿ ಆರೋಪಿತನಿಂದ ರೂ.೩೭ ಲಕ್ಷ ಹಾಗೂ ಪ್ರಕರಣದಲ್ಲಿ ಉಪಯೋಗಿಸಿದ ವಾಹನ ಮತ್ತು ವಸ್ತುಗಳನ್ನು ವಶಪಸಿಕೊಳ್ಳಲಾಗಿದೆ ಎಂದು ವಿಜಯಪುರ ಪೊಲೀಸ್ ಅಧೀಕ್ಷಕ ಋಷಿಕೇಶ ಸೋನಾವಣಿ ತಿಳಿಸಿದರು.
ಶುಕ್ರವಾರ ಪಟ್ಟಣದ ಪೊಲೀಸ ಠಾಣಾ ಆವರಣದಲ್ಲಿ ಆರೋಪಿತನನ್ನು ದಸ್ತಗೀರ ಮಾಡಿ ವಶಪಡಿಸಿಕೊಂಡ ವಸ್ತುಗಳನ್ನು ಪ್ರದರ್ಶಿಸಿ ಮಾತನಾಡಿದ ಅವರು, ವಿಜಯಪುರ ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಮನಗೌಡ ಹಟ್ಟಿ, ಇಂಡಿ ಪೊಲೀಸ್ ಉಪಾಧೀಕ್ಷಕ ಎಚ್.ಎಸ್.ಜಗದೀಶ ರವರ ಮಾರ್ಗದರ್ಶನದಲ್ಲಿ ಸಿಂದಗಿ ವೃತ್ತದ ಸಿ.ಪಿ.ಐ ಡಿ ಹುಲುಗಪ್ಪ, ಇವರ ನೇತೃತ್ವದಲ್ಲಿ ಸಿಂದಗಿ ಠಾಣೆಯ ಪಿ.ಎಸ್.ಐ ಭೀಮಪ್ಪ ರಬಕವಿ, ಅವರು ಗುನ್ನೆ ನಂ: ೨೭೭/೨೦೨೩, ಕಲಂ: ೪೫೪, ೪೫೭, ೩೮೦ ಐಪಿಸಿ ಪ್ರಕಾರ ಪ್ರಕರಣ ದಾಖಲಾಗಿಸಿಕೊಂಡು ಪ್ರಕರಣವನ್ನು ಕಲೆ ಹಾಕುವ ಮೂಲಕ ಖಚಿತ ಮಾಹಿತಿಯ ಮೆರೆಗೆ ಅರವಿಂದ ಅಂಗಡಿ, ಪಿ.ಎಸ್.ಐ (ಅ.ವಿ) ಮತ್ತು ಸಿಬ್ಬಂದಿ ಜನರಾದ ಜೆ.ಎಸ್.ಗಲಗಲಿ, ಎಚ್.ಎಸ್.ಐಗಲ, ಎಸ್.ಆರ್.ಚವ್ಹಾಣ, ಆರ್.ಎಲ್.ಕಟ್ಟಮನಿ, ಪಿ.ಕೆ.ನಾಗರಾಳ, ಎಸ್.ಎಸ್.ರೂಂಡಿ, ಬಿ.ಜೆ.ಮುಳಸಾವಳಗಿ, ಜಿ.ಐ.ಈಟೇರಿ, ಬಿ.ಎಲ್.ಪಟ್ಟಿದ. ಎಸ್.ಪಿ.ಹುಣಶಿಕಟ್ಟಿ, ಎಸ್.ಎಸ್. ನಾಟಕಾರ, ವಿ.ಬಿ.ಡಂಬಳ, ಎಲ್ಲರೂ ಸಿಂದಗಿ ಪೊಲೀಸ್ ಠಾಣೆಯ, ಎಸ್.ಜೆ. ಪಾಟೀಲ, ಎಸ್.ಎನ್. ಸೌದಿ ಆಲಮೇಲ ಪಿ.ಎಸ್ ರವರನ್ನೊಳಗೊಂಡ ತಂಡ ರಚನೆ ಮಾಡಿ ತನಿಖೆಯಲ್ಲಿ ಆರೋಪಿತರು ಅಂತರರಾಜ್ಯ ಕಳ್ಳರ ಗ್ಯಾಂಗಿನವರಿರುವ ಬಗ್ಗೆ ಖಚಿತ ಮಾಹಿತಿ ದೊರೆತ ಮೇರೆಗೆ ಅವರನ್ನು ಪತ್ತೆ ಮಾಡುವ ಕುರಿತು ಸಿಂದಗಿ ಠಾಣೆಯ ಪಿ.ಎಸ್.ಐ ಭೀಮಪ್ಪ ಎಮ್ ರಬಕವಿ ಮತ್ತು ಸಿಬ್ಬಂದಿಗಳಾದ ಆರ್.ಎಲ್.ಕಟ್ಟಿಮನಿ, ಪಿ.ಕೆ.ನಾಗರಾಳ, ಎಸ್.ಎಸ್.ಕೊಂಡಿ ಇವರು ಜ.೦೭ ರಂದು ರಾಜಸ್ಥಾನದಲ್ಲಿ ಆರೋಪಿ ಚಿತೇಂದ್ರಕುಮಾರ ತಂದೆ ಮಾಂಗಿಲಾಲ ಗೆಲ್ಲೋತ್, ವಯಾ: ೨೬ ವರ್ಷ, ಈತನಿಗೆ ವಶಕ್ಕೆ ಪಡೆದುಕೊಂಡು ವಿಚಾರಣೆಯಲ್ಲಿ ಆರೋಪಿತನು ತಾನು ಮತ್ತು ಪ್ರಕಾಶ ತಂದೆ ದೀಪರಾಮ, ಸಾ: ರಾಜೇಂದ್ರನಗರ, ರಾಜ್ಯ: ರಾಜಸ್ಥಾನ. ಗುರುಪ್ರೀತಸಿಂಗ ತಂದೆ ಪಲ್ವಿಂದ್ರಸಿಂಗ, ರಾಜ್ಯ ಪಂಜಾಬ ಮೂವರು ಕೂಡಿಕೊಂಡು ಅಂಗಡಿಯಲ್ಲಿ ಸಿಗರೇಟ ಕಳ್ಳತನ ಮಾಡಿ, ಬೆಂಗಳೂರಿನಲ್ಲಿ ಮಾರಾಟ ಮಾಡಿದ ಬಗ್ಗೆ ಒಪ್ಪಿಕೊಂಡಿದ್ದರಿಂದ ಆತನಿಗೆ ದಸ್ತಗೀರ ಮಾಡಿ ರೂ. ೩೭ ಲಕ್ಷ ಗಳನ್ನು ಮತ್ತು ಕೃತ್ಯದ ಕಾಲಕ್ಕೆ ಉಪಯೋಗಿಸಿದ್ದ ಮಾರುತಿ ಸುಜುಕಿ ಇಕೋ ವ್ಯಾನ (ಕಾರ್) ನಂ:ಕೆಎ-೦೫/ಎಮ್‌ಟೆ-೮೩೨೬ ನೇದ್ದನ್ನು ವಶಪಡಿಸಿಕೊಳ್ಳಲಾಗಿದೆ.
ಈ ಆರೋಪಿತರು ರಾಜ್ಯದ ಬೇರೆ ಬೇರೆ ಪೊಲೀಸ್ ಠಾಣೆ ಹದ್ದಿಗಳಲ್ಲಿಯೂ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದು ವಿಚಾರಣೆಯಲ್ಲಿ ತಿಳಿದು ಬಂದಿದೆ ಎಂದು ತಿಳಿಸಿದ ಅವರು, ಈ ಪ್ರಕರಣದ ತನಿಖೆಯಲ್ಲಿ ಕಾರ್ಯಾಚರಣೆ ಮಾಡಿ ಈ ಕೇಸನ್ನು ಬೇಧಿಸಿ ಆರೋಪಿತನನ್ನು ದಸ್ತಗೀರ ಮಾಡಿ ಕಳುವಿನ ಸ್ವತ್ತನ್ನು ವಶಪಡಿಸಿಕೊಂಡಿರುವ ಪೋಲಿಸ್ ಅಧಿಕಾರಿಗಳ ಮತ್ತು ಸಿಬ್ಬಂದಿ ಅವರ ಕಾರ್ಯ ಮೆಚ್ಚುವಂತದ್ದು ಎಂದು ಪ್ರಶಂಸೆ ವ್ಯಕ್ತಪಡಿಸಿದರು.

