ವಿಜಯಪುರ: ಯುವಕರು ದೇಶದ ಪ್ರಗತಿಗೆ ಸಹಾಯವಾಗುವ ಸಾಧನೆಗಳನ್ನು ಮಾಡಬೇಕು ಎಂದು ಎಸ್. ಎಸ್. ಪಿಯು ಕಾಲೇಜಿನ ಉಪನ್ಯಾಸಕ ಅಮರೇಶ ಸಾಲಕ್ಕಿ ಹೇಳಿದ್ದಾರೆ.
ತಿಕೋಟಾದಲ್ಲಿ ಬಿ.ಎಲ್.ಡಿ.ಇ, ಸಂಸ್ಥೆಯ ಕಾಲೇಜ್ ಆಫ್ ನರ್ಸಿಂಗ್ ಕಾಲೇಜಿನಲ್ಲಿ ಇಂದು ಶುಕ್ರವಾರ ಸ್ವಾಮಿ ವಿವೇಕಾನಂದರ 160ನೇ ಜಯಂತಿ ಅಂಗವಾಗಿ ನಡೆದ ರಾಷ್ಟ್ರೀಯ ಯುವ ದಿನಾಚಾರಣೆಯಲ್ಲಿ ಅವರು ಉಪನ್ಯಾಸ ನೀಡಿದರು.
ಸ್ವಾಮಿ ವಿವೇಕಾನಂದರ ಜೀವನ, ಆದರ್ಶ ಮತ್ತು ತತ್ವಗಳ ಕುರಿತು ಮಾತನಾಡಿದ ಅವರು, ದೇಶದ ಪ್ರಗತಿಗೆ ಸ್ವಾಮಿ ವಿವೇಕಾನಂದರ ನೀಡಿರುವ ಸಲೆಹಗಳು ಇಂದಿಗೂ ಪ್ರಸ್ತುತವಾಗಿವೆ. ಕ್ರಿಯಾಶಕ್ತಿ, ಇಚ್ಛಾಶಕ್ತಿ, ಮತ್ತು ಜ್ಞಾನಶಕ್ತಿ ಈ ಮೂರನ್ನು ಯಾರು ಸಮರ್ಥವಾಗಿ ಅರ್ಥ ಮಾಡಿಕೊಳ್ಳಬೇಕು. ಅದಕ್ಕೆ ತಕ್ಕಂತೆ ಜೀವನ ನಡೆಸಬೇಕು. ಸ್ವಾಮಿ ವಿವೇಕಾನಂದರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮುಂದುವರೆಯಬೇಕು ಎಂದು ಹೇಳಿದರು.
ಸ್ವಾಮಿ ವಿವೇಕಾನಂದ ಕುರಿತು ಆಯೋಜಿಸಲಾಗಿದ್ದ ಭಾಷಣ ಸ್ಪರ್ಧೆಯ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯ ಡಾ. ಪ್ರಕಾಶ ಸಿದ್ದಾಪುರ, ಕಾರ್ಯಕ್ರಮದ ಸಂಯೋಜಕ ಆಕಾಶ ಜಾಧವ, ಸಂತೋಷ ಇಂಡಿ, ಸಿದ್ದು ತಡಲಗಿ, ಬಸಲಿಂಗಮ್ಮ ಹಯ್ಯಾಳ, ಸಿದ್ದಮ್ಮ ನವದಗಿ, ಪ್ರಶಾಂತ ಈಶ್ವರ, ರವಿ ದೇಸಾಯಿ, ಸಾಹೇಬಗೌಡ ಬಿರಾದರ, ಶೋಭಾ ಜುಮನಾಳ, ಆದಿಲ್ ಜಮಾದಾರ ಮುಂತಾದವರು ಉಪಸ್ಥಿತರಿದ್ದರು.
ಗಿತಾಂಜಲಿ ಕೋಣ್ಣೂರು ಸ್ವಾಗತಿಸಿದರು. ಲಕ್ಷ್ಮಿ ಪಾಟೀಲ ವಂದಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

