ದೇವರಹಿಪ್ಪರಗಿ: ರೈತ ಸಮುದಾಯದ ಹಬ್ಬವಾದ ಎಳ್ಳು ಅಮವಾಸ್ಯೆಯಂದು ಪಟ್ಟಣ ಸೇರಿದಂತೆ ತಾಲ್ಲೂಕಿನದಾದ್ಯಂತ ರೈತರು ತಮ್ಮ ಆಪ್ತರು, ಮಿತ್ರರೊಂದಿಗೆ ಹೊಲ, ತೋಟಗಳಿಗೆ ತೆರಳಿ ಬನ್ನಿವೃಕ್ಷಕ್ಕೆ ಪೂಜೆ ಸಲ್ಲಿಸಿ, ಚರಗ ಚಲ್ಲಿ ಭೋಜನ ಸವಿದರು.
ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಅಮವಾಸ್ಯೆಯ ಸಂಭ್ರಮ ಬೆಳಗಿನಿಂದಲೇ ಕಂಡು ಬಂತು. ಹಿಂದೆ ಎತ್ತಿನಗಾಡಿಗಳ ಮೂಲಕ ಹೊಲಗಳಿಗೆ ತೆರಳುತ್ತಿದ್ದ ರೈತಕುಟುಂಬಗಳು ಈಗ ವಿರಳವಾಗಿ ಬಹುತೇಕರು ಕಾರು, ಜೀಪ, ಟ್ರ್ಯಾಕ್ಟರ್ ಸೇರಿದಂತೆ ವಿವಿಧ ವಾಹನಗಳ ಮೂಲಕ ತಮ್ಮ ತೋಟಗಳಿಗೆ ಪ್ರಯಾಣ ಬೆಳೆಸಿದ್ದು ಕಂಡು ಬಂತು. ಮಧ್ಯಾನ್ಹದ ಸಮಯಕ್ಕೆ ಹೊಲದ ಬನ್ನಿಮರಗಳಿಗೆ ಪೂಜೆ ಸಲ್ಲಿಸಿ ನಂತರ ಚರಗ ಚಲ್ಲಿದ ಮೇಲೆ ಸಜ್ಜೆ ರೋಟ್ಟಿ, ಮೋಸರು, ಸಜ್ಜೆ ಕಡಬು, ಶೇಂಗಾ ಹೋಳಿಗೆ ಸಹಿತ ಮೃಷ್ಟಾನ್ನ ಭೋಜನ ಸವಿದರು.
ಈ ಬಾರಿ ಮಳೆಗಾಲ ಉತ್ತಮವಾಗಿಲ್ಲದ ಕಾರಣ ಎರೆ ಹೊಲಗಳಲ್ಲಿ ಹಸಿಕಡಲೆ, ಜೋಳ ಬಹುತೇಕ ಕಾಣದಂತಾಗಿದೆ. ಅದಾಗ್ಯೂ ಸಂಪ್ರದಾಯದಂತೆ ರೈತ ಸಮುದಾಯ ಮಾತ್ರ ಮಕ್ಕಳು ಕುಟುಂಬ ಸಹಿತ ಎಳ್ಳು ಅಮವಾಸ್ಯೆಯಂದು ಭೂತಾಯಿಗೆ ಪೂಜೆ ಸಲ್ಲಿಸಿ, ನೈವಿಧ್ಯ ಅರ್ಪಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

