ವಿಜಯಪುರ: ನಗರದ ಕಾಲೇಬಾಗ ನಿವಾಸಿಯಾದ ೨೪ ವರ್ಷದ ರುಕ್ಮಿಣಿ ಗಂ.ಯಲ್ಲಪ್ಪ ಬೇನೂರ ಎಂಬ ಮಹಿಳೆ ಹಾಗೂ ೮ ವರ್ಷದ ಮುತ್ತು ಯಲ್ಲಪ್ಪ ಬೇನೂರ ಎಂಬ ಮಗನೊಂದಿಗೆ ಕಾಣೆಯಾಗಿರುವ ಕುರಿತು ವಿಜಯಪುರ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾಣೆಯಾದ ಮಹಿಳೆ ಹಾಗೂ ಮಗುವಿನ ಪತ್ತೆಗೆ ಪೊಲೀಸ್ ಇನ್ಸ್ಪೆಕ್ಟರ್ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಕಾಣೆಯಾಗಿರುವ ಮಹಿಳೆಯು ಅಂದಾಜು ೫.೨ ಎತ್ತರ, ಸಾಧಾರಣ ಮೈಕಟ್ಟು, ಕೋಲುಮುಖ, ಗೋಧಿಬಣ್ಣ, ಕನ್ನಡ ಭಾಷೆ ಬಲ್ಲವಳಾಗಿದ್ದು, ಈ ಚಹರೆಪಟ್ಟಿಯುಳ್ಳವರು ಪತ್ತೆಯಾದಲ್ಲಿ ಸಾರ್ವಜನಿಕರು ಪೊಲೀಸ್ ಅಧೀಕ್ಷಕರು ದೂ: ೦೮೩೫೨-೨೫೦೧೫೨, ಜಿಲ್ಲಾ ನಿಸ್ತಂತು ಕಚೇರಿ ದೂ: ೦೮೩೫೨-೨೫೦೮೪೪, ಮಹಿಳಾ ಪೊಲೀಸ್ ಠಾಣೆ ಮೊ: ೯೪೮೦೮೦೪೨೭೦ ಸಂಖ್ಯೆಗೆ ಮಾಹಿತಿ ನೀಡುವಂತೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

